ಮಾಧ್ಯಮ ಅನೇಕ ಸಂಸ್ಥೆ ನಿರ್ಮಾಣದ ‘Match made in Kundapra’ ವೆಬ್‌ ಸರಣಿ ಟೈಟಲ್‌ ಸಾಂಗ್‌ ಟೀಸರ್‌ ಬಿಡುಗಡೆಯಾಗಿದೆ. ಪ್ರತಿಭಾವಂತ ಕಲಾವಿದರು ಅಭಿನಯಿಸಿರುವ ಕುಂದಗನ್ನಡದ ವೆಬ್‌ ಸರಣಿಯಿದು. ಈ ಸರಣಿಯ ಟ್ರೇಲರ್ ಮತ್ತು ಹಾಡು ಇದೇ ಆಗಸ್ಟ್‌ 18, 2024ರಂದು ಭಾನುವಾರ ಬೆಂಗಳೂರು ಅರಮನೆ ಮೈದಾನದಲ್ಲಿ ಬಿಡುಗಡೆಯಾಗಲಿದೆ. ಭಾಸ್ಕರ್‌ ಬಂಗೇರ ಈ ಗೀತೆ ರಚಿಸಿದ್ದು, ರವಿ ಬಸ್ರೂರು ಹಾಡಿದ್ದಾರೆ.

ಮಾಧ್ಯಮ ಅನೇಕ ಸಂಸ್ಥೆ ನಿರ್ಮಾಣದ ‘Match made in Kundapra’ ನೂತನ ವೆಬ್‌ ಸರಣಿ ಟೀಸರ್‌ ಬಿಡುಗಡೆಯಾಗಿದೆ. ಕುಂದಾಪುರದಲ್ಲಿ ನಡೆಯುವ ಹಾಸ್ಯಭರಿತ ಕಥಾಹಂದರವಿರುವ ಯುವದಂಪತಿಗಳಿಬ್ಬರ ಕಥೆಯಿದು. ಕುಂದಗನ್ನಡದ ಈ ಸರಣಿಯಲ್ಲಿ ಕುಂದಾಪುರ ಮತ್ತು ಕರಾವಳಿ ಭಾಗದ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ. ಸರಣಿಯನ್ನು ಸಂಪೂರ್ಣವಾಗಿ ಕುಂದಾಪುರ ಮತ್ತು ಸುತ್ತಮುತ್ತಲಿನ ರಮಣೀಯ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಸರಣಿಯ ಟ್ರೇಲರ್ ಮತ್ತು ಹಾಡು ಇದೇ ಆಗಸ್ಟ್‌ 18, 2024ರಂದು ಭಾನುವಾರ ಬೆಂಗಳೂರು ಅರಮನೆ ಮೈದಾನದಲ್ಲಿ ಬಿಡುಗಡೆಯಾಗಲಿದೆ. ಭಾಸ್ಕರ್‌ ಬಂಗೇರ ಈ ಗೀತೆ ರಚಿಸಿದ್ದು, ರವಿ ಬಸ್ರೂರು ಹಾಡಿದ್ದಾರೆ. ಸಂಗೀತ ಸಂಯೋಜನೆ ಕಾರ್ತೀಕ್‌ ಶರ್ಮ.

‘ಮಾಧ್ಯಮ ಅನೇಕ’ ಸಂಸ್ಥೆಯು ಕನ್ನಡದ ವಿವಿಧ dialectಗಳಲ್ಲಿ ಮನೋರಂಜನಾ ಕಾರ್ಯಕ್ರಮಗಳನ್ನು ನಿರ್ಮಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ‘Super Couple’ ಒಂದು ಜನಪ್ರಿಯ ಸರಣಿ. ‘Super Couple’ ಬೆಂಗಳೂರು ಕನ್ನಡ ಮತ್ತು ಉತ್ತರ ಕರ್ನಾಟಕದ ಕನ್ನಡ ಮಿಳಿತಗೊಂಡು ಜನರನ್ನು ಮನರಂಜಿಸಿದ ಸರಣಿ. ಇದೀಗ ಕುಂದಗನ್ನಡದ ‘Match made in Kundapra’ ಸರಣಿ ಸಿದ್ಧವಾಗಿದೆ. ಸರಣಿಯ ಟ್ರೇಲರ್ ಮತ್ತು ಹಾಡು ನಾಡಿದ್ದು (ಆಗಸ್ಟ್‌ 18) ‘ಕುಂದಾಪ್ರ ಕನ್ನಡ ಹಬ್ಬ 2024’ದಲ್ಲಿ ಬಿಡುಗಡೆಯಾಗಲಿವೆ. ಭಾಷೆ – ಬದುಕು ಸಂಭ್ರಮಿಸುವ ಈ ‘ವಿಶ್ವ ಕುಂದಾಪುರ ದಿನಾಚರಣೆ’ಯ ಸಂಭ್ರಮಾಚರಣೆಯಲ್ಲಿ ಕುಂದಾಪುರ ಕನ್ನಡ ಪ್ರತಿಷ್ಠಾನದ ಜೊತೆಗೆ ಈ ವರ್ಷ ನಮ್ಮ ‘ಮಾಧ್ಯಮ ಅನೇಕ’ ಸಂಸ್ಥೆಯು ಕೈಜೋಡಿಸುತ್ತಿದೆ.

LEAVE A REPLY

Connect with

Please enter your comment!
Please enter your name here