ಧನ್ವೀರ್‌ ಮತ್ತು ರೀಷ್ಮಾ ನಾಣಯ್ಯ ಅಭಿನಯದ ‘ವಾಮನ’ ಸಿನಿಮಾದ ಹೀರೋ ಇಂಟ್ರಡಕ್ಷನ್‌ ಸಾಂಗ್‌ ರಿಲೀಸ್‌ ಆಗಿದೆ. ಚಿತ್ರನಿರ್ದೇಶಕ ಚೇತನ್‌ ಕುಮಾರ್‌ ರಚನೆಯ ಈ ಹಾಡಿಗೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದು, ಶಶಾಂಕ್‌ ಶೇಷಗಿರಿ ಹಾಡಿದ್ದಾರೆ.

‘ಕತೆಯಲ್ಲಿ ಬರುವ ಪಾತ್ರಗಳಿಗಷ್ಟೇ ಕೌಂಟರ್ ಕೊಡುತ್ತಿರುವುದು. ಬೇರೆ ಯಾರಿಗೂ ಅಲ್ಲ! ನಾಯಕ ‘ಗುಣ’ ಪಾತ್ರ ನೀರು ಇದ್ದ ಹಾಗೆ. ರಾವಣ, ದುರ್ಯೋಧನ ಇಬ್ಬರನ್ನೂ ಆವರಿಸಿಕೊಳ್ಳುತ್ತಾನೆ. ವಾಮನನನ್ನು ಆವರಿಸಿಕೊಳ್ಳುತ್ತಾನೆ. ಸಮಯ ಬಂದಾಗ ದಶಾವತಾರದಲ್ಲಿರುವ ಪಾತ್ರವನ್ನು ಆವರಿಸಿಕೊಳ್ಳುತ್ತಾನೆ. ಕ್ಲಾಸ್‌ ಮತ್ತು ಮಾಸ್‌ ಎರಡೂ ವರ್ಗದ ಆಡಿಯನ್ಸ್‌ಗೆ ಹೊಂದುವಂಥ ಕತೆ ಚಿತ್ರದಲ್ಲಿದೆ’ ಎಂದರು ‘ವಾಮನ’ ಚಿತ್ರದ ನಿರ್ದೇಶಕ ಶಂಕರ್‌ ರಾಮನ್‌. ಈ ಟೈಟಲ್‌ ಟ್ರ್ಯಾಕ್‌ ಚಿತ್ರರಂಗದ ಇತರೆ ಯಾವುದೇ ಹೀರೋಗಳಿಗೆ ಕೌಂಟರ್‌ ಕೊಡುವ ಹಾಡಲ್ಲ ಎನ್ನುವುದನ್ನು ಅವರು ಮೊದಲೇ ಸ್ಪಷ್ಟಪಡಿಸಿದರು. ಧನ್ವೀರ್‌ ನಟನೆಯ ಮೂರನೇ ಚಿತ್ರವಿದು. ಈ ಇಂಟ್ರಡಕ್ಷನ್‌ ಸಾಂಗ್‌ ಮೂಲಕ ಚಿತ್ರತಂಡ ಪ್ರೊಮೋಷನ್‌ ಆರಂಭಿಸಿದೆ. ಚೇತನ್‌ ಕುಮಾರ್‌ ರಚನೆಯ ಈ ಹಾಡಿಗೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆಯಿದೆ. ಶಶಾಂಕ್‌ ಶೇಷಗಿರಿ ಹಾಡಿದ್ದು, ಭೂಷಣ್‌ ಅವರ ನೃತ್ಯ ಸಂಯೋಜನೆಗೆ ಧನ್ವೀರ್‌ ಹೆಜ್ಜೆ ಹಾಕಿದ್ದಾರೆ.

‘ಈ ಥರದ ಸಾಂಗ್‌ ಅವನ್ನು ನನ್ನ ಹಿಂದಿನ ಸಿನಿಮಾಗಳಲ್ಲಿ ಎಕ್ಸ್‌ಪೆಕ್ಟ್‌ ಮಾಡಿದ್ದೆ. ಆದರೆ ಚೇತನ್ ಸರ್ ನನ್ನ ಹಿಂದೆ ಇಟ್ಟುಬಿಟ್ಟಿದ್ದರು. ಹೋದ ಸಿನಿಮಾದಲ್ಲಿಯೇ ಇದು ಆಗಬೇಕಿತ್ತು. ಅಂತೂ ಈ ಬಾರಿ ಆಗಿದೆ’ ಎಂದು ಹೀರೋ ಧನ್ವೀರ್‌ ಹಾಡನ್ನು ರೂಪಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಈಕ್ವಿನಾಕ್ಸ್‌ ಗ್ಲೋಬಲ್‌ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ನಡಿ ತಯಾರಾಗಿರುವ ಈ ಸಿನಿಮಾದ ನಾಯಕಿ ರೀಷ್ಮಾ ನಾಣಯ್ಯ. ತಾರಾ, ಸಂಪತ್‌, ಆದಿತ್ಯ ಮೆನನ್‌, ಶಿವರಾಜ್ ಕೆ ಆರ್ ಪೇಟೆ, ಅವಿನಾಶ್‌, ಅಚ್ಯುತ್‌ ಕುಮಾರ್‌, ಕಾಕ್ರೋಚ್‌ ಸುಧಿ, ಭೂಷಣ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್, ವಿಕ್ರಮ್ ಮೋರ್, ಜಾಲಿ ಬಾಸ್ಟಿನ್ ಆಕ್ಷನ್, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ.

https://youtu.be/bNfwaw2rs8A

LEAVE A REPLY

Connect with

Please enter your comment!
Please enter your name here