ಸಡಗರ ರಾಘವೇಂದ್ರ ನಿರ್ದೇಶನದ ‘ಅಪರೇಷನ್ ಲಂಡನ್ ಕೆಫೆ’ ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಇಂದು (ಜೂನ್‌ 5) ಚಿತ್ರದ ನಾಯಕ ಕವೀಶ್‌ ಶೆಟ್ಟಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನದಂದು ತಮ್ಮ ಹೀರೋಗೆ ಶುಭಾಶಯ ಕೋರಿರುವ ಚಿತ್ರತಂಡ ಹೊಸ ಅಪ್‌ಡೇಟ್‌ ಕೊಟ್ಟಿದೆ.

ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಅಭಿನಯದ PAN ಇಂಡಿಯಾ ಆಕ್ಷನ್‌ ಸಿನಿಮಾ ‘ಆಪರೇಷನ್‌ ಲಂಡನ್‌ ಕೆಫೆ’ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಕನ್ನಡ ಸೇರಿದಂತೆ ಮರಾಠಿ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಅದ್ಧೂರಿಯಾಗಿ ತಯಾರಾಗುತ್ತಿರುವ ಚಿತ್ರವಿದು. ಇಂದು (ಜೂನ್‌ 5) ಚಿತ್ರದ ಹೀರೋ ಕವೀಶ್‌ ಶೆಟ್ಟಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬರ್ತ್‌ಡೇಗೆ ಶುಭಾಶಯ ಕೋರಿರುವ ಚಿತ್ರತಂಡ ಸಿನಿಮಾ ಕುರಿತು ಹೊಸ ಅಪ್‌ಡೇಟ್‌ ನೀಡಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಶೀಘ್ರ ಮುಗಿಸಿ ಚಿತ್ರವನ್ನು ತೆರೆಗೆ ತರುವುದಾಗಿ ಹೇಳಿಕೊಂಡಿದ್ದಾರೆ ನಿರ್ದೇಶಕ ಸಡಗರ ರಾಘವೇಂದ್ರ.

ಇಂಡಿಯನ್ ಫಿಲಂ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲಂಸ್‌ ಲಾಂಛನದಲ್ಲಿ ಅದ್ಧೂರಿಯಾಗಿ ತಯಾರಾಗುತ್ತಿರುವ ಚಿತ್ರವನ್ನು ಉಡುಪಿಯ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಕವೀಶ್ ಮತ್ತು ಮೇಘಾ ಶೆಟ್ಟಿ ಜೊತೆಯಲ್ಲಿ ಮರಾಠಿಯ ಶಿವಾನಿ ಸುರ್ವೆ ಹಾಗೂ ಕನ್ನಡದ ಅರ್ಜುನ್ ಕಾಪಿಕಾಡ್, ಬಿ ಸುರೇಶ್, ಕೃಷ್ಣ ಹೆಬ್ಬಾಳೆ, ಧರ್ಮೇಂದ್ರ ಅರಸ್, ನೀನಾಸಂ ಅಶ್ವತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಯುವ ಸಂಗೀತ ನಿರ್ದೇಶಕ ಪ್ರಾನ್ಶು ಝಾ ಸಂಗೀತವಿರುವ ಚಿತ್ರಕ್ಕೆ ಛಾಯಾಗ್ರಾಹಕ ಸುಂದರನಾಥ ಸುವರ್ಣ ಅವರ ಜೊತೆಯಲ್ಲಿ ದೀರ್ಘ ಕಾಲ ಕೆಲಸ ಮಾಡಿದ ಅನುಭವವಿರುವ ಡಿ ನಾಗಾರ್ಜುನ್ ಛಾಯಾಗ್ರಹಣ ಮಾಡಿದ್ದಾರೆ. ವರದರಾಜ್ ಕಾಮತ್ ಕಲಾನಿರ್ದೇಶನ, ಕೆ ಎಂ ಪ್ರಕಾಶ್ ಸಂಕಲನ, ನಾಗೇಂದ್ರ ಪ್ರಸಾದ್, ಕವಿರಾಜ್ ಮತ್ತು ಸಡಗರ ರಾಘವೇಂದ್ರ ಸಾಹಿತ್ಯ ಹಾಗೂ ವಿಕ್ರಂ ಮೊರ್, ಅರ್ಜುನ್ ಮತ್ತು ಮಾಸ್ ಮಾದ ಸಾಹಸ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here