ಅಮೆರಿಕದಲ್ಲಿ ಜನಪ್ರಿಯತೆ ಗಳಿಸಿರುವ ಸಂಗೀತ ನಿರ್ದೇಶಕ ಮೆರ್ಲಿನ್‌ ಬಾಬಾಜಿ ನೂತನ ವೀಡಿಯೋ ಆಲ್ಬಂನಲ್ಲಿ ನಟಿ ಇತಿ ಆಚಾರ್ಯ ಕಾಣಿಸಿಕೊಳ್ಳುತ್ತಿದ್ದಾರೆ. ‘ಕವಚ’ ಸಿನಿಮಾ ಖ್ಯಾತಿಯ ಇತಿ ಆಚಾರ್ಯ ಅವರ ವೃತ್ತಿಬದುಕಿಗೆ ಇದು ತಿರುವು.

‘ಕವಚ’ ಸಿನಿಮಾ ಖ್ಯಾತಿಯ ನಟಿ, ನಿರ್ಮಾಪಕಿ ಇತಿ ಆಚಾರ್ಯ ಅಮೇರಿಕನ್ ಮ್ಯೂಸಿಕ್ ವೀಡಿಯೋದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೆರ್ಲಿನ್ ಬಾಬಾಜಿ ಅಮೇರಿಕದಲ್ಲಿ ಖ್ಯಾತಿ ಗಳಿಸಿರುವ ಗಾಯಕ ಮತ್ತು ಸಂಗೀತ ನಿರ್ದೇಶಕ. ಕಳೆದ ವರ್ಷ ಇವರ ‘ವೈಬ್ಸ್’ ಸಾಂಗ್ ಜನಪ್ರಿಯವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ‘ವೈಬ್ಸ್’ ಹತ್ತು ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಇದೀಗ ಮತ್ತೊಂದು ವೀಡಿಯೋ ಸಾಂಗ್ ಮೂಲಕ ಮೆರ್ಲಿನ್ ಬರುತ್ತಿದ್ದಾರೆ. ತಮ್ಮ ಹೊಸ ವೀಡಿಯೋ ಹಾಡಿಗೆ ಅವರು ನಟಿ ಹಾಗೂ ಮಾಡೆಲ್ ಇತಿ ಆಚಾರ್ಯ ಜೊತೆ ಕೈ ಜೋಡಿಸಿದ್ದಾರೆ.

”ಮೆರ್ಲಿನ್ ಬಾಬಾಜಿ ಕಳೆದ ಒಂದು ವರ್ಷದಿಂದ ನನಗೆ ಪರಿಚಿತರು. ಅವರ ಸಂಗೀತದ ದೊಡ್ಡ ಅಭಿಮಾನಿ ನಾನು. ‘ಲವ್ ಹರ್ ಟೂ ಮಚ್’ ಸಾಂಗ್ ಕೇಳಿದ ಮೇಲೆ ತುಂಬಾ ಇಷ್ಟವಾಯ್ತು. ನಾನು ಈ ಹಾಡಿನಲ್ಲಿ ನಟಿಸುವೆ. ಅಮೇರಿಕಾದಲ್ಲಿ ನನ್ನ ಸಹೋದರ ನೆಲೆಸಿರೋದು ಅಲ್ಲಿನ ಜನರೊಂದಿಗೆ ಸಂಪರ್ಕ ಸಾಧಿಸಲು ಸಹಾಯವಾಯ್ತು” ಎನ್ನುತ್ತಾರೆ ಇತಿ ಆಚಾರ್ಯ. ಅವರ ಸಹೋದರ ಅಭಿ ಆಚಾರ್ಯ ಕೂಡ ಅಮೇರಿಕಾದಲ್ಲಿ ಸಂಗೀತ ಕಲಾವಿದ. 2023ರ ಗ್ರ್ಯಾಮಿ ಅವಾ‌ರ್ಡ್‌ಗೆ ಇವರ ಹೆಸರು ನಾಮ ನಿರ್ದೇಶನವಾಗಿತ್ತು.

ನಟಿ ಹಾಗೂ ಮಾಡೆಲ್ ಇತಿ ಆಚಾರ್ಯ 2016ರ ಮಿಸ್ ಸೌತ್ ಇಂಡಿಯಾ ವಿನ್ನರ್. RVSP ಪ್ರೊಡಕ್ಷನ್ ಹೌಸ್‌ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ಒಳಗೊಂಡಂತೆ ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಇತಿ ಆಚಾರ್ಯ ಬ್ಯುಸಿಯಾಗಿದ್ದಾರೆ. 2022ರ ಕೇನ್ಸ್‌ ಫಿಲ್ಮಂ ಫೆಸ್ಟ್ ರೆಡ್ ಕಾರ್ಪೆಟ್‌ನಲ್ಲಿ ಇತಿ ಹೆಜ್ಜೆ ಹಾಕಿದ್ದಾರೆ. ಇದೀಗ ಮೆರ್ಲಿನ್ ಬಾಬಾಜಿ ಆಲ್ಬಂ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವ ಹಾದಿಯಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here