ಶರತ್‌ ಕುಮಾರ್‌, ಅಶೋಕ್‌ ಸೆಲ್ವನ್‌, ನಿಖಿಲಾ ವಿಮಲ್‌ ಅಭಿನಯದ ‘ಪೋರ್ ತೋಝಿಲ್’ ಕಾಲಿವುಡ್‌ನ ಅತ್ಯುತ್ತಮ ಥ್ರಿಲ್ಲರ್‌ಗಳಲ್ಲೊಂದು ಎನಿಸಿಕೊಂಡಿದೆ. ಸರ್ಪ್ರೈಸ್‌ ಹಿಟ್‌ ಸಿನಿಮಾ ಪಟ್ಟಿಗೆ ಸೇರ್ಪಡೆಗೊಂಡಿರುವ ಸಿನಿಮಾವನ್ನು ವಿಮರ್ಶಕರು ಹಾಗೂ ಪ್ರೇಕ್ಷಕರು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ.

ವಿಘ್ನೇಶ್‌ ರಾಜ್‌ ನಿರ್ದೇಶನದ ‘ಪೋರ್‌ ತೋಝಿಲ್‌’ ಕಾಲಿವುಡ್‌ನ ಸರ್ಪ್ರೈಸ್‌ ಹಿಟ್‌ ಚಿತ್ರಗಳ ಸಾಲಿಗೆ ಸೇರ್ಪಡೆಗೊಂಡಿದೆ. ಕಳೆದ ಶುಕ್ರವಾರ ತೆರೆಕಂಡ ಸಿನಿಮಾ ವಿಮರ್ಶಕರು ಹಾಗೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಾಲಿವುಡ್‌ನಲ್ಲಿ ಸರ್ಪ್ರೈಸ್‌ ಹಿಟ್‌ ಎನಿಸಿಕೊಂಡಿದ್ದ ಕೊನೆಯ ಸಿನಿಮಾ ‘ಲವ್‌ ಟುಡೇ’. ಸ್ಟಾರ್‌ ನಟರಿಲ್ಲದ ಈ ಸಿನಿಮಾ ಕತೆ, ನಿರೂಪಣೆಯಿಂದಲೇ ಗೆದ್ದಿತ್ತು. ಇದೇ ಪಟ್ಟಿಗೆ ಸೇರ್ಪಡೆಯಾಗಿದೆ ‘ಪೋರ್‌ ತೋಝಿಲ್‌’. ತೆರೆಕಂಡ ನಾಲ್ಕು ದಿನಗಳಲ್ಲಿ ಆರು ಕೋಟಿಗೂ ಅಧಿಕ ಹಣ ಗಳಿಸಿದೆ ಸಿನಿಮಾ. ಜೂನ್‌ 15ರಂದು ಸಿಂಗಾಪುರ, ಆಸ್ಟ್ರೇಲಿಯಾ ಮತ್ತು ಗಲ್ಫ್‌ ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ವಾರ ತಮಿಳು ನಾಡಿನಲ್ಲೂ ಚಿತ್ರದ ಶೋಗಳು ಹೆಚ್ಚಲಿವೆ.

ಹಿರಿಯ ನಟ ಶರತ್ ಕುಮಾರ್ ಮತ್ತು ಅಶೋಕ್ ಸೆಲ್ವನ್ ಅಭಿನಯದ ಕ್ರೈಂ – ಡ್ರಾಮಾದ ಯಶಸ್ಸಿಗೆ ಕಾರಣಗಳೇನು? ಕತೆ ಮತ್ತು ಪ್ರೇಕ್ಷಕರನ್ನು ಹಿಡಿದು ಕೂರಿಸುವ ಬಿಗಿಯಾದ ಚಿತ್ರಕಥೆ ಎನ್ನುತ್ತಿದ್ದಾರೆ ವಿಮರ್ಶಕರು. ತಮಿಳಿನ ಅತ್ಯುತ್ತಮ ಥ್ರಿಲ್ಲರ್‌ಗಳಲ್ಲೊಂದು ಎನ್ನುವ ಹೆಗ್ಗಳಿಕೆ ಚಿತ್ರಕ್ಕೆ ಸಂದಿದೆ. ಯುವ ಪ್ರತಿಭೆ ವಿಘ್ನೇಶ್ ರಾಜ್‌ ಚೊಚ್ಚಲ ನಿರ್ದೇಶನದ ಸಿನಿಮಾದ ನಾಯಕಿಯಾಗಿ ನಿಖಿಲಾ ವಿಮಲ್‌ ನಟಿಸಿದ್ದಾರೆ. E4 ಎಕ್ಸ್‌ಪೆರಿಮೆಂಟ್ಸ್‌ ಮತ್ತು ಎಪ್ರಿಯಸ್ ಸ್ಟುಡಿಯೋ ಸಹಯೋಗದಲ್ಲಿ ಅಪ್ಲಾಸ್ ಎಂಟರ್ ಟೇನ್‌ಮೆಂಟ್‌ ಈ ಚಿತ್ರ ನಿರ್ಮಾಣ ಮಾಡಿದೆ. ಹೀರೋ ಅಶೋಕ್‌ ಸೆಲ್ವನ್‌ ವೃತ್ತಿಬದುಕಿನ ಮಹತ್ವದ ಚಿತ್ರವಾಗಿ ‘ಪೋರ್‌ ತೋಝಿಲ್‌’ ಹೊರಹೊಮ್ಮಿದೆ.

Previous article
Next articleಆರ್ಕೆಸ್ಟ್ರಾ ತಂಡಗಳ ಒಳಗಿನ ಬದುಕು – ‘ಆರ್ಕೇಸ್ಟ್ರಾ ಮೈಸೂರು’

LEAVE A REPLY

Connect with

Please enter your comment!
Please enter your name here