ಕಿರಣ್ ರಾಜ್ ನಟನೆಯ ‘ರಾನಿ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಕಿರಣ್ ರಾಜ್ ಅವರಿಗಿಲ್ಲಿ ಭೂಗತ ಪಾತಕಿ ಪಾತ್ರ. ಜೊತೆಗೆ ಲವರ್ ಪಾತ್ರದ ಶೇಡ್ ಕೂಡ ಇದೆ. ಚಿತ್ರದಲ್ಲಿ ಹತ್ತಾರು ಪಾತ್ರಗಳಿವೆ. ಸೆಪ್ಟೆಂಬರ್ 12ರಂದು ಸಿನಿಮಾ ಥಿಯೇಟರ್‌ಗೆ ಬರುತ್ತಿದೆ.
‘ಈ ಸಿನಿಮಾ ಮಾಸ್ ಮತ್ತು ಕ್ಲಾಸ್ ಎರಡೂ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಇದು ಫ್ಯಾಮಿಲಿ – ಆಕ್ಷನ್ – ಡ್ರಾಮಾ’ ಎಂದಿದ್ದರು ‘ರಾನಿ’ ಸಿನಿಮಾದ ಹೀರೋ ಕಿರಣ್ ರಾಜ್. ಇದೀಗ ಬಿಡುಗಡೆಯಾಗಿರುವ ಟ್ರೇಲರ್ ಅವರ ಮಾತುಗಳಿಗೆ ಇಂಬು ನೀಡುವಂತಿದೆ. ಅದ್ಧೂರಿ ಮೇಕಿಂಗ್ ಜೊತೆ ಹತ್ತಾರು ಪಾತ್ರಗಳು ಬಂದು ಹೋಗುತ್ತವೆ. ಆಕ್ಷನ್, ಲುಕ್, ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿಯಲ್ಲಿ ಕಿರಣ್ ರಾಜ್ ಹೆಚ್ಚು ಅಂಕ ಗಳಿಸುತ್ತಾರೆ. ನಿರ್ದೇಶಕ ಗುರುತೇಜ್ ಶೆಟ್ಟಿ ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶಿಸಿರುವ ಚಿತ್ರವಿದು. ಸಚಿನ್ ಬಸ್ರೂರು ಹಿನ್ನೆಲೆ ಸಂಗೀತವಿದ್ದರೆ ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣ ಮಾಡಿದ್ದಾರೆ. ಸ್ಟಾರ್ ಕ್ರಿಯೇಷನ್ ಬ್ಯಾನರ್‌ನಡಿ ಚಂದ್ರಕಾಂತ್ ಪೂಜಾರಿ ಮತ್ತು ಉಮೇಶ್ ಹೆಗ್ಡೆ ಚಿತ್ರ ನಿರ್ಮಿಸಿದ್ದಾರೆ.