ಜಯತೀರ್ಥ ನಿರ್ದೇಶನದ ‘ಬನಾರಸ್‌’ ಸಿನಿಮಾದ ‘ಟ್ರಾಲ್‌’ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ವಿ.ನಾಗೇಂದ್ರ ಪ್ರಸಾದ್‌ ರಚನೆಯ ಹಾಡಿಗೆ ಅಜನೀಶ ಲೋಕನಾಥ್‌ ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಈ ಕಲರ್‌ಫುಲ್‌ ಸಾಂಗ್‌ ಮೇಕಿಂಗ್‌ನಿಂದ ಗಮನಸೆಳೆಯುತ್ತದೆ.

ಝೈದ್‌ ಖಾನ್‌ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿರುವ ‘ಬನಾರಸ್‌’ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಈ ಹಿಂದೆ ರಿಲೀಸ್‌ ಆಗಿದ್ದ ಚಿತ್ರದ ‘ಮಾಯಗಂಗೆ’ ಹಾಡು ಮೆಲೊಡಿ ಮತ್ತು ಮೇಕಿಂಗ್‌ನಿಂದ ಸಿನಿಪ್ರಿಯರಿಗೆ ಇಷ್ಟವಾಗಿತ್ತು. ಇದೀಗ ‘ಎಲ್ಲ ಟ್ರೋಲು ಎಲ್ಲಾ ಟ್ರೋಲು, ಸಿಕ್ಕಾಪಟ್ಟೆ ಕೊಲೇಸ್ಟ್ರಾಲು’ ಲಿರಿಕಲ್‌ ಸಾಂಗ್‌ ರಿಲೀಸ್‌ ಆಗಿದೆ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದು, ಸಂಗೀತ ಸಂಯೋಜನೆ ಮಾಡಿರುವ ಅಜನೀಶ್ ಲೋಕನಾಥ್ ಅವರೇ ಈ ಹಾಡನ್ನು ಹಾಡಿರುವುದು ವಿಶೇಷ. ಸಾಮಾನ್ಯವಾಗಿ ನಾಗೇಂದ್ರಪ್ರಸಾದ್‌ ಮೆಲೋಡಿ ಹಾಡುಗಳಿಗೆ ಹೆಸರು ಮಾಡಿರುವ ಗೀತರಚನೆಕಾರ. ಇತ್ತೀಚೆಗೆ ಟಪ್ಪಾಂಗುಚ್ಚಿ ಹಾಡುಗಳನ್ನೂ ಬರೆಯುತ್ತಿದ್ದು, ‘ಟ್ರಾಲ್‌’ ಸಾಂಗ್‌ನಲ್ಲಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಇದು ಹೀರೋ ಝೈದ್‌ ಖಾನ್‌ಗೆಂದೇ ಸಿದ್ಧಪಡಿಸಿರುವ ಹಾಡು. ಟ್ರೆಂಡೀ ಸಾಂಗ್‌ನಲ್ಲಿ ಝೈದ್‌ ಡ್ಯಾನ್ಸ್‌ ಪರ್ಫಾರ್ಮೆನ್ಸ್‌ಗೂ ಅವಕಾಶವಿದೆ. ‘ಬನಾರಸ್’ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತಯಾರಾಗಿರುವ ಪ್ಯಾನ್‌ ಇಂಡಿಯಾ ಸಿನಿಮಾ. ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದ ಚಿತ್ರದ ನಾಯಕಿ ಸೋನಲ್ ಮಂತೇರೋ. ಸುಜಯ್ ಶಾಸ್ತ್ರಿ, ದೇವರಾಜ್, ಅಚ್ಯುತ್ ಕುಮಾರ್, ಸಪ್ನಾ ರಾಜ್, ಬರ್ಖತ್ ಅಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಬನಾರಸ್’ ಇದೇ ನವೆಂಬರ್ 4ರಂದು ತೆರೆಕಾಣಲಿದೆ.

Previous articleಖ್ಯಾತ ಫ್ರೆಂಚ್‌ ನಿರ್ದೇಶಕ ಜೀನ್‌-ಲ್ಯೂಕ್‌ ಗೊಡಾರ್ಡ್‌ ಇನ್ನಿಲ್ಲ
Next articleಉಪೇಂದ್ರ ‘ಕಬ್ಜ’ ಟೀಸರ್‌ ಬಿಡುಗಡೆ; ಮತ್ತೊಂದು ಅದ್ಧೂರಿ ಗ್ಯಾಂಗ್‌ಸ್ಟರ್‌ ಸ್ಟೋರಿ

LEAVE A REPLY

Connect with

Please enter your comment!
Please enter your name here