ನವಾಜುದ್ದೀನ್‌ ಸಿದ್ದಿಕಿ, ಅನುರಾಗ್‌ ಕಶ್ಯಪ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಹಡ್ಡಿ’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ತೃತೀಯ ಲಿಂಗಿಯಾಗಿ ನವಾಜುದ್ದೀನ್‌ ಪಾತ್ರ ಟ್ರೈಲರ್‌ನಲ್ಲಿ ಗಮನಸೆಳೆಯುತ್ತದೆ. ಇದೊಂದು ಸೇಡಿನ ಕತೆಯಂತೆ ತೋರುತ್ತಿದ್ದು, ನಿರ್ದೇಶಕ ಅನುರಾಗ್‌ ಕಶ್ಯಪ್‌ ನಟನಾಗಿ ಮಿಂಚಿದ್ದಾರೆ.

ಅಕ್ಷತ್‌ ಅಜಯ್‌ ಶರ್ಮಾ ನಿರ್ದೇಶನದ ‘ಹಡ್ಡಿ’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನವಾಜುದ್ದೀನ್‌ ಸಿದ್ದಿಕಿ ಚಿತ್ರದಲ್ಲಿ ತೃತೀಯ ಲಿಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಅನುರಾಗ್‌ ಕಶ್ಯಪ್‌ ಪ್ರಮುಖ ಪಾತ್ರದೊಂದಿಗೆ ನಟನಾಗಿ ತೆರೆಗೆ ಬರುತ್ತಿರುವುದು ವಿಶೇಷ. ಇಳಾ ಅರುಣ್, ಮೊಹಮ್ಮದ್ ಜೀಶನ್ ಅಯೂಬ್, ಸೌರಭ್ ಸಚ್‌ದೇವ, ಶ್ರೀಧರ್ ದುಬೆ, ರಾಜೇಶ್ ಕುಮಾರ್, ವಿಪಿನ್ ಶರ್ಮಾ, ಸಹರ್ಷ್ ಶುಕ್ಲಾ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ತೃತೀಯ ಲಿಂಗೀ ಕಾರ್ಯಕರ್ತೆಯಾಗಿ ಸೇಡು ತೀರಿಸಿಕೊಳ್ಳುವ ‘ಹಡ್ಡಿ’ ಎಂಬ ಮಂಗಳಮುಖಿಯ ಸುತ್ತ ಈ ಕಥೆ ಸುತ್ತುತ್ತದೆ. ‘ನಮ್ಮ ಆರ್ಶೀರ್ವಾದ ಅತ್ಯಂತ ಶಕ್ತಿಶಾಲಿ, ಆದರೆ ನಮ್ಮ ಶಾಪ ಅಷ್ಟೇ ಅಪಾಯಕಾರಿ’ ಎಂಬ ಸಂಭಾಷಣೆಯಿಂದ ಟ್ರೈಲರ್‌ ಆರಂಭವಾಗುತ್ತದೆ. ಆಕೆಯ ತಾಯಿಯನ್ನು ಮೋಸದಿಂದ ವಂಚಿಸಿ ಕೊಂದ ವ್ಯಕ್ತಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಜ್ವಾಲಾಮುಖಿಯಂತೆ ಉರಿಯುತ್ತಿರುವ ದ್ವೇಷದ ತೀವ್ರತೆ ಈ ಪಾತ್ರದಲ್ಲಿ ಕಾಣಿಸುತ್ತದೆ. ZEE Studios ಸಹಯೋಗದೊಂದಿಗೆ ಸಂಜಯ್ ಸಹಾ, ರಾಧಿಕಾ ನಂದಾ ಸಿನಿಮಾ ನಿರ್ಮಿಸಿದ್ದಾರೆ. ರೋಹನ್‌ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಸೆಪ್ಟೆಂಬರ್‌ 7, 2023 ರಿಂದ ZEE5ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here