Instagramನಲ್ಲಿ ಸದ್ಯ ‘ಕರಿಮಣಿ ಮಾಲೀಕ ನೀನಲ್ಲ’ ಮತ್ತು ‘ರಾಹುಲ್ಲಾ’ ಕನ್ನಡ reelsಗಳು ಟ್ರೆಂಡಿಂಗ್‌ನಲ್ಲಿವೆ. vickypediaದ ವಿಕ್ಕಿ ಮತ್ತು ಅವರ ಸ್ನೇಹಿತರು ಈ ಎರಡೂ reelಗಳನ್ನು ಮಿಕ್ಸ್‌ ಮಾಡಿ ಹೊಸ ಟ್ವಿಸ್ಟ್‌ ಕೊಟ್ಟಿದ್ದಾರೆ! ಎರಡು ರೀಲ್‌ಗಳನ್ನು ಬೆರೆಸಿರುವ ಈ ಮಜವಾದ reel ಸದ್ಯ ಟ್ರೆಂಡಿಂಗ್‌ನಲ್ಲಿದೆ.

ಇತ್ತೀಚೆಗೆ ‘ನಾನು ನಂದಿನಿ’ ಸಾಂಗ್‌ ಮೂಲಕ vickypediaದ ವಿಕ್ಕಿ, ಅಮಿತ್‌ ಮತ್ತು ಸಚಿನ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಫೇಮಸ್‌ ಆಗಿದ್ದರು. ಈ ಸಾಂಗ್‌ ಅನ್ನು ಜನರು ಬೇರೆ ಬೇರೆ ವರ್ಷನ್‌ಗಳು ಮತ್ತು ಸಂದರ್ಭಗಳಿಗೆ ಹೊಂದಿಸಿಕೊಂಡು reel ಮಾಡಿ ಖುಷಿಪಟ್ಟಿದ್ದರು. ಇದೀಗ ವಿಕ್ಕಿ & ಟೀಮ್‌ ಮತ್ತೊಂದು ಮಜವಾದ reel ಜೊತೆ ಸುದ್ದಿಯಾಗಿದ್ದಾರೆ. ಸದ್ಯ ಟ್ರೆಂಡಿಂಗ್‌ನಲ್ಲಿರುವ ‘ಕರಿಮಣಿ ಮಾಲೀಕ ನೀನಲ್ಲ’ ಮತ್ತು ‘ರಾಹುಲ್ಲಾ’ ಕನ್ನಡ reelsಗಳನ್ನು ಬೆರೆಸಿ ಹೊಸದೊಂದು reel ಸೃಷ್ಟಿಸಿದ್ದಾರೆ. ಈ ಟೀಮ್‌ನ ಕ್ರಿಯೇಟೀವ್‌ ರೀಲ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕರಿಮಣಿ ಮಾಲೀಕ ನೀನಲ್ಲ | ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ ‘ಉಪೇಂದ್ರ’ ಚಿತ್ರದ ಹಾಡಿನ ಪಲ್ಲವಿ ಇದು. ಉಪೇಂದ್ರ ರಚನೆಯ ಗೀತೆಗೆ ಸಂಗೀತ ಸಂಯೋಜಿಸಿರುವುದು ಗುರುಕಿರಣ್‌. ಆಕಸ್ಮಾತಾಗಿ ಇತ್ತೀಚೆಗೆ ಪ್ರಸ್ತಾಪವಾದ ಈ ಪಲ್ಲವಿ ಸಖತ್‌ ಟ್ರೆಂಡಿಂಗ್‌ನಲ್ಲಿತ್ತು. ನೆಟ್ಟಿಗರು ಹಲವು ಸಂದರ್ಭಗಳಿಗೆ ಈ ಹಾಡನ್ನು ಹೊಂದಿಸಿ ರೀಲ್‌ ಮಾಡಿದರು. ಈ ಪಲ್ಲವಿ ಕಾಲರ್‌ ಟೋನ್‌ ಕೂಡ ಆಗಿಹೋಯ್ತು! ಸಂಗೀತ ನಿರ್ದೇಶಕ ಗುರುಕಿರಣ್‌ ಅವರು ಕೂಡ ಈ ಪಲ್ಲವಿಯನ್ನು ಮತ್ತೆ ಹಾಡಿ ಸುದ್ದಿಯಾಗಿದ್ದರು. ಇನ್ನು ಇತ್ತೀಚಿನ ಮತ್ತೊಂದು ಟ್ರೆಂಡಿಂಗ್‌ ಲೈನ್‌ ಎಂದರೆ ‘ರಾಹುಲ್ಲಾ’. ಬೆಳ್ಳುಳ್ಳಿ ಕಬಾಬ್‌ ಖ್ಯಾತಿಯ ಹೋಟೆಲ್‌ ಮಾಲೀಕ ಚಂದ್ರು ಅವರು ಟ್ರೆಂಡ್‌ ಮಾಡಿದ ಸಾಲುಗಳಿವು. ಈಗ ವಿಕ್ಕಿ ಮತ್ತು ಟೀಮ್‌ ಎರಡನ್ನೂ ಬೆರೆಸಿ reel ಮಾಡಿ ಸುದ್ದಿಯಲ್ಲಿದೆ.

LEAVE A REPLY

Connect with

Please enter your comment!
Please enter your name here