ಅಮೇರಿಕಾದ ಗಾಯಕಿ, ಗೀತರಚನೆಕಾರ್ತಿ, ನಟಿ ಮಿಲಿ ಸೈರಸ್‌ ಅವರ ಎರಡು ದಶಕಗಳ ಸಂಗೀತ ಬದುಕಿಗೆ ಈ ಬಾರಿಯ ಗ್ರ್ಯಾಮಿ ವಿಶೇಷ ಸ್ಥಾನಮಾನ ತಂದುಕೊಟ್ಟಿದೆ. ‘ಫ್ಲವರ್ಸ್‌’ ಗೀತೆಗಾಗಿ ‘ಅತ್ಯುತ್ತಮ ಪಾಪ್ ಸೋಲೋ ಪ್ರದರ್ಶನ’ ಮತ್ತು ‘ವರ್ಷದ ರೆಕಾರ್ಡ್’ ವಿಭಾಗಗಳಲ್ಲಿ ಅವರು ಎರಡು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Miley Cyrus ಅವರು ‘ಫ್ಲವರ್ಸ್‌’ ಗೀತೆಗಾಗಿ ‘ಅತ್ಯುತ್ತಮ ಪಾಪ್ ಸೋಲೋ ಪ್ರದರ್ಶನ’ ಮತ್ತು ‘ವರ್ಷದ ರೆಕಾರ್ಡ್’ ವಿಭಾಗಗಳಲ್ಲಿ ಎರಡು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರು ಈ ಹಿಂದೆ ಎಂಟು ಬಾರಿ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. 20 ವರ್ಷಗಳ ಸಂಗೀತ ವೃತ್ತಿ ಜೀವನದಲ್ಲಿ ಅವರಿಗೆ ಮರೆಯಾಗದ ಅದ್ಬುತ ಕ್ಷಣಗಳನ್ನು ಈ ಬಾರಿಯ ಗ್ರ್ಯಾಮಿ ವೇದಿಕೆಯು ಕಲ್ಪಿಸಿಕೊಟ್ಟಿದೆ. Miley Cyrus ಅವರು ಅಮೇರಿಕಾದ ಗಾಯಕಿ, ಗೀತರಚನೆಕಾರ್ತಿ ಮತ್ತು ನಟಿಯಾಗಿ ಖ್ಯಾತಿ ಗಳಿಸಿದ್ದಾರೆ. ಸೈರಸ್‌, ತಮ್ಮ ತಂದೆ ನಿರ್ದೇಶಿಸಿದ್ದ 2003ರ ದೂರದರ್ಶನ ಸರಣಿ ‘ಡಾಕ್‌’ನ ‘ಕೈಲಿ’ ಹೆಸರಿನ ಬಾಲನಟಿಯಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ದೂರದರ್ಶನದ ‘Hannah Montana’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. 2009ರಲ್ಲಿ ಲೇಖಕ ನಿಕೋಲಸ್ ಸ್ಪಾರ್ಕ್ಸ್ ಅವರ ರೂಪಾಂತರ ಕಾದಂಬರಿ ‘ದಿ ಲಾಸ್ಟ್ ಸಾಂಗ್‌’ನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. 2013ರಲ್ಲಿ ಮಿಲೀ ಅವರು ತಮ್ಮ ಸ್ಟುಡಿಯೋದ ನಾಲ್ಕನೇ ಆಲ್ಬಮ್ ‘ಬ್ಯಾಂಗರ್ಜ್‌’ನಲ್ಲಿ ಅದ್ಬುತ ಪ್ರದರ್ಶನ ನೀಡಿದ್ದರು. ಇದು ವಿ ಕಾಂಟ್ ಸ್ಟಾಪ್, ವ್ರೆಕಿಂಗ್ ಬಾಲ್ ಸೇರಿದಂತೆ ಅನೇಕ ಹಿಟ್‌ ಗೀತೆಗಳನ್ನು ಒಳಗೊಂಡಿದೆ.

2016ರಲ್ಲಿ ತಮ್ಮ ಐದನೇ ಸ್ಟುಡಿಯೋ ಆಲ್ಬಂ ಬಿಡುಗಡೆಯಾದ ನಂತರ ಸೈರಸ್ ತಮ್ಮ ಆರನೇ ಸ್ಟುಡಿಯೋ ಕೆಲಸ ಮಾಡಲು ಪುನರಾರಂಭಿಸಿದರು. ಇದರ ಯಶಸ್ಸಿನ ನಂತರ ಮೇ 31, 2019ರಂದು, ಸೈರಸ್ ತಮ್ಮ ಏಳನೇ ಸ್ಟುಡಿಯೋ ಆಲ್ಬಮ್ ಅನ್ನು ‘ಶೀ ಈಸ್ ಮಿಲೀ ಸೈರಸ್’ ಶೀರ್ಷಿಕೆಯೊಂದಿಗೆ ರಚಿಸಿದರು. ಸಂಗೀತ ರಿಯಾಲಿಟಿ ಸ್ಪರ್ಧೆ ‘ದಿ ವಾಯ್ಸ್‌’ನ ಹತ್ತನೇ ಸೀಸನ್ನಿನಲ್ಲಿ ಪ್ರಮುಖ ಸಲಹೆಗಾರ್ತಿಯಾಗಿ ನೇಮಕಗೊಂಡರು. ನಂತರ ಸೈರಸ್ ಗ್ವೆನ್ ಸ್ಟೆಫಾನಿ ಬದಲಿಯಾಗಿ ‘ದಿ ವಾಯ್ಸ್‌’ ಶೋನ ಹನ್ನೊಂದನೇ ಸೀಸನ್‌ಗೆ ಅತೀ ಚಿಕ್ಕ ವಯಸ್ಸಿಗೆ ಪ್ರಮುಖ ತರಬೇತುದಾರರಾಗಿ ನೇಮಗೊಂಡರು. 2016ರಲ್ಲಿ Amazon Studious ಗಾಗಿ ವುಡಿ ಅಲೆನ್ ರಚಿಸಿದ ದೂರದರ್ಶನ ಸರಣಿ ‘ಕ್ರೈಸಿಸ್ ಇನ್ ಸಿಕ್ಸ್ ಸೀನ್ಸ್‌’ನಲ್ಲಿ ಸೈರಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೂ ಸೂಪರ್ ಹೀರೋ ಚಿತ್ರ ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ’ಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಮೇ 2, 2017ರಂದು ಬಿಡುಗಡೆಯಾಯಿತು.

ಇವರನ್ನು 2000ರ ದಶಕದಲ್ಲಿ ಪಾಪ್ ಸಂಸ್ಕೃತಿಯ ‘Teen Queen’ ಎಂತಲೂ ಹಾಗೂ ‘Pop Chameleon’ ಎಂದೂ ಇವರನ್ನು ಕರೆಯುತ್ತಿದ್ದರು. ಇವರಿಗೆ 19 ಟೀನ್ ಚಾಯ್ಸ್ ಪ್ರಶಸ್ತಿ, ಐದು ಬಿಲ್ಬೋರ್ಡ್ ಸಂಗೀತ ಪ್ರಶಸ್ತಿಗಳು, ನಾಲ್ಕು ವಿಶ್ವ ಸಂಗೀತ ಪ್ರಶಸ್ತಿಗಳು, ಮೂರು MTV ವಿಡಿಯೋ ಸಂಗೀತ ಪ್ರಶಸ್ತಿಗಳು, ಪೀಪಲ್ಸ್ ಚಾಯ್ಸ್ ಪ್ರಶಸ್ತಿ, GLAAD ಮಾಧ್ಯಮ ಪ್ರಶಸ್ತಿಗಳು ಸಂದಿವೆ. ಒಂಬತ್ತನೇ ಶ್ರೇಷ್ಠ ಬಿಲ್‌ಬೋರ್ಡ್ 200 ಮಹಿಳಾ ಕಲಾವಿದರ ಪೈಕಿ ಇವರು ಸ್ಥಾನ ಪಡೆದಿದ್ದಾರೆ. ಮತ್ತು 2008 ಮತ್ತು 2014ರಲ್ಲಿ ಟೈಮ್ 100 ಹಾಗೂ 2014 ಮತ್ತು 2021 ರಲ್ಲಿ ಫೋರ್ಬ್ಸ್ 30 ಮತ್ತು ಅಂಡರ್ 30ರಲ್ಲಿ ಬಿಲ್‌ಬೋರ್ಡ್‌ನ ಸಾರ್ವಕಾಲಿಕ ಶ್ರೇಷ್ಠ ಕಲಾವಿದರ ಪಟ್ಟಿಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here