ಆರ್‌.ಚಂದ್ರು ನಿರ್ಮಾಣ, ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಕಬ್ಜ’ ಸಿನಿಮಾದ ನಾಯಕಿಯಾಗಿ ಬಹುಭಾಷಾ ನಟಿ ಶ್ರಿಯಾ ಶರಣ್‌ ಆಯ್ಕೆಯಾಗಿದ್ದಾರೆ. ಇಂದು ಅವರ ಫಸ್ಟ್‌ಲುಕ್‌ ರಿವೀಲ್‌ ಆಗಿದೆ. ಅದ್ಧೂರಿಯಾಗಿ ತಯಾರಾಗುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾಗೆ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ.

KGF ಬಳಿಕ ಅದ್ಧೂರಿಯಾಗಿ ತಯಾರಾಗುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾ ‘ಕಬ್ಜ’ ಚಿತ್ರತಂಡದಿಂದ ಸುದ್ದಿ ಬಂದಿದೆ. ಆರ್‌.ಚಂದ್ರು ನಿರ್ಮಾಣ ಮತ್ತು ನಿರ್ದೇಶನದ ಈ ಸಿನಿಮಾದ ನಾಯಕಿ ಯಾರು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ‘ಅವರು ಬರ್ತಾರೆ, ಇವರು ಬರ್ತಾರೆ…’ ಎಂಬ ಗಾಸಿಪ್‌ ಆಗಾಗ ಹರಿದಾಡುತ್ತಲೇ ಇತ್ತು. ಅದಕ್ಕೀಗ ಚಂದ್ರು ಫುಲ್‌ಸ್ಟಾಪ್‌ ಇಟ್ಟಿದ್ದಾರೆ. ‘ದಕ್ಷಿಣ ಭಾರತದ ಪ್ರಮುಖ ನಾಯಕಿಯನ್ನೇ ಕರೆತರುತ್ತೇನೆ’ ಎಂದು ಮುಹೂರ್ತದ ಸಂದರ್ಭದಲ್ಲಿ ಹೇಳದ್ದರು ಆರ್‌.ಚಂದ್ರು. ತಮ್ಮ ಮಾತಿನಂತೆ ಅವರು ಬಹುಭಾಷಾ ನಟಿ ಶ್ರೀಯಾ ಶರಣ್‌ ಅವರನ್ನು ನಾಯಕಿ ಪಾತ್ರಕ್ಕೆ ಕರೆತಂದಿದ್ದಾರೆ.

ಕಬ್ಜ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಶ್ರಿಯಾ ಒಬ್ಬರಾಗಿ ಆಯ್ಕೆಯಾಗಿದ್ದಾರೆ. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘RRR’ನಲ್ಲಿ ನಟಿಸಿರುವ ಶ್ರೀಯಾ ಸದ್ಯ ಬಹುಬೇಡಿಕೆಯ ನಟಿಯರಲ್ಲೊಬ್ಬರು. ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ನಟಿಸಿರುವ ಶ್ರೀಯಾ ಬಹಳ ದಿನಗಳ ಬಳಿಕ ಕನ್ನಡಕ್ಕೆ ಹಿಂತಿರುಗಿದ್ದಾರೆ. ಇಂದು ಅವರ ಫಸ್ಟ್‌ಲುಕ್‌ ರಿವೀಲ್‌ ಆಗಿದೆ. ನಿರ್ದೇಶಕ ಚಂದ್ರು ಆರಂಭದಲ್ಲೇ ತಮ್ಮ ‘ಕಬ್ಜ’ ಪ್ಯಾನ್‌ ಇಂಡಿಯಾ ಸಿನಿಮಾ ಎಂದೇ ಕರೆಯುತ್ತಾ ಬಂದಿದ್ದಾರೆ. ಕಳೆದೆರೆಡು ವರ್ಷಗಳಿಂದ ಚಿತ್ರೀಕರಣ ನಡೆಯುತ್ತಲೇ ಇದೆ. ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ನಟ ಶಿವರಾಜಕುಮಾರ್‌ ಸಾಧ್ಯವಾದಷ್ಟು ಬೇಗ ಸಿನಿಮಾ ಪೂರ್ಣಗೊಳಿಸಿ ಬಿಡುಗಡೆ ಮಾಡುವಂತೆ ಸಲಹೆ ಮಾಡಿದ್ದರು.

ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ಅದ್ಧೂರಿ ತಾರಾಬಳಗ, ಬೃಹತ್‌ ಸೆಟ್‌ಗಳಲ್ಲಿ ಸಿನಿಮಾ ಚಿತ್ರೀಕರಣಗೊಳ್ಳುತ್ತಿದೆ. ರವಿ ಬಸ್ರೂರು ಸಂಗೀತ, ಶಿವಕುಮಾರ್‌ ಕಲಾ ನಿರ್ದೇಶನ ಸೇರಿದಂತೆ ಬಹುತೇಕ ‘KGF’ ತಾಂತ್ರಿಕ ಬಳಗವೇ ಈ ಚಿತ್ರದಲ್ಲೂ ಇದೆ ಎನ್ನುವುದು ವಿಶೇಷ. ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ‘ಕಬ್ಜ’ ಚಿತ್ರಕ್ಕೆ ಕೊನೆಯ ಹಂತದ ಚಿತ್ರಿಕರಣ ನಡೆಯುತ್ತಿದೆ. ಬೆಂಗಳೂರು ಹಾಗೂ ಹೈದರಾಬಾದ್‌ ಮೊದಲಾದೆಡೆ ಶೂಟಿಂಗ್‌ ಸಾಗಿದ್ದು, ಆದಷ್ಟು ಶೀಘ್ರ ಚಿತ್ರೀಕರಣ ಪೂರ್ಣಗೊಳಿಸಿ ತೆರೆಗೆ ತರುವುದಾಗಿ ಹೇಳುತ್ತಾರೆ ನಿರ್ದೇಶಕ ಚಂದ್ರು.

Previous articleತಬ್ಬಿಬ್ಬುಗೊಳಿಸುವ ಅಪರಾಧಗಳ ಕೇಸ್‌ಗಳು; ಅಜಯ್‌ ದೇವಗನ್‌ ಕ್ರೈಂ – ಥ್ರಿಲ್ಲರ್‌ ‘ರುದ್ರ’
Next articleಹರ್‌ ಕಹಾನಿ ಹೈ ಜರೂರಿ | ನೆಟ್‌ಫ್ಲಿಕ್ಸ್‌ನ ಅಂತಾರಾಷ್ಟ್ರೀಯ ಮಹಿಳಾ ದಿನ ವಿಶೇಷ

LEAVE A REPLY

Connect with

Please enter your comment!
Please enter your name here