ಶಿವರಾಜಕುಮಾರ್‌ ಅಭಿನಯದ ಬಹುನಿರೀಕ್ಷಿತ ‘ಘೋಸ್ಟ್‌’ ಸಿನಿಮಾ ಅಕ್ಟೋಬರ್‌ 19ರಂದು ತೆರೆಕಾಣಲಿದೆ. ಅಕ್ಟೋಬರ್‌ 18ರ ಮಧ್ಯರಾತ್ರಿ 12ಕ್ಕೆ Fan Show ಇರಲಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮಧ್ಯರಾತ್ರಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೆ ‘ಘೋಸ್ಟ್‌’ ಪಾತ್ರವಾಗುತ್ತಿದೆ.

ಶಿವರಾಜ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಸಿರುವ ‘ಘೋಸ್ಟ್‌’ ಚಿತ್ರಕ್ಕೆ ಸಿನಿಮಾರಂಗ ಮತ್ತು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದಕ್ಕಾಗಿಯೇ ‘ಘೋಸ್ಟ್‌’ ಚಿತ್ರತಂಡ ಅಕ್ಟೋಬರ್‌ 18ರ ಮಧ್ಯರಾತ್ರಿ ಅಭಿಮಾನಿಗಳಿಗಾಗಿ ವಿಶೇಷ ಪ್ರದರ್ಶನ ಹಮ್ಮಿಕೊಂಡಿದೆ. ಚಿತ್ರದಲ್ಲಿ ಅನೇಕ ವಿಶೇಷತೆಗಳಿವೆ. ಬಾಲಿವುಡ್‌ ನಟ ಅನುಪಮ್ ಖೇರ್ ಮತ್ತು ಮಾಲಿವುಡ್‌ ನಟ ಜಯರಾಮ್ ಈ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದಾರೆ. ನಿರ್ದೇಶಕ ಶ್ರೀನಿವಾಸ್ ತಮ್ಮ‌ ಮುಂದಿನ ಚಿತ್ರ ‘ಬೀರ್‌ಬಲ್‌ ಭಾಗ – 2’ರ ಮಾಹಿತಿಯನ್ನು ಸಹ ಈ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಅನಾವರಣ ಮಾಡಲಿದ್ದಾರೆ. ಈ ಚಿತ್ರವನ್ನು Sandesh Productions ಬ್ಯಾನರ್‌ ಅಡಿಯಲ್ಲಿ ಸಂದೇಶ್‌ ನಾಗರಾಜ್ ನಿರ್ಮಿಸಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಅಕ್ಟೋಬರ್ 19, 2023ರಿಂದ Pan India ‘ಘೋಸ್ಟ್’ ಬಿಡುಗಡೆಯಾಗುತ್ತಿದೆ. ಸಿನಿಮಾದಲ್ಲಿ ಪ್ರಶಾಂತ್ ನಾರಾಯಣನ್, ಅರ್ಚನಾ ಜೋಯಿಸ್, ಸತ್ಯ ಪ್ರಕಾಶ್, ಮಹೇಶ್ ದಾಸ್ ಆಗಿ ಎಂ ಜಿ ಶ್ರೀನಿವಾಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here