ವಿಕ್ಕಿ ವರುಣ್ ಮತ್ತು ಧನ್ಯಾ ರಾಮಕುಮಾರ್ ಅಭಿನಯದ ‘ಕಾಲಾಪ‌ತ್ಥರ್‌’ ಸಿನಿಮಾದ ‘ಬಾಂಡ್ಲಿ ಸ್ಟವ್‌’ ಸಾಂಗ್‌ ರಿಲೀಸ್‌ ಆಗಿದೆ. ಪ್ರಮೋದ್‌ ಮರವಂತೆ ರಚನೆಯ ಈ ಹಾಡಿಗೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದು, ವಿಜಯಪ್ರಕಾಶ್‌ ಹಾಡಿದ್ದಾರೆ. ಇದೇ ಸೆಪ್ಟೆಂಬರ್‌ 13ಕ್ಕೆ ಸಿನಿಮಾ ತೆರೆಕಾಣಲಿದೆ.

ವಿಕ್ಕಿ ವರುಣ್‌ ಹೀರೋ ಆಗಿ ನಟಿಸಿ, ನಿರ್ದೇಶಿಸಿರುವ ‘ಕಾಲಾಪತ್ಥರ್‌’ ಸಿನಿಮಾದ ‘ಬಾಂಡ್ಲಿ ಸ್ಟವ್‌’ ಸಾಂಗ್‌ ರಿಲೀಸ್‌ ಆಗಿದೆ. ಪ್ರಮೋದ್‌ ಮರವಂತೆ ರಚನೆಯ ಈ ಹಾಡಿಗೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದು, ವಿಜಯಪ್ರಕಾಶ್‌ ಹಾಡಿದ್ದಾರೆ. ನಿರ್ದೇಶಕ ವಿಕ್ಕಿ ಅವರು ಗೃಹಿಣಿಯರಿಂದಲೇ ಈ ಹಾಡನ್ನು ಬಿಡುಗಡೆಗೊಳಿಸಿದ್ದು ವಿಶೇಷ. ಹಾಡಿನ ಬಗ್ಗೆ ಮಾತನಾಡಿದ ಸಂಗೀತ ಸಂಯೋಜಕ ಅನೂಪ್‌ ಸೀಳಿನ್‌, ‘ಮೊದಲು ಒಂದು ಹಾಡು ಶುರುವಾಗಬೇಕೆಂದಾಗ ಸಂಗೀತ ನಿರ್ದೇಶಕರ ಜೊತೆಗೆ ನಿರ್ದೇಶಕರು ಇರುತ್ತಿದ್ದರು‌. ಈಗ ಹಾಗಲ್ಲ‌. ಆದರೆ ಈ ಚಿತ್ರದ ನಿರ್ದೇಶಕ ವಿಕ್ಕಿ ವರುಣ್ ಆರಂಭದಿಂದಲೂ ನನ್ನ ಜೊತೆಗಿದ್ದಾರೆ. ಹಾಡು ಚೆನ್ನಾಗಿ ಬಂದಿದೆ ಅಂದರೆ ಅದಕ್ಕೆ ಅವರೇ ಕಾರಣ’ ಎನ್ನುತ್ತಾರೆ.

ಚಿತ್ರದ ಹೀರೋ ಮತ್ತು ನಿರ್ದೇಶಕರೂ ಆದ ‘ಕೆಂಡಸಂಪಿಗೆ’ ಸಿನಿಮಾ ಖ್ಯಾತಿಯ ವಿಕ್ಕಿ ವರುಣ್‌, ‘ಬಾಂಡ್ಲಿ, ಸ್ವವ್ ಹಾಗೂ ಸೌಟ್ ಅನ್ನು ಹೆಚ್ಚಾಗಿ ಗೃಹಿಣಿಯರು ಬಳಸುತ್ತಾರೆ. ಹಾಗಾಗಿ ಈ ಹಾಡನ್ನು ಅವರಿಂದಲೇ ಬಿಡುಗಡೆ ಮಾಡಿಸಿದ್ದೇವೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಪ್ರಮೋದ್ ಮರವಂತೆ ಅವರ ಸಾಹಿತ್ಯ ಸೊಗಸಾಗಿದೆ. ನೃತ್ಯ ಬಾರದ ನನ್ನಿಂದ ಧನು ಮಾಸ್ಟರ್ ಚೆನ್ನಾಗಿ ನೃತ್ಯ ಮಾಡಿಸಿದ್ದಾರೆ. ನಿರ್ಮಾಪಕರು ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ’ ಎಂದು ನಿರ್ಮಾಪಕರಿಗೆ ಧನ್ಯವಾದ ಹೇಳಿದರು. ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ ಸಿನಿಮಾದ ನಾಯಕಿಯಾಗಿ ಧನ್ಯಾ ರಾಮಕುಮಾರ್‌ ನಟಿಸಿದ್ದಾರೆ. ಇದೇ ಸೆಪ್ಟೆಂಬರ್‌ 13ಕ್ಕೆ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here