‘ಮನದ ಕಡಲು’ ಸಿನಿಮಾ ಚಿತ್ರೀಕರಣದ ಆಕಸ್ಮಿಕದಲ್ಲಿ ಲೈಟ್‌ ಬಾಯ್‌ ಶಿವರಾಜ್‌ ಮೃತಪಟ್ಟಿದ್ದಾರೆ. ಚಿತ್ರತಂಡದ ನಿರ್ಲಕ್ಷ್ಯದಿಂದ ಈ ಅನಾಹುತವಾಗಿದೆ ಎಂದು ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್‌ ಅವರ ಮೇಲೆ FIR ದಾಖಲಾಗಿದೆ.

ಬೆಂಗಳೂರು ಉತ್ತರ ಹೊರವಲಯದ ವಿಆರ್‌ಎಲ್ ಅರೆನಾ ಬಳಿ ಕಳೆದ ಕಲವು ದಿನಗಳಿಂದ ‘ಮನದ ಕಡಲು’ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ‘ಮುಂಗಾರು ಮಳೆ’ ಖ್ಯಾತಿಯ ಚಿತ್ರನಿರ್ಮಾಪಕ ಈ ಕೃಷ್ಣಪ್ಪ ನಿರ್ಮಾಣದ ಚಿತ್ರವಿದು. ಯಶಸ್ವೀ ‘ಮುಂಗಾರು ಮಳೆ’ ಸೇರಿದಂತೆ ಹಲವು ಹಿಟ್‌ ಸಿನಿಮಾಗಳನ್ನು ನಿರ್ದೇಶಿಸಿರುವ ಯೋಗರಾಜ್‌ ಭಟ್‌ ‘ಮನದ ಕಡಲು’ ಚಿತ್ರದ ನಿರ್ದೇಶಕ. ಮೊನ್ನೆ ಸೆಪ್ಟೆಂಬರ್‌ 3ರಂದು ಚಿತ್ರೀಕರಣದ ಸಂದರ್ಭದಲ್ಲಿ ಶಿವರಾಜ್‌ (30 ವರ್ಷ) ಹೆಸರಿನ ಲೈಟ್‌ ಬಾಯ್‌ 30 ಅಡಿ ಮೇಲಿಂದ ಆಕಸ್ಮಿಕವಾಗಿ ಬಿದ್ದಿದ್ದಾರೆ. ಅವರ ತಲೆಗೆ ತೀವ್ರವಾಗಿ ಪೆಟ್ಟಾಗಿತ್ತು. ಕೂಡಲೇ ಚಿತ್ರತಂಡದವರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸೆಪ್ಟೆಂಬರ್‌ 5ರಂದು ಶಿವರಾಜ್‌ ಮೃತಪಟ್ಟಿದ್ದಾರೆ.

ಚಿತ್ರತಂಡದ ನಿರ್ಲಕ್ಷ್ಯದಿಂದ ಹೀಗಾಗಿದೆ ಎಂದು ಮೃತರ ಸಂಬಂಧಿಕರು ನಿರ್ದೇಶಕ ಯೋಗರಾಜ್‌ ಭಟ್‌ ಅವರ ಮೇಲೆ FIR ದಾಖಲು ಮಾಡಿದ್ದಾರೆ. ಮೃತಪಟ್ಟ ಶಿವರಾಜ್‌ ತುಮಕೂರು ಜಿಲ್ಲೆ ಕೊರಟಗೆರೆ ಮೂಲದವರು ಎನ್ನಲಾಗಿದೆ. ಹಲವು ವರ್ಷಗಳಿಂದ ತಮ್ಮ ಸಹೋದರನ ಜೊತೆ ಅವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಮಾದನಾಯಕನಹಳ್ಳಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಯೋಗರಾಜ್‌ ಭಟ್‌ ಅವರನ್ನು ಆರೋಪಿ ಸಂಖ್ಯೆ 3 ಎಂದು ನಮೂದಿಸಲಾಗಿದೆ. ‌ಮ್ಯಾನೇಜರ್ ಸುರೇಶ್ ಅವರನ್ನು ಆರೋಪಿ ಸಂಖ್ಯೆ 1 ಎಂದು ಹೆಸರಿಸಲಾಗಿದೆ.

LEAVE A REPLY

Connect with

Please enter your comment!
Please enter your name here