ಇದು ಹೊಸ ಪ್ರತಿಭೆಗಳ ಸಾಹಸ. ಕಾಲೇಜು ಹುಡುಗರ ಪ್ರೇಮಕತೆಯೊಂದನ್ನು ‘ಖಾಸಗಿ ಪುಟಗಳು’ ಚಿತ್ರದಲ್ಲಿ ಹೇಳಲು ಹೊರಟಿದ್ದಾರೆ ನಿರ್ದೇಶಕ ಸಂತೋಷ್‌ ಶ್ರೀಕಂಠಪ್ಪ. ವಿಶ್ವ ಮತ್ತು ಶ್ವೇತಾ ಡಿಸೋಜಾ ಪ್ರಮುಖ ಪಾತ್ರಧಾರಿಗಳು.

ಕನ್ನಡ ಸಿನಿ ಜಗತ್ತಿನಲ್ಲಿ ಹೊಸಬರ ಹೊಸತನದ ಒಂದಷ್ಟು ಸಿನಿಮಾಗಳು ಸದ್ದು ಮಾಡುತ್ತಿವೆ. ಈ ಸಾಲಿಗೆ ‘ಖಾಸಗಿ ಪುಟಗಳು’ ಎಂಬ ಹೊಸಬರ ಸಿನಿಮಾ ಮತ್ತೊಂದು ಸೇರ್ಪಡೆ. ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಕಡಲ ತಡಿಯಲ್ಲಿ ಕುಳಿತ ಪ್ರೇಮಿಗಳ ಆಕರ್ಷಕ ಫೋಟೊ ಬಿಡುಗಡೆಯಾಗಿದೆ. ‘ಖಾಸಗಿ ಪುಟಗಳು’ ಎಂಬ ವಿಶಿಷ್ಟ ಶೀರ್ಷಿಕೆಯ ಸಿನಿಮಾವನ್ನು ಸಂತೋಷ್ ಶ್ರೀಕಂಠಪ್ಪ ನಿರ್ದೇಶನ ಮಾಡುತ್ತಿದ್ದು, ಇದು ಇವರ ಮೊದಲ ಸಿನಿಮಾ. ಒಂದಷ್ಟು ಶಾರ್ಟ್‌ಮೂವಿಯಲ್ಲಿ ನಟಿಸಿದ್ದ ವಿಶ್ವ ಹಾಗೂ ಹಿಂದಿಯಲ್ಲಿ ‘ವೈ’ ಅನ್ನುವ ಸಿನಿಮಾವೊಂದರಲ್ಲಿ ನಟಿಸಿರುವ ಶ್ವೇತಾ ಡಿಸೋಜಾ ಈ ಸಿನಿಮಾದ ನಾಯಕಿ.

ಉಡುಪಿಯ ಚೆಂದದ ಕರಾವಳಿ ತೀರದಲ್ಲಿ ಹುಟ್ಟುವ ಕಾಲೇಜು ಹುಡುಗರ ಪ್ರೇಮವೇ ಚಿತ್ರದ ಪ್ರಧಾನ ಕಥಾಹಂದರ. ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯದಲ್ಲಿಯೇ ಸಿನಿಮಾ ತಂಡ ಹಾಡುಗಳನ್ನು ರಿಲೀಸ್ ಮಾಡಲಿದೆ. ಚೇತನ್‌ ದುರ್ಗಾ, ನಂದಕುಮಾರ್‌, ನಿರೀಕ್ಷಾ ಶೆಟ್ಟಿ, ಮೈಸೂರು ದಿನೇಶ್‌ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಮಂಜು ಡಿ ರಾಜ್, ವೀಣಾ ಡಿ ರಾಜ್, ಮಂಜುನಾಥ್ ಡಿಎಸ್ ಖಾಸಗಿ ಪುಟಗಳು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಉಳಿದಂತೆ ವಿಶ್ವಜಿತ್ ರಾವ್ ಛಾಯಾಗ್ರಾಹಣ, ಆಶಿಕ್ ಕುಸುಗೊಳಿ ಸಂಕಲನ, ವಾಸುಕಿ ವೈಭವ್ ಸಂಗೀತ, ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಹಾಗೂ ವಿಶ್ವಜಿತ್ ರಾವ್ ಸಾಹಿತ್ಯ ಸಿನಿಮಾಕ್ಕಿದೆ.

Previous article‘ಅಲಂಕಾರ್ ವಿದ್ಯಾರ್ಥಿ’ ಪ್ರಮೋದ್‌; ಲಾಸ್ಟ್‌ ಬೆಂಚ್‌ ಸ್ಟೂಡೆಂಟ್‌ ಕಷ್ಟ-ಸುಖ
Next articleಕರ್ನಾಟಕ ಡಿಜಿಟಲ್ ಮೀಡಿಯಾ ಫೋರಂ; ಕನ್ನಡ ಮಾಧ್ಯಮ ಲೋಕದಲ್ಲೊಂದು ಹೊಸ ಹೆಜ್ಜೆ

LEAVE A REPLY

Connect with

Please enter your comment!
Please enter your name here