ಉತ್ತರ ಪ್ರದೇಶ ಅಯೋಧ್ಯೆಯಲ್ಲಿ ನಿನ್ನೆ ನಡೆದ ರಾಮ ಪ್ರಾಣ ಪ್ರತಿಷ್ಠಾಪನೆಯಲ್ಲಿ ದೇಶದ ಹಲವೆಡೆಯಿಂದ ನೂರಕ್ಕೂ ಹೆಚ್ಚು ಸಿನಿಮಾ ತಾರೆಯರು ಪಾಲ್ಗೊಂಡು ಸಮಾರಂಭವನ್ನು ಕಣ್ತುಂಬಿಕೊಂಡರು. ಕನ್ನಡ ಸಿನಿಮಾ ನಟ, ನಿರ್ದೇಶಕ ರಿಷಭ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಅಯೋಧ್ಯೆಯ ರಾಮಮಂದಿರದ ಪ್ರತಿಷ್ಠಾಪನೆ ಅಂಗವಾಗಿ ಅಮಿತಾಭ್ ಬಚ್ಚನ್, ರಜನೀಕಾಂತ್, ಅಭಿಷೇಕ್ ಬಚ್ಚನ್, ಆಲಿಯಾ ಭಟ್ – ರಣಬೀರ್ ಕಪೂರ್, ವಿಕ್ಕಿ ಕೌಶಲ್ – ಕತ್ರಿನಾ ಕೈಫ್, ರಿಷಬ್ ಶೆಟ್ಟಿ – ಪ್ರಗತಿ ಶೆಟ್ಟಿ, ನಿಖಿಲ್ ಗೌಡ, ಚಿರಂಜೀವಿ, ರಾಮ ಚರಣ್, ಹೇಮಾ ಮಾಲಿನಿ, ಪವನ್ ಕಲ್ಯಾಣ್, ಶಂಕರ್ ಮಹದೇವನ್, ಮಧುರ್ ಭಂಡಾರ್ಕರ್, ಸುಭಾಷ್ ಘಾಯ್, ಶೆಫಾಲಿ ಶಾ, ವಿಪುಲ್ ಶಾ, ರಣದೀಪ್ ಹೂಡಾ, ಲಿನ್ ಲೈಶ್ರಾಮ್, ಆದಿನಾಥ್ ಮಂಗೇಶ್ಕರ್, ಅನು ಮಲಿಕ್, ಸೋನು ನಿಗಮ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಮತ್ತು ಕಂಗನಾ ಸೇರಿದಂತೆ ದೇಶದ ನೂರಕ್ಕೂ ಹೆಚ್ಚು ಸಿನಿಮಾ ತಾರೆಗಳು ಉತ್ತರ ಪ್ರದೇಶದಲ್ಲಿ ಜರುಗಿದ ರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
https://www.instagram.com/p/C2Z4C9FPeim/?utm_source=ig_web_copy_link&igsh=MzRlODBiNWFlZA==
‘ಜಗತ್ತಿನಾದ್ಯಂತ ಇರುವ ಎಲ್ಲಾ ಶ್ರೀರಾಮನ ಭಕ್ತರಿಗೆ ಇದೊಂದು ಸ್ಮರಣಿಯ ದಿನ. ನೂರಾರು ವರ್ಷಗಳ ಕಾಯುವಿಕೆಯ ನಂತರ ರಾಮ್ ಲಲ್ಲಾ ಅಯೋಧ್ಯೆಯ ಭವ್ಯವಾದ ದೇವಾಲಯದ ತನ್ನ ನಿವಾಸಕ್ಕೆ ಹಿಂದಿರುಗಿದ್ದಾನೆ. ಈ ಪವಿತ್ರ ದಿನದಂದು ನಾವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶುಭ ಹಾರೈಸುತ್ತೇವೆ’ ಎಂದು ಅಕ್ಷಯ್ ಶುಭಾಶಯ ತಿಳಿಸಿದ್ದಾರೆ. ಕಂಗನಾ ಈ ಕುರಿತು, ‘ಇದೊಂದು ದೈವಿಕ ಅನುಭವ. ಅಭಿವೃದ್ಧಿಯ ಬಗ್ಗೆ ಮಾತನಾಡಿದರೆ, ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಉತ್ತರ ಪ್ರದೇಶವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಅಭಿವೃದ್ಧಿಯ ದೃಷ್ಟಿಯಿಂದ ಮಾತ್ರವಲ್ಲದೆ ಆಧ್ಯಾತ್ಮಿಕತೆಯಲ್ಲೂ ಸಹ ನಮ್ಮ ರಾಮ್ ಲಲ್ಲಾ ಇಡೀ ಜಗತ್ತಿಗೆ ಮಾರ್ಗದರ್ಶನ ನೀಡಲಿದ್ದಾರೆ’ ಎಂದಿದ್ದಾರೆ.