ದೇಬಲೋಯ್ ಭಟ್ಟಾಚಾರ್ಯ ನಿರ್ದೇಶನದ ‘P.I. ಮೀನಾ’ ಹಿಂದಿ ಸರಣಿ ಟ್ರೇಲರ್ ಬಿಡುಗಡೆಯಾಗಿದೆ. ತಾನ್ಯಾ ಮಾಣಿಕ್ತಲಾ ಮುಖ್ಯಪಾತ್ರದಲ್ಲಿ ನಟಿಸಿರುವ ಇನ್ವೆಸ್ಟಿಗೇಷನ್ ಥ್ರಿಲ್ಲರ್ ಇದು. ನವೆಂಬರ್ 3ರಿಂದ Prime Videoದಲ್ಲಿ ಸರಣಿ ಸ್ಟ್ರೀಮ್ ಆಗಲಿದೆ.
ತಾನ್ಯಾ ಮಾಣಿಕ್ತಲಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘P.I. ಮೀನಾ’ ಹಿಂದಿ ಸರಣಿಯ ಟ್ರೇಲರ್ ಬಿಡುಗಡೆಯಾಗಿದೆ ಈ ಕ್ರೈಮ್ ಥ್ರಿಲ್ಲರ್ ಸರಣಿಯನ್ನು ಅರಿಂದಮ್ ಮಿತ್ರ ರಚಿಸಿದ್ದು, ದೇಬಲೋಯ್ ಭಟ್ಟಾಚಾರ್ಯ ನಿರ್ದೇಶನ ಮಾಡಿದ್ದಾರೆ. ಸರಣಿಯು ಖಾಸಗಿ ತನಿಖಾಧಿಕಾರಿ P.I. ಮೀನಾ (ಮೀನಾಕ್ಷಿ ಅಯ್ಯರ್) ಅವರ ಸುತ್ತ ಸುತ್ತುತ್ತದೆ. ಯುವ ಖಾಸಗಿ ತನಿಖಾಧಿಕಾರಿ ಮೀನಾಕ್ಷಿ ರಸ್ತೆ ಅಪಘಾತವೊಂದರ ಪ್ರತ್ಯಕ್ಷದರ್ಶಿಯಾಗಿರುತ್ತಾಳೆ. ವೇಗವಾಗಿ ಬಂದ ಲಾರಿಯೊಂದು ಯುವಕನೊಬ್ಬನಿಗೆ ಡಿಕ್ಕಿ ಹೊಡೆಯುತ್ತದೆ. ಇದನ್ನು ಪ್ರತ್ಯಕ್ಷವಾಗಿ ನೋಡಿದ ಕಾರಣ ಮೀನಾ ಸತ್ತ ವ್ಯಕ್ತಿಯ ತಾಯಿಯಿಂದಾಗಿ ಅಪಘಾತದ ತನಿಖೆಗೆ ಒಳಪಡುತ್ತಾಳೆ. ಈ ಸಮಸ್ಯೆಗಳನ್ನು ಮೀನಾ ಹೇಗೆ ಎದುರಿಸುತ್ತಾಳೆ ಎಂಬುದನ್ನು ಸರಣಿ ತೋರಿಸಲಿದೆ.
ತನ್ನ ಪಾತ್ರದ ಬಗ್ಗೆ ಮಾತನಾಡುತ್ತಾ ತಾನ್ಯಾ, ‘ಇಂತಹ ಕುತೂಹಲಕಾರಿ ಸರಣಿಯಲ್ಲಿ ನಾಯಕಿಯಾಗಿ ನಟಿಸಿರುವುದು ನನ್ನ ಸೌಭಾಗ್ಯ. ಅರಿಂದಮ್ ಮಿತ್ರ ಮತ್ತು ದೇಬಲೋಯ್ ಭಟ್ಟಾಚಾರ್ಯರ ಅವರಿಗೆ ಈ ಅವಕಾಶಕ್ಕಾಗಿ ಧನ್ಯವಾದಗಳುʼ ಎಂದಿದ್ದಾರೆ. ಜಿಶು ಸೇನ್‌ಗುಪ್ತಾ ಈ ಕುರಿತು ‘ಸವಾಲಿನ ಪಾತ್ರಗಳಲ್ಲಿ ನಟಿಸುವುದು ನನ್ನ ವೃತ್ತಿ ಜೀವನದ ಸಂತೋಷದಾಯಕ ಭಾಗ. ಈ ತನಿಖಾ ಅಪರಾಧ ಸರಣಿಯ ಭಾಗವಾಗಿರುವುದು ಖುಷಿ ತಂದಿದೆ’ ಎನ್ನುತ್ತಾರೆ. ಸರಣಿಯಲ್ಲಿ ಪರಂಬ್ರತ ಚಟ್ಟೋಪಾಧ್ಯಾಯ, ಜಿಶು ಸೆಂಗುಪ್ತ, ವಿನಯ್ ಪಾಠಕ್ ಮತ್ತು ಜರೀನಾ ವಹಾಬ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸರಣಿಯು ಮೂಲ ಹಿಂದಿ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ನವೆಂಬರ್ 3ರಿಂದ Prime Videoದಲ್ಲಿ ಏಕಕಾಲದಲ್ಲಿ ಸ್ಟ್ರೀಮ್ ಆಗಲಿದೆ.