ತೆಲುಗು ನಟ ಮಹೇಶ್‌ ಬಾಬು ಪುತ್ರಿ ಸಿತಾರ ನಟಿಸಿರುವ ಜ್ಯೂವೆಲರಿ ಜಾಹೀರಾತು ಬಿಡುಗಡೆಯಾಗಿದೆ. ಸಿತಾರ ಈ ಜಾಹೀರಾತನ್ನು ಕಿರುಚಿತ್ರ ಮಾದರಿಯಲ್ಲಿ ಹಂಚಿಕೊಂಡಿದ್ದಾರೆ. ಆಕೆ ನಟನೆಗೆ ಮಹೇಶ್‌ ಬಾಬು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಹೇಶ್‌ ಬಾಬು ಪುತ್ರಿಗೆ ಅಭಿನಂದನೆ ಹೇಳಿದ್ದಾರೆ.

ತೆಲುಗು ತಾರೆ ಮಹೇಶ್‌ ಬಾಬು ಪುತ್ರಿ ಸಿತಾರ ಜ್ಯೂವೆಲರಿ ಜಾಹೀರಾತಿಗೆ ರೂಪದರ್ಶಿಯಾಗಿರುವುದು ಸಾಕಷ್ಟು ಸುದ್ದಿಯಾಗಿತ್ತು. ಅವರ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿದ್ದವು. ಇಂದು ಸಿತಾರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅವರ ಜಾಹೀರಾತಿನ ವೀಡಿಯೋ ಫಾರ್ಮ್ಯಾಟ್‌ ರಿಲೀಸ್‌ ಆಗಿದೆ. ಇದನ್ನು ಕಿರುಚಿತ್ರ ಮಾದರಿಯಲ್ಲಿ ಸಿತಾರ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ, ‘When the princess found her crown, Thrilled to share @pmj_jewels Princess’ ಎನ್ನುವ ಒಕ್ಕಣಿಯೊಂದಿಗೆ ಹಂಚಿಕೊಂಡಿದ್ದಾರೆ. ಜಾಹೀರಾತಿನಲ್ಲಿ ಕನ್ನಡದ ಹಿರಿಯ ನಟಿ ಸುಮಿತ್ರಾ ಅವರು ಸಿತಾರ ಅಜ್ಜಿಯಾಗಿ ನಟಿಸಿದ್ದು, ಮಹೇಶ್‌ ಬಾಬು ಪುತ್ರಿಯ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

https://www.instagram.com/reel/Cu4DllvtdoP/?utm_source=ig_web_button_share_sheet

ಮಹೇಶ್‌ ಬಾಬು ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋನ ಪುತ್ರಿಗೆ ಶುಭಕೋರುತ್ತಿದ್ದಾರೆ. ಇತ್ತೀಚೆಗೆ ಸಿತಾರ ಜ್ಯೂವೆಲರಿ ಜಾಹೀರಾತಿನ ಫೋಟೊಗಳು ನ್ಯೂಯಾರ್ಕ್‌ನ ಪ್ರಸಿದ್ಧ Times Square ಮೇಲೆ ಪ್ರದರ್ಶನಗೊಂಡಿದ್ದವು. ನಟ ಮಹೇಶ್‌ ಬಾಬು ಈ ವೀಡಿಯೋ ಟ್ವೀಟ್‌ ಮಾಡಿದ್ದರು. ಇಂದು ಪುತ್ರಿಯ 11ನೇ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಾ, ”Happy 11th, my star! Achive everything you set your mind to’ ಎಂದಿದ್ದಾರೆ. ಟೈಮ್ಸ್‌ ಸ್ಕ್ವಯರ್‌ ವಿಶ್ಯುಯೆಲ್ಸ್‌ ಹಂಚಿಕೊಂಡಿರುವ ಸಿತಾರ, ‘TIMES SQUAREE! oh my god screamed, cried and shouted, I couldn’t be any happier’ ಎಂದು ಕಾಮೆಂಟ್‌ ಹಾಕಿದ್ದಾರೆ.

LEAVE A REPLY

Connect with

Please enter your comment!
Please enter your name here