ನಟಿ ಸಮಂತಾ ರುತ್‌ ಪ್ರಭು Tralala Moving Picture ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಸಿನಿಮಾಸಕ್ತ ಯುವ ಪ್ರತಿಭಾವಂತರಿಗೆ ಸಿನಿಮಾ ನಿರ್ಮಿಸುವುದು ಮೊದಲ ಆಧ್ಯತೆ ಎಂದಿದ್ದಾರವರು.

ದಕ್ಷಿಣ ಭಾರತದ ಖ್ಯಾತ ನಾಯಕನಟಿ ಸಮಂತಾ ರುತ್‌ ಪ್ರಭು ಅವರು Tralala Moving Picture ಎಂಬ ನೂತನ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ನಟನೆಯೊಂದಿಗೆ ನಿರ್ಮಾಣದಲ್ಲೂ ಅವರು ತೊಡಗಿಸಿಕೊಳ್ಳಲಿದ್ದಾರೆ. ಈ ಕುರಿತು ತಮ್ಮ Instagram ಖಾತೆಯಲ್ಲಿ ಬರೆದುಕೊಂಡಿರುವ ಸಮಂತಾ, ‘ನನ್ನ ಹೊಸ Tralala Moving Picture ಪ್ರೊಡಕ್ಷನ್ ಹೌಸ್ ಘೋಷಿಸಲು ತುಂಬಾ ಸಂತಸವಾಗಿದೆ. ಇದು ಹೊಸ ಯುಗದ ಅಭಿವ್ಯಕ್ತಿ ಮತ್ತು ಚಿಂತನೆಯ ವಿಷಯವನ್ನು ಪ್ರತಿನಿಧಿಸುವ ಗುರಿಯನ್ನು ಹೊಂದಿದೆ. ಕತೆಗಳನ್ನು ಸ್ವೀಕರಿಸುವ ಮತ್ತು ಪ್ರೋತ್ಸಾಹಿಸುವ ಒಂದು ಉತ್ತಮ ವೇದಿಕೆಯಾಗಲಿದೆ. ಚಲನಚಿತ್ರ ನಿರ್ಮಾಪಕರಿಗೆ ಅರ್ಥಪೂರ್ಣವಾದ ಮತ್ತು ಸಾರ್ವತ್ರಿಕವಾದ ಕಥೆಗಳನ್ನು ಹೇಳಲು ಒಂದು ಉತ್ತಮ ವೇದಿಕೆಯಾಗಲಿದೆ’ ಎಂದಿದ್ದಾರೆ.

ಸಮಂತಾ ಅವರ ಈ ಹೊಸ ನಿರ್ಮಾಣ ಸಂಸ್ಥೆಗೆ ಸ್ನೇಹಿತರು ಆಪ್ತರು ಮತ್ತು ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ದಾರೆ. ಸಮಂತಾ ಅವರು ಈ ಹಿಂದೆ ವಿಜಯ್‌ ದೇವರಕೊಂಡ ಜೊತೆಗೆ ‘ಖುಷಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಸಿಟಾಡೆಲ್‌’ ವೆಬ್‌ ಸರಣಿಯ ದೇಸಿ ವರ್ಷನ್‌ನಲ್ಲಿ ಅವರು ನಟಿಸಿದ್ದು, ಸದ್ಯದಲ್ಲೇ ಸರಣಿ ಸ್ಟ್ರೀಮ್‌ ಆಗಲಿದೆ. ಇದನ್ನು ರಾಜ್‌ ಮತ್ತು DK ರಚಿಸಿದ್ದು, ಈ ಸರಣಿಯಲ್ಲಿ ನಟ ವರುಣ್‌ ಧವನ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here