ಚಿತ್ರನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅವರ ಮಹತ್ವಾಕಾಂಕ್ಷೆಯ ಸರಣಿ ‘ಹೀರಾಮಂಡಿ’ ಫಸ್ಟ್‌ಲುಕ್‌ ಟೀಸರ್‌ ಬಿಡುಗಡೆಯಾಗಿದೆ. ಪ್ರೀತಿ, ಶಕ್ತಿ, ಸೇಡು ಮತ್ತು ಸ್ವಾತಂತ್ರ್ಯದ ಸಾಹಸಗಾಥೆಯಿದು. ಮನೀಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್‌ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಖ್‌, ಶರ್ಮಿನ್‌ ಸೈಗಲ್‌ ಸರಣಿಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಹೀರಾಮಂಡಿ – ದಿ ಡೈಮಂಡ್ ಬಜಾರ್‌’ ಹಿಂದಿ ಸರಣಿಯ ಫಸ್ಟ್‌ಲುಕ್‌ ಟೀಸರ್‌ ಬಿಡುಗಡೆಯಾಗಿದೆ. ಸರಣಿಯಲ್ಲಿ ಮನೀಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಖ್ ಮತ್ತು ಶರ್ಮಿನ್ ಸೈಗಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸರಣಿಯು ಪ್ರೀತಿ, ಶಕ್ತಿ, ಸೇಡು ಮತ್ತು ಸ್ವಾತಂತ್ರ್ಯದ ಸಾಹಸಗಾಥೆಯ ಬಗ್ಗೆ ಹೇಳಲಿದೆ ಹಾಗೂ ಲಾಹೋರ್‌ನ ವೇಶ್ಯೆಯರನ್ನು
ಕುರಿತು ಹೇಳಲಿರುವ ಮೊದಲ ಸರಣಿ ಇದಾಗಿದೆ. ಸರಣಿಯು ಅಧಿಕಾರದ ಹೋರಾಟದ ಮಧ್ಯೆ ಸಮಸ್ಯೆಗೆ ಸಿಕ್ಕಿಬಿದ್ದ ಯುವ ಉತ್ತರಾಧಿಕಾರಿಯ ಕಥೆಯನ್ನು ಹೇಳಲಿದೆ ಹಾಗೂ ತವೈಫ್‌ (Tawaifs) ಕಲೆಯನ್ನು ಹಿಡಿದಿಟ್ಟುಕೊಂಡ ವ್ಯವಸ್ಥೆ ಕುರಿತಾಗಿಯೂ ಪ್ರಸ್ತಾಪವಾಗುತ್ತದೆ ಎನ್ನಲಾಗಿದೆ. ಸಂಜಯ್ ಲೀಲಾ ಬನ್ಸಾಲಿ ಅವರು Netflixನ ಸಹಯೋಗದೊಂದಿಗೆ ತಮ್ಮ 14 ವರ್ಷಗಳ ಬಹುನಿರೀಕ್ಷಿತ ಈ ಯೋಜನೆಯನ್ನು ಪ್ರೇಕ್ಷಕರ ಮುಂದಿಡಲು ಸಿದ್ಧರಾಗಿದ್ದಾರೆ. ಸರಣಿ Bhansali Productions ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.

LEAVE A REPLY

Connect with

Please enter your comment!
Please enter your name here