ಧನಂಜಯ ಅಭಿನಯದ ‘ಕೋಟಿ’ ಸಿನಿಮಾದ ಪ್ರೀರಿಲೀಸ್‌ ಇವೆಂಟ್‌ ಇತ್ತೀಚೆಗೆ ನಡೆದಿದೆ. ನಟ ಸುದೀಪ್‌ ಅವರು ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ಇವೆಂಟ್‌ನಲ್ಲಿ ಚಿತ್ರತಂಡದ ಎಲ್ಲರೂ ಪಾಲ್ಗೊಂಡಿದ್ದಾರೆ. ಇದೇ ವೇಳೆ ಸುದೀಪ್‌ ಚಿತ್ರದ ನೂತನ ಪೋಸ್ಟರ್‌ ಅನಾವರಣಗೊಳಿಸಿದ್ದಾರೆ. ಇದೇ ಜೂನ್‌ 14ರಂದು ಸಿನಿಮಾ ತೆರೆಕಾಣಲಿದೆ.

ಪರಮ್‌ ನಿರ್ದೇಶನದಲ್ಲಿ ಧನಂಜಯ ನಟಿಸಿರುವ ‘ಕೋಟಿ’ ಸಿನಿಮಾದ ಪ್ರೀರಿಲೀಸ್‌ ವಿಶೇಷ ಟೀವಿ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಈ ಕಾರ್ಯಕ್ರಮವನ್ನು ‘ಕೋಟಿ ಮನರಂಜನೆ’ ಎಂದೇ ಕರೆಯಲಾಗಿದೆ. ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ಡಾಲಿ ಧನಂಜಯ ಸೇರಿದಂತೆ ನಾಯಕಿ ಮೋಕ್ಷಾ‌ ಕುಶಾಲ್ ಮತ್ತು ಹಿರಿಯ ತಾರೆಗಳಾದ ತಾರಾ ಅನುರಾಧ, ರಂಗಾಯಣ ರಘು, ರಮೇಶ್ ಇಂದಿರಾ, ಸರ್ದಾರ್ ಸತ್ಯ ಪಾಲ್ಗೊಂಡರು. ನಟ ಸುದೀಪ್‌ ಅತಿಥಿಯಾಗಿ ಪಾಲ್ಗೊಂಡು ವಿಶೇಷ ಮೆರುಗು ತಂದಿದ್ದಾರೆ. ವಿಶೇಷ ಲೈಟಿಂಗ್ ಮತ್ತು ಕೋರಿಯಾಗ್ರಫಿಯ‌ ಮೂಲಕ ಎಂಟ್ರಿಯಾದ ನಟ ಸುದೀಪ್‌ ಸುಮಾರು ಒಂದು ತಾಸಿಗೂ ಹೆಚ್ಚಿನ ಕಾಲ ವೇದಿಕೆಯ ಮೇಲಿದ್ದು ನೆರೆದಿದ್ದ ಜನರನ್ನು ಹಾಸ್ಯಭರಿತ ಮಾತುಗಳಿಂದ ರಂಜಿಸಿದರು. ನಿರೂಪಕ ಅಕುಲ್ ಬಾಲಾಜಿ ಮತ್ತು ಸುದೀಪ್ ಮಾತುಕತೆ ಪ್ರೇಕ್ಷಕರಿಗೆ ಕಚಗುಳಿ ನೀಡಿತು. ಇದೇ ವೇಳೆ ಸುದೀಪ್ ‘ಕೋಟಿ’ ಚಿತ್ರದ ಹೊಸ ಪೋಸ್ಟರನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಕೋರಿದರು.

ಕೋಟಿಯ ನಾಯಕಿ ಮೋಕ್ಷಾ ಅವರ ಡಾನ್ಸ್ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ದೊರೆಯಿತು. ಕೋಟಿಯ ಇತರ ನಟ ನಟಿಯರಿಂದ ವಿಶೇಷ ಡಾನ್ಸ್ ಕಾರ್ಯಕ್ರ‌ಮಗಳು ಮತ್ತು ಗಿಚ್ಚಿ ಗಿಲಿಗಿಲಿ ತಂಡದಿಂದ ಹಾಸ್ಯ ಕಾರ್ಯಕ್ರಮ ನಡೆದವು. ಹೀರೋ ಧನಂಜಯ ಅವರಿಗಾಗಿ ಮಕ್ಕಳು ಮಾಡಿದ ವಿಶೇಷ ಡಾನ್ಸ್ ಕಾರ್ಯಕ್ರಮ ‘ಕೋಟಿ ಮನರಂಜನೆ’ಯ ಪ್ರಮುಖ ಆಕರ್ಷಣೆಗಳಲ್ಲೊಂದು. ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ವಾಸುಕಿ ವೈಭವ್ ‘ಕೋಟಿ’ ಸಿನಿಮಾದ ಹಾಡುಗಳನ್ನು ಹಾಡಿದರು. ಕೋಟಿಯ ಹಾಡುಗಳಿಗೆ ಸಾಹಿತ್ಯ ರಚಿಸಿರುವ ಯೋಗರಾಜ್ ಭಟ್, ‘ಕನ್ನಡದ ಜನತೆಗಾಗಿ ಯಾರೇ ಕಷ್ಟಪಟ್ಟರೂ ನಾಡಿನ ಜನತೆ ಅವರ ಕೆಲಸವನ್ನು ಗೆಲ್ಲಿಸುತ್ತಾರೆ’ ಎಂದರು.‌ ದಶಕಗಳ ಕಾಲ ಕಲರ್ಸ್ ಕನ್ನಡ ಚಾನೆಲ್‌ ಮುನ್ನಡೆಸಿದ್ದ ಪರಮ್ ಅವರಿಗೆ ಚಾನೆಲ್ಲಿನ ಸಿಬ್ಬಂದಿ ವಿಶೇಷ ವಿಡಿಯೋ ಮೂಲಕ ಶುಭ ಕೋರಿದರು. ಕಲರ್ಸ್ ಕನ್ನಡ ಮೂಲಕ ಯಶಸ್ಸು ಪಡೆದ ಚಂದನ್ ಶೆಟ್ಟಿ, ನಿವೇದಿತಾ ಗೌಡ, ವಿಜಯ್ ಸೂರ್ಯ, ರಕ್ಷಿತ್, ಶೈನ್ ಶೆಟ್ಟಿ, ಮಯೂರಿ, ಅಂಕಿತಾ ಅಮರ್, ನೇಹಾ ಗೌಡ, ಅಕುಲ್ ಬಾಲಾಜಿ ಮುಂತಾದವರು ಪರಮ್‌ ಅವರ ಹೊಸ ಪಯಣಕ್ಕೆ ಶುಭ ಹಾರೈಸಿದರು. ‘ಕೋಟಿ ಮನರಂಜನೆ’ ಕಾರ್ಯಕ್ರಮ ಇದೇ ಜೂನ್ 2ರಂದು ಸಂಜೆ 7.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಜಿಯೋ ಸ್ಟುಡಿಯೋಸ್ ನಿರ್ಮಾಣದ ‘ಕೋಟಿ’ ಸಿನಿಮಾ ಜೂನ್ 14ರಂದು ರಿಲೀಸ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here