ಕತೆಗೆ ಬಹಳಷ್ಟು ಶೇಡ್ಸ್ ಇರುವುದರಿಂದ ತಂತ್ರಜ್ಞರು ಅದಕ್ಕೆ ತಕ್ಕ ಲೈಟಿಂಗ್ ಮಾಡಿದ್ದಾರೆ. ಹಿನ್ನೆಲೆ ಸಂಗೀತ ಹಂತಹಂತವಾಗಿ ಕತೆಯನ್ನು ಆವರಿಸುತ್ತದೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ ‘I Am All Girls’ ಇಂಗ್ಲಿಷ್ ಸಿನಿಮಾ.
ತೊಂಬತ್ತರ ದಶಕದ ಮಧ್ಯಭಾಗದ ಕತೆ. ಆಫ್ರಿಕಾದ ಒಂದು ಊರಿನಿಂದ ಟ್ರಕ್‌ವೊಂದರಲ್ಲಿ ಆರು ಬಾಲಕಿಯರನ್ನು ಅಪಹರಿಸಿ ಜೋಹಾನ್ಸ್‌ಬರ್ಗ್‌ಗೆ ಕರೆತರಲಾಗುತ್ತದೆ. ನಂತರ ಅವರನ್ನು ಚೆನ್ನಾಗಿ ಅಲಂಕಾರ ಮಾಡಿ ಏರ್ಪೋರ್ಟ್‌ಗೆ ಕಳುಹಿಸಲಾಗುವುದು. ಅಲ್ಲಿಗೆ ಪ್ರೈವೇಟ್ ಜೆಟ್‌ನಲ್ಲಿ ಬರುವ ಸೌದಿಯ ದೊರೆಯೊಬ್ಬನಿಗೆ ಈ ಬಾಲಕಿಯರನ್ನು ಹಸ್ತಾಂತರ ಮಾಡಲಾಗುತ್ತದೆ. ಆರು ಬಾಲಕಿಯರಲ್ಲಿ ಒಬ್ಬ ಬಾಲಕಿ ಕಪ್ಪು ಎಂದು ಆಕೆಯನ್ನು ನಿರಾಕರಿಸಿ ಉಳಿದ ಬಾಲಕಿಯರನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುತ್ತಾನೆ ಸೌದಿ ದೊರೆ. ಆ ಕಪ್ಪು ಬಣ್ಣದ ಬಾಲಕಿಯನ್ನು ಒಂದು ವೇಶ್ಯೆ ಅಡ್ಡೆಗೆ ಬಿಡಲಾಗುತ್ತದೆ.
ನಂತರ ಕತೆ 20 ವರ್ಷ ಮುಂದಕ್ಕೆ ಸಾಗುತ್ತದೆ. ಹೀಗಿರುವಾಗ ಒಂದರ ಹಿಂದೆ ಒಂದು ಕೊಲೆಗಳು ನಡೆಯುತ್ತವೆ, ಕೊಲೆಯಾದ ಪ್ರತಿ ವ್ಯಕ್ತಿಯ ಮೈಮೇಲೆ ಅಪಹರಣ ಆಗಿದ್ದ ಒಂದೊಂದು ಬಾಲಕಿಯರ ಹೆಸರನ್ನು ಬರೆಯಲಾಗುತ್ತದೆ. ಈ ಕೇಸನ್ನು ಬೇಧಿಸಲು ಬರುವ ಚಿತ್ರದ ನಾಯಕಿ, ಈ ಕೊಲೆಗಳನ್ನು ಮಾಡಿದ್ದು ಯಾರು ? ಸತ್ತ ವ್ಯಕ್ತಿಗಳು ಯಾರು ಎಂಬುದನ್ನು ಕಂಡು ಹಿಡಿಯುವುಳೇ, ಇಲ್ಲವೇ ತಾನೇ ಸುಳಿಯಲ್ಲಿ ಸಿಲುಕುವಳೇ ಎನ್ನುವುದನ್ನು ನೀವು ಸಿನಿಮಾದಲ್ಲಿ ವೀಕ್ಷಿಸಿ.
ಚಿತ್ರದಲ್ಲಿ ನನಗೆ ಬಹಳ ಇಷ್ಟವಾಗಿದ್ದು ಮೇಕಿಂಗ್. ಹೌದು ಇಲ್ಲಿ ಟ್ರೈ ಮಾಡದ ಆಂಗಲ್‌ಗಳೇ ಇಲ್ಲ ಎನ್ನಬಹುದು. ಅಷ್ಟರ ಮಟ್ಟಿಗೆ ಪ್ರತಿಯೊಂದು ಶಾಟ್ ಅನ್ನು ವಿಶಿಷ್ಟವಾಗಿ ಕಂಪೋಸ್ ಮಾಡಲಾಗಿದೆ. ಪ್ರತಿ ಸೀನ್‌ನಲ್ಲೂ ಒಂದು ಡ್ರೋನ್ ಶಾಟ್ಸ್ ಇದ್ದೇ ಇರುತ್ತೆ, ಅದು ಕೂಡ 2ರಿಂದ 3 ಸೆಕೆಂಡ್ ಗಳು ಮಾತ್ರ. ಈ ಶಾಟ್‌ಗಳ ಕಂಪೋಸಿಷನ್ ಪರಿಣಾಮಕಾರಿಯಾಗಿದೆ. ಕಥೆಗೆ ಬಹಳಷ್ಟು ಶೇಡ್ಸ್ ಇರುವುದರಿಂದ ಅದಕ್ಕೆ ತಕ್ಕ ಲೈಟಿಂಗ್ ನ್ನೂ ಅದ್ಭುತವಾಗಿ ಮಾಡಿದಾರೆ. ಹಿನ್ನೆಲೆ ಸಂಗೀತ ಹಂತ ಹಂತವಾಗಿ ಕಥೆಯನ್ನು ಆವರಿಸುತ್ತದೆ. ಕಲಾವಿದರ ಸಹಜ ಅಭಿನಯ ಮೆಚ್ಚಲೇಬೇಕು. ಎಡಿಟರ್ ಬಗ್ಗೆ ಹೇಳಲೇಬೇಕು, ಇದು ನಾನ್ ಲೀನಿಯರ್ ಸಿನಿಮಾ ಆಗಿರುವುದರಿಂದ ಅವರ ಕೆಲಸ ಬಹಳ. ಅದನ್ನವರು ಅಷ್ಟೇ ಚೆನ್ನಾಗಿ ಮಾಡಿದ್ದಾರೆ.
ಚಿತ್ರ – I Am All Girls | ಭಾಷೆ – ಇಂಗ್ಲಿಷ್ | ನಿರ್ದೇಶನ – Donovan Marsh | ಸ್ಟ್ರೀಮಿಂಗ್ ಸರ್ವೀಸ್ – Netflix