ಐದು ಬಾರಿ ಶಾಸಕರಾಗಿ ಆಯ್ಕೆಯಾಗಿ ಸರಳ ಜೀವನ ನಡೆಸಿದ ಆಂಧ್ರದ ಮಾಜಿ ಶಾಸಕ ಗುಮ್ಮಡಿ ನರಸಯ್ಯ ಅವರ ಬಯೋಪಿಕ್‌ ಸಿನಿಮಾ ‘ಗುಮ್ಮಡಿ ನರಸಯ್ಯ’. ತೆಲಂಗಾಣದ ಪಾಲ್ವಂಚದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ.

ಧೋತಿ, ಷರ್ಟ್‌, ಹೆಗಲ ಮೇಲೆ ಕೆಂಪು ಬಣ್ಣದ ಶಾಲು, ಜೊತೆಯಲ್ಲೊಂದು ಸೈಕಲ್‌. ಶಿವರಾಜಕುಮಾರ್‌ ಅವರ ಈ ಫಸ್ಟ್‌ಲುಕ್‌ ಪೋಸ್ಟರ್‌ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಇದು ‘ಗುಮ್ಮಡಿ ನರಸಯ್ಯ’ ತೆಲುಗು ಬಯೋಪಿಕ್‌ ಸಿನಿಮಾದ ಫಸ್ಟ್‌ ಪೋಸ್ಟರ್‌. ಇದೀಗ ಸಿನಿಮಾದ ಮುಹೂರ್ತ ನೆರವೇರಿದೆ. ಪರಮೇಶ್ವರ್‌ ಹಿವ್ರಾಳೆ ನಿರ್ದೇಶನದದಲ್ಲಿ ಸಿನಿಮಾ ತಯಾರಾಗುತ್ತಿದೆ. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿ ಸರಳ ಜೀವನ ನಡೆಸಿದ ಆಂಧ್ರದ ಮಾಜಿ ಶಾಸಕ ಗುಮ್ಮಡಿ ನರಸಯ್ಯ ಅವರ ಬಯೋಪಿಕ್‌ಗೆ ತೆಲಂಗಾಣದ ಪಾಲ್ವಂಚದಲ್ಲಿ ಮುಹೂರ್ತ ನೆರವೇರಿದೆ.

ಚಿತ್ರ, ಪಾತ್ರದ ಬಗ್ಗೆ ಮಾತನಾಡುವ ಶಿವರಾಜಕುಮಾರ್‌, ‘ಅಂತಹ ಉದಾತ್ತ ಮನುಷ್ಯನ ಜೀವನಕತೆಯ ಸಿನಿಮಾದಲ್ಲಿ ನಟಿಸಲು ಹೆಮ್ಮೆ ಪಡುತ್ತೇನೆ. ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯನಂತೆಯೇ ಜನರ ಸೇವೆ ಸಲ್ಲಿಸಿದ್ದಾರೆ. ಅವರು ಯಾವಾಗಲೂ ‘ನಿಮಗಾಗಿ ಬದುಕಬೇಡಿ, ಇತರರಿಗಾಗಿ ಬದುಕಿ’ ಎಂದು ಹೇಳುತ್ತಿದ್ದರು. ನಾನು ಇತ್ತೀಚೆಗೆ ಗುಮ್ಮಡಿ ನರಸಯ್ಯ ಅವರ ಮನೆಗೆ ಭೇಟಿ ನೀಡಿದಾಗ, ನನ್ನ ತಂದೆಯವರನ್ನು ಕಂಡಂತೆ ಭಾಸವಾಯಿತು. ಈ ಚಿತ್ರಕ್ಕಾಗಿ ತೆಲುಗು ಕಲಿಯುತ್ತಿದ್ದೇನೆ. ಪಾತ್ರಕ್ಕೆ ನಾನೇ ಡಬ್‌ ಮಾಡುತ್ತೇನೆ. ಈ ಚಿತ್ರವು ರಾಜಕೀಯ ನಾಯಕರಿಗೆ ಸ್ಫೂರ್ತಿಯಾಗಲಿದೆ’ ಎನ್ನುತ್ತಾರೆ.

‘ಈ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಮತ್ತು ಆ ಬದಲಾವಣೆ ನಮ್ಮೊಳಗೇ ಆರಂಭವಾಗಬೇಕು. ನಾವು ಒಬ್ಬರನ್ನೊಬ್ಬರು ಮೋಸಗೊಳಿಸುವುದನ್ನು ಕೊನೆಗಾಣಿಸಬೇಕು. ನಾನು ಮಹಾನ್ ನಾಯಕನಲ್ಲ. ನಾನು ಎಲ್ಲರಂತೆ ಸಾಮಾನ್ಯ ವ್ಯಕ್ತಿ. ನನ್ನನ್ನು ವೈಭವೀಕರಿಸುವ ಬದಲು, ಚಿತ್ರವು ನನ್ನ ನಂಬಿಕೆಗಳನ್ನು ತಿಳಿಸುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಗುಮ್ಮಡಿ ನರಸಯ್ಯ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಎನ್. ಸುರೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here