ಶ್ರೀನಿ ನಿರ್ದೇಶನದಲ್ಲಿ ಶಿವರಾಜಕುಮಾರ್‌ ನಟಿಸಿರುವ ‘ಘೋಸ್ಟ್‌’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ತಯಾರಾಗಿರುವ ಸಿನಿಮಾ ಅಕ್ಟೋಬರ್‌ 19ರಂದು ತೆರೆಕಾಣಲಿದೆ.

ಶಿವರಾಜಕುಮಾರ್‌ ನಟನೆಯ ‘ಘೋಸ್ಟ್‌’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನಟ, ಚಿತ್ರ ನಿರ್ಮಾಪಕ ಎಂ ಜಿ ಶ್ರೀನಿವಾಸ್ ಬರೆದು – ನಿರ್ದೇಶಿಸಿರುವ ಚಿತ್ರ 2023ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಟ್ರೈಲರ್‌ನಲ್ಲಿ ಶಿವರಾಜ್‌ ಕುಮಾರ್, ‘ಇದು ಸಾಮ್ರಾಜ್ಯ ಕಟ್ಟೋ ಕಥೆಯಲ್ಲ, ಸಾಮ್ರಾಜ್ಯ ಧ್ವಂಸ ಮಾಡೋ ಕಥೆ’ ಅದಕ್ಕೆ ಬಂದಿರೋದು ನಾನು’ ಎನ್ನುತ್ತಾರೆ. ‘ಯುದ್ಧ, ಮಾನವ ಲೋಕದ ಮಾಗದ ಕರಗ, ಇಂತಹ ಯುದ್ಧಗಳಿಂದ, ಸಾಮ್ರಾಜ್ಯಗಳಿಂದ ಕಟ್ಟಿದ್ದಕ್ಕಿಂತ ಅಧಃಪತನವೇ ಜಾಸ್ತಿ. ಸಾಮ್ರಾಜ್ಯ ಕಟ್ಟಿರೋವರನ್ನ ಇತಿಹಾಸ ಮರೆತಿರಬಹುದು. ಆದರೆ, ಧ್ವಂಸ ಮಾಡೋ ನನ್ನಂತವರನ್ನ ಎಂದಿಗೂ ಮರೆತಿಲ್ಲ’ ಎಂದು ಟ್ರೈಲರ್‌ನ ಆರಂಭದಲ್ಲಿಯೇ ಶಿವರಾಜಕುಮಾರ್ ಹಿನ್ನೆಲೆ ಧ್ವನಿ ಕೇಳಿಸುತ್ತದೆ.

ಬಂದೂಕು ಹಿಡಿದ ಶಿವರಾಜಕುಮಾರ್ ಆಗಮಿಸಿದಾಗ ಜೈಲಿನೊಳಗೆ ಖೈದಿಗಳೆಲ್ಲ ತಲೆಬಗ್ಗಿಸಿ ಕುಳಿತಿರುತ್ತಾರೆ. ಅವರ ಮುಂದೆ ಶಿವರಾಜಕುಮಾರ್ ಡಾನ್‌-ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಕಪ್ಪು ಕೋಟ್‌ ಧರಿಸಿ ಶಿವರಾಜಕುಮಾರ್‌ ಆಗಮಿಸೋ ದೃಶ್ಯವು ಹಳೆಯ ಗ್ಯಾಂಗ್‌ಸ್ಟರ್‌ ಯುದ್ಧಗಳನ್ನು ನೆನಪಿಸುತ್ತವೆ. Sandesh Productions ಬ್ಯಾನರ್‌ ಅಡಿ ಸಂದೇಶ್‌ ಚಿತ್ರ ನಿರ್ಮಿಸಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಮಲಯಾಳಂ ನಟ ಜಯರಾಮ್, ಬಾಲಿವುಡ್ ನಟ ಅನುಪಮ್ ಖೇರ್, ಪ್ರಶಾಂತ್ ನಾರಾಯಣನ್, ಅರ್ಚನಾ ಜೋಯಿಸ್, ಸತ್ಯ ಪ್ರಕಾಶ್, ಮಹೇಶ್ ದಾಸ್ ಆಗಿ ಎಂ ಜಿ ಶ್ರೀನಿವಾಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್‌ 19ರಂದು ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here