ಭಾನುತೇಜ ನಿರ್ದೇಶನದ ‘ರೈಡ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ವೆಂಕಿ, ತನಿ ಮತ್ತು ನೀರಜ್‌ ಕುಮಾರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಲವ್‌ – ಥ್ರಿಲ್ಲರ್‌ ಚಿತ್ರವಿದು.

‘ಮನೆಯಲ್ಲಿ ಹಿರಿಯರನ್ನು ಮದುವೆಗೆ ಒಪ್ಪಿಸಿದ ಯುವಪ್ರೇಮಿಗಳು ಜಾಲಿ ರೈಡ್ ಹೋಗುತ್ತಾರೆ‌. ಆ ರೈಡ್‌ನಲ್ಲಿ ಹಲವು ತಿರುವುಗಳಿರುತ್ತದೆ‌. ಇದೇ ಚಿತ್ರದ ಕಥಾಹಂದರ’ ಎನ್ನುತ್ತಾರೆ ‘ರೈಡ್‌ ಚಿತ್ರದ ನಿರ್ದೇಶಕ ಭಾನುತೇಜ. ಅವರಿಗಿದು ಸ್ವತಂತ್ರ್ಯ ನಿರ್ದೇಶನದ ಮೊದಲ ಸಿನಿಮಾ. ವೆಂಕಿ ಮತ್ತು ತನ್ವಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರೆ, ನೀರಜ್‌ಕುಮಾರ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಸಿನಿಮಾ ತೆರೆಗೆ ಸಿದ್ಧವಾಗಿದೆ. ನಿರ್ಮಾಪಕ ರಾಮಕೃಷ್ಣ ರಾಮೋಹಳ್ಳಿ ಅವರು ಈ ಚಿತ್ರದ ಮೂಲಕ ತಮ್ಮ ಪುತ್ರ ವೆಂಕಿ ಅವರನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. ‘ನಾನು ಮೂಲತಃ ಸಿವಿಲ್ ಎಂಜಿನಿಯರ್. ನಟ ಆಗಬೇಕೆಂಬುದು ನನ್ನ ಕನಸು. ಚಿತ್ರದಲ್ಲಿ ನಾನು ಯುವಪ್ರೇಮಿ. ಪ್ರೇಯಸಿಯ ಒತ್ತಾಯದ ಮೇಲೆ ರೈಡ್ ಹೋದಾಗ ಏನೆಲ್ಲಾ ಆಗುತ್ತದೆ ಎನ್ನುವುದೇ ಕಥೆ’ ಎನ್ನುತ್ತಾರೆ ಚಿತ್ರದ ಹೀರೋ ವೆಂಕಿ. ನಾಯಕನಟಿ ತನ್ವಿ ಅವರಿಗೆ ಇದು ಮೊದಲ ಸಿನಿಮಾ. ಸೆಂದಿಲ್ ಕುಮಾರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

LEAVE A REPLY

Connect with

Please enter your comment!
Please enter your name here