ಸಿನಿಮಾ ತಾರೆಯರಾದ ಕಂಗನಾ ರನಾವತ್‌, ಸುರೇಶ್‌ ಗೋಪಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ನಟ ಪವನ್‌ ಕಲ್ಯಾಣ್‌ ವಿಧಾನ ಸಭೆ ಚುನಾವಣೆಯಲ್ಲಿ ಗೆಲುವು ಸಿಕ್ಕಿದೆ. ವಿಜೇತರಿಗೆ ಚಿತ್ರರಂಗದಲ್ಲಿನ ಅವರ ಸ್ನೇಹಿತರು, ಅಪ್ತರು ಟ್ವೀಟ್‌ಗಳ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಸಿನಿಮಾರಂಗದ ಹಲವು ಗೆಲುವು ಸಾಧಿಸಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಕಂಗನಾ ರನಾವತ್‌ ಗೆದ್ದಿದ್ದಾರೆ. ಕೇರಳದ ತ್ರಿಷೂರ್‌ ಕ್ಷೇತ್ರದಿಂದ ನಟ ಸುರೇಶ್‌ ಗೋಪಿ ಮತ್ತು ಪೀತಾಪುರಂ ವಿಧಾನ ಸಭಾ ಕ್ಷೇತ್ರದಿಂದ ಪವನ್‌ ಕಲ್ಯಾಣ್‌ ಗೆಲುವು ಸಾಧಿಸಿದ್ದಾರೆ. ಹಿರಿಯ ನಟ ಅನುಪಮ್‌ ಖೇರ್‌ ಅವರು ನಟಿ ಕಂಗನಾಗೆ ಟ್ವೀಟ್‌ ಮಾಡಿ, ಅಭಿನಂದನೆ ಸಲ್ಲಿಸಿದ್ದಾರೆ. ಕಂಗನಾರನ್ನು Rockstar ಎಂದು ಕರೆದಿರುವ ಅನುಪಮ್‌ ಖೇರ್‌, “My dearest #Kangana! CONGRATULATIONS on your HUGE Victory! You are a #ROCKSTAR. Your journey is so so inspirational! So happy for you and the people of #Mandi and #HimachalPradesh. You have proved time and again that if one is focused and works hard toh kuch bhi hosakta hai. Jai Ho! #MemberParliament #KanganaRanaut #Winner” ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನು ಕೇರಳದಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿರುವ ನಟ ಸುರೇಶ್‌ ಗೋಪಿ ಅವರನ್ನು ಮಲಯಾಳಂ ಚಿತ್ರರಂಗದ ಹಲವರು ಅಭಿನಂದಿಸಿದ್ದಾರೆ. ನಟ ಮಮ್ಮೂಟಿ, “Hearty congrats dear Suresh on your victory,” ಎಂದು ಟ್ವೀಟ್‌ ಮಾಡಿದ್ದಾರೆ. ನಟ, ರಾಜಕಾರಣಿ, ಟೀವಿ ನಿರೂಪಕ ಸುರೇಶ್‌ ಗೋಪಿ ಮಲಯಾಳಂ ಸಿನಿಮಾಗಳಲ್ಲದೆ ತೆಲುಗು, ತಮಿಳು ಮತ್ತು ಕನ್ನಡದ ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಲೇಟೆಸ್ಟ್‌ ಸಿನಿಮಾ ‘ಗರುಡನ್‌’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ನಟ ಪವನ್‌ ಕಲ್ಯಾಣ್‌ ಪೀತಾಪುರಂ ವಿಧಾನ ಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಪವನ್‌ ಅವರ ಪತ್ನಿ Anna Lezhneva ಗೆಲುವು ಪಡೆದ ಪತಿಗೆ ತಿಲಕವಿಡುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಸಂದರ್ಭದಲ್ಲಿ ಪವನ್‌ ಪುತ್ರ ಅಕಿರಾ ನಂದನ್‌ ಕೂಡ ಇದ್ದಾರೆ.

LEAVE A REPLY

Connect with

Please enter your comment!
Please enter your name here