2024ನೇ ಸಾಲಿನ 69ನೇ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ವಿತರಿಸಲಾಗಿದ್ದು, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪಡೆದಿದ್ದಾರೆ. ವಿಧು ವಿನೋದ್ ಚೋಪ್ರಾ ಅವರ ’12th ಫೇಲ್’ ಸಿನಿಮಾ ‘ಅತ್ಯುತ್ತಮ ಚಿತ್ರ’ ಗೌರವಕ್ಕೆ ಪಾತ್ರವಾಗಿದೆ.

ಮುಂಬಯಿಯಲ್ಲಿ ಆಯೋಜನೆಗೊಂಡ ಫಿಲ್ಮ್‌ಫೇರ್‌ ಪ್ರಶಸ್ತಿ ಸಮಾರಂಭದಲ್ಲಿ ಆಲಿಯಾ ಭಟ್‌ ‘ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಚಿತ್ರದಲ್ಲಿನ ನಟನೆಗಾಗಿ ಮತ್ತು ರಣಬೀರ್‌ ಕಪೂರ್‌ ‘ಅನಿಮಲ್‌’ ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ’12th ಫೇಲ್’ಕ್ಕೆ ‘ಅತ್ಯುತ್ತಮ ಚಿತ್ರ’ ಗೌರವದ ಜೊತೆಗೆ ಚಿತ್ರದ ನಿರ್ದೇಶನಕ್ಕಾಗಿ ವಿಧು ವಿನೋದ್ ಚೋಪ್ರಾ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಘೋಷಣೆಯಾಗಿದೆ. ದೇವಾಶಿಶ್ ಮಖಿಜಾ ಅವರ ಥ್ರಿಲ್ಲರ್ ‘ಜೋರಮ್’ ಸಿನಿಮಾ ವಿಮರ್ಶಕರ ವಿಭಾಗದಲ್ಲಿ ‘ಅತ್ಯುತ್ತಮ ಚಲನಚಿತ್ರ’ ಪ್ರಶಸ್ತಿ ಪಡೆದಿದೆ.

ವಿಕ್ರಾಂತ್ ಮಾಸ್ಸೆ ’12 th ಫೇಲ್’‌ ಚಿತ್ರದ ಅಭಿನಯಕ್ಕಾಗಿ, ರಾಣಿ ಮುಖರ್ಜಿ ‘ಮಿಸಸ್‌ ಚಟರ್ಜಿ Vs ನಾರ್ವೆ’ ಚಿತ್ರದಲ್ಲಿನ ಅಭಿನಯಕ್ಕಾಗಿ, ಮತ್ತು ಶೆಫಾಲಿ ಶಾ ‘ತ್ರೀ ಆಫ್‌ ಅಸ್‌’ ಚಿತ್ರದ ನಟನೆಗಾಗಿ ವಿಮರ್ಶಕರ ವಿಭಾಗದಲ್ಲಿ ‘ಅತ್ಯುತ್ತಮ ನಟ-ನಟಿ’ ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ಡಂಕಿ’ ಚಿತ್ರದ ಅಭಿನಯಕ್ಕಾಗಿ ವಿಕ್ಕಿ ಕೌಶಲ್‌ ‘ಅತ್ಯುತ್ತಮ ಪೋಷಕ ನಟ’, ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಅಭಿನಯಕ್ಕಾಗಿ ಶಬಾನಾ ಅಜ್ಮಿ ‘ಅತ್ಯುತ್ತಮ ಪೋಷಕ ನಟಿ’ ಗೌರವ ಪಡೆದಿದ್ದಾರೆ.

LEAVE A REPLY

Connect with

Please enter your comment!
Please enter your name here