ಖ್ಯಾತ ಮಲಯಾಳಂ ನಟ ಫಹಾದ್‌ ಫಾಸಿಲ್‌ ಇಂದು 41ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ‘ಪುಷ್ಪ2’ ತಂಡ ತಮ್ಮ ಸಿನಿಮಾದ ಪ್ರಮುಖ ನಟನ ಬರ್ತ್‌ಡೇಗೆಂದು ನೂತನ ಪೋಸ್ಟರ್‌ ಬಿಡುಗಡೆ ಮಾಡಿದೆ.

ಖಳಪಾತ್ರವಿಲ್ಲದಿದ್ದರೆ ಹೀರೋಗೆ ಬೆಲೆ ಹೇಗೆ ಸಿಗುತ್ತದೆ!? ಬನ್ವರ್‌ ಸಿಂಗ್‌ ಶೇಖಾವತ್‌ (ಫಹಾದ್‌ ಫಾಸಿಲ್‌) ಇಲ್ಲದಿದ್ದರೆ ಪುಷ್ಪ (ಅಲ್ಲು ಅರ್ಜುನ್‌) ಮಿಂಚಲು ಸಾಧ್ಯವಿರಲಿಲ್ಲ. ಈ ಎರಡು ಪಾತ್ರಗಳ ಮಧ್ಯೆಯ ಸಂಘರ್ಷದೊಂದಿಗೆ ‘ಪುಷ್ಪ’ ಮೊದಲ ಭಾಗ ಮುಗಿದಿತ್ತು. ಚಿತ್ರದ ನಿರ್ಮಾಪಕರು ‘ಪುಷ್ಪ2’ನ ಅಲ್ಲು ಅರ್ಜುನ್‌ ವಿಶಿಷ್ಟ ಲುಕ್‌ ಬಿಡುಗಡೆಗೊಳಿಸಿದ್ದರು. ಇಂದು ಫಹಾದ್‌ ಬರ್ತ್‌ಡೇ ನಿಮಿತ್ತ ಅವರ ಬನ್ವರ್‌ ಸಿಂಗ್‌ ಶೇಖಾವತ್‌ ಪಾತ್ರದ ಪೋಸ್ಟರ್‌ ಬಿಡುಗಡೆಯಾಗಿದೆ. ‘Bhanwar Singh Shekhawat Sir will be back on the big screens with vengeance’ ಎನ್ನುವ ಒಕ್ಕಣಿಯೊಂದಿಗೆ Mythri Movie Makers ಪೋಸ್ಟರ್‌ ಬಿಡುಗಡೆಗೊಳಿಸಿದೆ. ಪೊಲೀಸ್‌ ಯೂನಿಫಾರ್ಮ್‌ನಲ್ಲಿ ಇರದ ಫಹಾದ್‌ ಪೋಸ್ಟರ್‌ನಲ್ಲಿ ಸಿಗರೇಟು ಹಿಡಿದು ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ.

‘ಪುಷ್ಪ’ ಚಿತ್ರದ ಬಹುದೊಡ್ಡ ಯಶಸ್ಸಿನಲ್ಲಿ ಫಹಾದ್‌ ಪಾಲು ದೊಡ್ಡದು. ಈ ಪಾತ್ರದ ಮೂಲಕ ತೆಲುಗು ನಾಡಿನಲ್ಲಿ ಅವರು ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಮಾಮನ್ನನ್‌’ ಚಿತ್ರದ ಪಾತ್ರದೊಂದಿಗೆ ಅವರು ತಮಿಳುನಾಡಿನಲ್ಲೂ ಜನರ ಪ್ರೀತಿ ಗಳಿಸಿದ್ದಾರೆ. ಸುಕುಮಾರ್‌ ನಿರ್ದೇಶನದ ‘ಪುಷ್ಪ 2’ ಸಿನಿಮಾ ಈ ವರ್ಷ ಡಿಸೆಂಬರ್‌ 22ರಂದು ತೆರೆಕಾಣಲಿದೆ.

Previous article‘ಸ್ಪಾರ್ಕ್‌ ಲೈಫ್‌’ ಟೀಸರ್‌ | ವಿಕ್ರಾಂತ್‌ ನಟನೆಯ ಸೈಕಾಲಾಜಿಕಲ್‌ ಆಕ್ಷನ್‌ – ಥ್ರಿಲ್ಲರ್‌
Next articleನನ್ಬನ್‌ ಎಂಟರ್‌ಟೇನ್‌ಮೆಂಟ್‌ | ಸಿನಿಮಾ ನಿರ್ಮಾಣದತ್ತ ನನ್ಬನ್‌ ಗ್ರೂಪ್‌

LEAVE A REPLY

Connect with

Please enter your comment!
Please enter your name here