ನೀನಾ ಗುಪ್ತಾ, ಲಾರಾ ದತ್ತಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಇಷ್ಕ್‌-ಎ-ನಾದಾನ್‌’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಮಧ್ಯವಯಸ್ಕರ ಪ್ರೀತಿ, ಪ್ರಣಯದ ಕತೆಯಿದು. ಜುಲೈ 14ರಿಂದ JioCinemaದಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

ಬಾಲಿವುಡ್‌ ತಾರೆಯರಾದ ನೀನಾ ಗುಪ್ತಾ, ಲಾರಾ ದತ್ತಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಇಷ್ಕ್-ಎ-ನಾದಾನ್’ ಹಿಂದಿ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಯಾವುದೇ ವಯಸ್ಸಿನವರು ಪರಸ್ಪರ ಪ್ರೀತಿಸಬಹುದು ಎಂಬ ಸಾರವನ್ನು ತಿಳಿಸಲು ಹೊರಟಿದೆ ಸಿನಿಮಾ. Jio Studios ತನ್ನ ಅಧಿಕೃತ ಹ್ಯಾಂಡಲ್‌ಗಳಲ್ಲಿ ಟ್ರೈಲರ್‌ ಹಂಚಿಕೊಂಡಿದೆ. ಟ್ರೈಲರ್‌ ಕವನದೊಂದಿಗೆ ಪ್ರಾರಂಭವಾಗುತ್ತದೆ. ಅದರಲ್ಲಿ ನಿರೂಪಕ ‘ತು ಯುನ್ ನಾ ಗುಜ್ರಾ ಕರ್, ತನ್ಹಾ ಗಲಿಯೋಂ ಸೆ ಮೇರಿ ತೇರಿ ಆಜಾದ್ ಹಸೀ ಕಿ ಆದತ್ ಸೀ ಹೋ ಜಾಯೇಗೀ’ ಎಂದು ಹೇಳುತ್ತಾರೆ. ಚಿತ್ರವನ್ನು ಅವಿಷೇಕ್ ಘೋಷ್ ನಿರ್ದೇಶಿಸಿದ್ದು, AVMA Media Production ಬ್ಯಾನರ್‌ನಡಿ ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದಾರೆ. ಕನ್ವಲ್‌ಜಿತ್ ಸಿಂಗ್, ಶ್ರಿಯಾ ಪಿಲ್ಗಾಂವ್ಕರ್, ಸುಹೇಲ್ ನಯ್ಯರ್, ಮೃಣಾಲ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜ ನಾರಾಯಣ್ ದೇಬ್ ಸಂಗೀತ ಸಂಯೋಜಿಸಿದ್ದಾರೆ. ನಟಿ ಲಾರಾ ದತ್ತ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಚಿತ್ರದ ಟ್ರೈಲರ್‌ ಮತ್ತು ಪೋಸ್ಟರ್‌ ಹಂಚಿಕೊಂಡಿದ್ದಾರೆ. ಜುಲೈ 14ರಿಂದ Jio Cinemaದಲ್ಲಿ ಸಿನಿಮಾ ಉಚಿತವಾಗಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

Previous article‘ಎರುಂಬು’ Amazon Primeನಲ್ಲಿ ಜುಲೈ 16ರಿಂದ | ಜಿ ಸುರೇಶ್‌ ನಿರ್ದೇಶನದ ಮಕ್ಕಳ ಸಿನಿಮಾ
Next article‘ಖಾದರ್‌ ಬಾಷಾ ಎಂದ್ರಾ ಮುತ್ತುರಾಮಲಿಂಗಂ’ | ZEE5ನಲ್ಲಿ ಆರ್ಯ ಸಿನಿಮಾ ಇಂದಿನಿಂದ

LEAVE A REPLY

Connect with

Please enter your comment!
Please enter your name here