ಸ್ಯಾಂಡಲ್‌ವುಡ್‌ನಲ್ಲಿ ರಿಲೀಸ್‌ಗೆ ಸಿದ್ಧವಾಗುತ್ತಿದೆ ‘ಫ್ಯಾಮಿಲಿ ಡ್ರಾಮ’ ಎನ್ನುವ ಹೊಸ ಸಿನಿಮಾ. ಲೋಕಸಭೆಯ ಚುನಾವಣೆಯ ಬಿಸಿಯ ನಡುವೆಯೇ ಚಿತ್ರತಂಡ ಟ್ರೇಲರ್‌ ಬಿಡುಗಡೆ ಮಾಡಿದೆ. ಆಕರ್ಷ್‌ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ಬಹುತೇಕ ಹೊಸ ಕಲಾವಿದರೇ ಇದ್ದಾರೆ ಎನ್ನುವುದು ವಿಶೇಷ.

ಬಹುತೇಕ ಮಂದಿ ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾ ‘ಫ್ಯಾಮಿಲಿ ಡ್ರಾಮ’. ಆರ್ಕಷ್‌ ಅವರ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಈ ನಿರ್ದೇಶಕನಿಗೆ ಚಿತ್ರರಂಗ ಹೊಸದೇನಲ್ಲ. ‘ಫ್ಯಾಮಿಲಿ ಡ್ರಾಮ’ ಒಂದು ಡಾರ್ಕ್ ಕಾಮಿಡಿ ಚಿತ್ರ. ಮುಗ್ದ ಕುಟುಂಬವೊಂದು ಕೊಲೆ ಮಾಡಿ ಸಂಕಷ್ಚಕ್ಕೆ ಸಿಲುಕುವ ಕಥೆಯೇ ‘ಫ್ಯಾಮಿಲಿ ಡ್ರಾಮ’. ಸಾಕಷ್ಟು ಹೊಸತನದೊಂದಿಗೆ, ವಿಭಿನ್ನವಾಗಿ, ಕ್ರಿಯಾತ್ಮಕವಾಗಿ ಸಿನಿಮಾ ಮಾಡಲಾಗಿದೆಯಂತೆ. ‘ಕಾಂತಾರ’ ನಟ ರಿಷಭ್‌ ಶೆಟ್ಟಿ ಅವರ ತಂಡದಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡಿರುವ ಯುವ ನಿರ್ದೇಶಕ ಆಕರ್ಷ್‌, ಸದ್ಯ ರಿಲೀಸ್‌ಗೆ ರೆಡಿಯಾಗಿರುವ ‘ಲಾಫಿಂಗ್ ಬುದ್ದ’ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಒಂದಿಷ್ಟು ಕಿರುಚಿತ್ರಗಳನ್ನ ಮಾಡಿದ್ದಾರೆ. ಹಾಗಂತ ಸಿನಿಮಾರಂಗ ಹೊಸದೇನಲ್ಲ.

ಡಾರ್ಕ್ ಕಾಮಿಡಿ ‘ಫ್ಯಾಮಿಲಿ ಡ್ರಾಮ’ ಚಿತ್ರದ ಪೋಸ್ಟರ್‌ ಹಾಗೂ ಟ್ರೇಲರ್‌ ತುಂಬಾ ಕ್ರಿಯಾತ್ಮಕವಾಗಿ ಮೂಡಿ ಬಂದಿದ್ದು, ನೋಡುಗರಲ್ಲಿ ಕೂತುಹಲ ಹೆಚ್ಚಿಸಿದೆ. ಸಿನಿಮಾದ ಕಂಟೆಂಟ್ ಜೊತೆಗೆ ತಾಂತ್ರಿಕ ವಿಚಾರಗಳು ಸಹ ಗಮನ ಸೆಳೆಯುತ್ತಿದೆ. ಫಿಲಿಫೈನ್ಸ್‌ನ ಕ್ರಿಯೇಟಿವ್ ಡಿಸೈನರ್ ಬಳಿ ‘ಫ್ಯಾಮಿಲಿ ಡ್ರಾಮ’ ಚಿತ್ರದ ಪೋಸ್ಟರ್ ಡಿಸೈನ್ ಮಾಡಿಸಿರುವುದು ವಿಶೇಷವಾಗಿದೆ. ರೆಟ್ರೋ ಶೈಲಿಯಲ್ಲಿ ಡಿಸೈನ್‌ಗಳನ್ನು ನೋಡಬಹುದು. ಈ ಸಿನಿಮಾದಲ್ಲಿ ‘ಆಚಾರ್ ಆಂಡ್ ಕೋ’ ಸಿನಿಮಾದ ನಿರ್ದೇಶಕಿ ಸಿಂಧು ಶ್ರೀನಿವಾಸ್ ಮೂರ್ತಿ, ‘ಡೇರ್ ಡೆವಿಲ್ ಮುಸ್ತಾಫ’ ಸಿನಿಮಾದಲ್ಲಿ ನಟಿಸಿರುವ ಅಭಯ್, ಪೂರ್ಣ ಮೈಸೂರು ಹಾಗೂ ಅನನ್ಯ ಅಮರ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ‘ಆಚಾರ್ ಅಂಡ್ ಕೋ’ ಬಳಿಕ ಸಿಂಧು ಒಪ್ಪಿಕೊಂಡ ಚಿತ್ರ ಇದಾಗಿದೆ. ಚೇತನ್ ಅಮಯ್ಯ ಸಂಗೀತ ಸಂಯೋಜನೆ ಮಾಡಿದ್ದು, ಇವತ್ತಿನ ಕಾಲಘಟ್ಟದ ಕಥೆಯಾದರೂ ಸಂಗೀತ ರೆಟ್ರೋ ಶೈಲಿಯಲ್ಲಿ ಇರುವುದು ಈ ಸಿನಿಮಾದ ವಿಶೇಷವಾಗಿದೆ.

LEAVE A REPLY

Connect with

Please enter your comment!
Please enter your name here