ಭಾರತದ ಖ್ಯಾತ ಚಿತ್ರನಿರ್ದೇಶಕ ಮಣಿರತ್ನಂ ಮತ್ತು ಇಟಲಿ ಚಿತ್ರನಿರ್ದೇಶಕ Luca Guadagnino ಅವರನ್ನು Jio MAMI ಮುಂಬೈ ಚಲನಚಿತ್ರೋವದಲ್ಲಿ ಗೌರವಿಸಲಾಗುತ್ತಿದೆ. ಮಣಿರತ್ನಂ ‘Excellence in Cinema, South Asia’ ಮತ್ತು Luca Guadagnino ಅವರು ‘Excellence in Cinema, International’ ಪ್ರಶಸ್ತಿಗಳಿಗೆ ಭಾಜನರಾಗುತ್ತಿದ್ದಾರೆ.

Jio MAMI ಮುಂಬೈ ಚಲನಚಿತ್ರೋತ್ಸವದಲ್ಲಿ ಮಣಿರತ್ನಂ ಮತ್ತು Luca Guadagnino ಅವರನ್ನು ಗೌರವಿಸಲು ನಿರ್ಧರಿಸಲಾಗಿದೆ. ಸಿನಿಮಾ ಜಗತ್ತಿಗೆ ಅವರ ದೀರ್ಘಕಾಲೀನ ಕೊಡುಗೆಗಾಗಿ ‘Excellence in Cinema’ ಪ್ರಶಸ್ತಿಯನ್ನು ಅವರು ಸ್ವೀಕರಿಸಲಿದ್ದಾರೆ. ಮಣಿರತ್ನಂ ‘Excellence in Cinema, South Asia’ ಮತ್ತು Luca Guadagnino ಅವರು ‘Excellence in Cinema, International’ ಪ್ರಶಸ್ತಿಗಳಿಗೆ ಭಾಜನರಾಗುತ್ತಿದ್ದಾರೆ. ‘ಈ ಪ್ರತಿಭಾವಂತರಿಗೆ ಪ್ರಶಸ್ತಿ ನೀಡುವುದು ಒಂದು ಸೌಭಾಗ್ಯ. ಸಿನಿಮಾ ಹೇಗಿರಬಹುದು ಎಂಬ ನಮ್ಮ ಕಲ್ಪನೆಗಳನ್ನು ಅವರು ಮರು ವ್ಯಾಖ್ಯಾನಿಸುವುದರ ಜೊತೆಗೆ ವಿಸ್ತರಿಸಿದ್ದಾರೆ. Jio MAMIಯಲ್ಲಿ ಅವರನ್ನು ಗೌರವಿಸಲು ನಾವು ಎದುರು ನೋಡುತ್ತಿದ್ದೇವೆ’ ಎಂದು Jio MAMI ಮುಂಬೈ ಫಿಲ್ಮ್ ಫೆಸ್ಟಿವಲ್‌ ಅಧ್ಯಕ್ಷ ಅನುಪಮಾ ಚೋಪ್ರಾ ತಿಳಿಸಿದ್ದಾರೆ.

ಈ ಉತ್ಸವವು ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಎರಡು ಭಾಗಗಳನ್ನು ಮತ್ತು Luca Guadagnino ಅವರ 2009ರ ಗೋಲ್ಡನ್ ಗ್ಲೋಬ್ ನಾಮನಿರ್ದೇಶಿತ ಚಲನಚಿತ್ರ ‘I Am Love’ ಸಿನಿಮಾಗಳನ್ನು ಪ್ರದರ್ಶಿಸಲಿದೆ. ಮಣಿರತ್ನಂ ಭಾರತೀಯ ಚಿತ್ರರಂಗದ ಗೌರವಾನ್ವಿತ ಮತ್ತು ಹೆಸರಾಂತ ಚಿತ್ರ ನಿರ್ದೇಶಕರಲ್ಲೊಬ್ಬರು. ಇವರು ‘ನಾಯಗನ್’, ‘ರೋಜಾ’, ‘ಬಾಂಬೆ’, ‘ಇರುವರ್’, ‘ದಿಲ್ ಸೆ’, ‘ಅಲೈಪಾಯುತೆ’, ‘ಗುರು’ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ದೆಶಿಸಿ ಅವರದೇ ಆದ ಛಾಪು ಮೂಡಿಸಿದ್ದಾರೆ. Luca Guadagnino ಅವರು ಕಳೆದ ಎರಡು ದಶಕಗಳಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ‘ಎ ಬಿಗ್ಗರ್ ಸ್ಪ್ಲಾಶ್ʼ (A Bigger Splash), ‘ಕಾಲ್ ಮಿ ಬೈ ಯುವರ್ ನೇಮ್’ (Call Me By Your Name), ‘ಸಸ್ಪಿರಿಯಾ’ (Suspiria), ‘ಚಾಲೆಂಜರ್ಸ್‌’ (Challengers) ಚಿತ್ರಗಳನ್ನು ನಿರ್ದೇಶಿಸಿದ್ದಾರೆ. Jio MAMI ಮುಂಬೈ ಚಲನಚಿತ್ರೋತ್ಸವದ 2023ರ ಆವೃತ್ತಿಯು ನವೆಂಬರ್ 5ರವರೆಗೆ ನಡೆಯಲಿದೆ.

LEAVE A REPLY

Connect with

Please enter your comment!
Please enter your name here