‘ಕಲ್ಕಿ 2898 AD’ ಚಿತ್ರದ ಐದನೇ ಸೂಪರ್‌ಸ್ಟಾರ್‌ ಯಾರಿರಬಹುದು ಎನ್ನುವ ಬಗ್ಗೆ ಚರ್ಚೆ ಶುರುವಾಗಿತ್ತು. ಈ ಸೂಪರ್‌ಸ್ಟಾರ್‌ ಬೇರಾರೂ ಅಲ್ಲ. ಬುಜ್ಜಿ ಹೆಸರಿನ ಆಪ್ತ ಸ್ನೇಹಿತ. ಅಂದರೆ, ಬುಜ್ಜಿಯನ್ನು ಭವಿಷ್ಯದ ವಾಹನ ಎಂದೇ ಚಿತ್ರತಂಡ ಹೇಳಿಕೊಂಡು, ಅದರ ಕಿರು ಝಲಕ್‌ ಅನ್ನು ಅನಾವರಣ ಮಾಡಿದೆ.

ಅಮಿತಾಭ್‌ ಬಚ್ಚನ್‌, ಕಮಲ ಹಾಸನ್‌, ಪ್ರಭಾಸ್‌ ಅಭಿನಯದ ‘ಕಲ್ಕಿ 2898 AD’ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ಈಗ ಸಿನಿಮಾದ ಮತ್ತೊಂದು ವಿಶೇಷ ಅನಾವರಣಗೊಂಡಿದೆ. ಈ ಚಿತ್ರದ ಐದನೇ ಸೂಪರ್‌ಸ್ಟಾರ್‌ ಯಾರು ಎನ್ನುವ ಬಗ್ಗೆ ಚರ್ಚೆ ಶುರುವಾಗಿತ್ತು. ಅದು ಯಾರೆನ್ನುವುದನ್ನು ಕಿರು ವೀಡಿಯೋದ ಮೂಲಕ ಚಿತ್ರತಂಡ ಅನಾವರಣ ಮಾಡಿದೆ. ಆ ಐದನೇ ಸೂಪರ್‌ಸ್ಟಾರ್‌ ಬೇರಾರೂ ಅಲ್ಲ, ಬುಜ್ಜಿ ಹೆಸರಿನ ಆಪ್ತ ಸ್ನೇಹಿತ. ಅಂದರೆ, ಬುಜ್ಜಿಯನ್ನು ಭವಿಷ್ಯದ ವಾಹನ ಎಂದೇ ಚಿತ್ರತಂಡ ಹೇಳಿಕೊಂಡು, ಅದರ ಕಿರು ಝಲಕ್‌ ಅನ್ನು ಅನಾವರಣ ಮಾಡಿದೆ. ನಿರ್ದೇಶಕ ನಾಗ್ ಅಶ್ವಿನ್, ನಿರ್ಮಾಪಕರಾದ ಸಿ ಅಶ್ವಿನಿ ದತ್, ಸ್ವಪ್ನಾ ದತ್ ಚಲಸಾನಿ, ಪ್ರಿಯಾಂಕಾ ದತ್ ಚಲಸಾನಿ ಸೇರಿ ಸುಮಾರು ಇಪ್ಪತ್ತು ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಹೈದರಾಬಾದ್‌ನ ಅದ್ಧೂರಿ ಕಾರ್ಯಕ್ರಮದಲ್ಲಿ ಬುಜ್ಜಿಯನ್ನು ಪರಿಚಯಿಸಲಾಗಿದೆ.

ಬುಜ್ಜಿ ಹೆಸರಿನ ಈ ಆಪ್ತ ಗೆಳೆಯ ಚಿತ್ರದ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಗೆಳೆಯ. ಈ ಗೆಳೆಯನ ಕುರಿತು ನೂತನ ವೀಡಿಯೋ ರಿಲೀಸ್‌ ಆಗಿದೆ. ವಿಡಿಯೋದಲ್ಲಿ ಬುಜ್ಜಿ ಹೇಗೆಲ್ಲ ಕೆಲಸ ಮಾಡುತ್ತೆ, ಭವಿಷ್ಯದ ಆಪ್ತ ಸ್ನೇಹಿತ ಎಂದು ಏಕೆ ಕರೆಯಲಾಗುತ್ತದೆ ಎನ್ನುವುದನ್ನು ಹೇಳಲಾಗಿದೆ. ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ. ಜೂನ್‍ 27ರಂದು ಸಿನಿಮಾ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here