ಪ್ರಶಾಂತ್‌ ನೀಲ್‌ ನಿರ್ದೇಶನದ ಬಹುನಿರೀಕ್ಷಿತ ತೆಲುಗು ಸಿನಿಮಾ ‘ಸಲಾರ್‌’ ಟ್ರೈಲರ್‌ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಪ್ರಭಾಸ್‌, ಪೃಥ್ವಿರಾಜ್‌ ಸುಕುಮಾರನ್‌, ಶ್ರುತಿ ಹಾಸನ್‌, ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಡಿಸೆಂಬರ್‌ 22, 2023ರಂದು ತೆರೆಕಾಣಲಿದೆ.

‘KGF’ ಸರಣಿ ಸಿನಿಮಾಗಳ ಖ್ಯಾತಿಯ ಪ್ರಶಾಂತ್‌ ನೀಲ್‌ ನಿರ್ದೇಶನದ ‘ಸಲಾರ್‌’ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ‘Salaar: Part 1 – Ceasefire’ ಟ್ರೈಲರ್‌ ಡಿಸೆಂಬರ್‌ 1ರಂದು ಸಂಜೆ 7.19ಕ್ಕೆ ಬಿಡುಗಡೆಯಾಗಲಿದೆ. ಚಿತ್ರ ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್‌ ಚಿತ್ರದ ಹೊಸ ಪೋಸ್ಟರ್‌ ಹಂಚಿಕೊಂಡು, Gear up for an explosive celebrations. #SalaarCeaseFire Trailer is set to detonate on Dec 1st at 7:19 PM Happy Deepavali Everyone’ ಎಂದು ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಘೋಷಿಸಿದೆ. ವಿಶ್ವದಾದ್ಯಂತ IMAXನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದು ವಿಶೇಷ. ಕಳೆದೆರೆಡು ವರ್ಷಗಳಿಂದ ಚಿತ್ರೀಕರಣದಲ್ಲಿರುವ ‘ಸಲಾರ್‌’ ಆಕ್ಷನ್‌ – ಥ್ರಿಲ್ಲರ್‌ ಸಿನಿಮಾ. ಸೆಪ್ಟೆಂಬರ್‌ 28ರಂದು ಸಿನಿಮಾ ತೆರೆಕಾಣಲಿದೆ ಎನ್ನಲಾಗಿತ್ತು. ಅಂತಿಮವಾಗಿ ಚಿತ್ರದ ಬಿಡುಗಡೆ ದಿನಾಂಕ ಡಿಸೆಂಬರ್‌ 22 ಎಂದಾಗಿದೆ. ಇದೇ ದಿನ ಶಾರುಖ್‌ ಖಾನ್‌ ನಟನೆಯ ‘ಡಂಕಿ’ ಸಿನಿಮಾ ತೆರೆಕಾಣುತ್ತಿದೆ.

ದೊಡ್ಡ ಸಿನಿಮಾಗಳ ಸೋಲಿನ ನಂತರ ಪ್ರಭಾಸ್‌ ಅವರಿಗೆ ‘ಸಲಾರ್‌’ ತುಂಬಾ ಮುಖ್ಯ ಚಿತ್ರವಾಗಿದೆ. ಅವರ ಅಭಿಮಾನಿಗಳು ಕೂಡ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇಟ್ಟಿದ್ದಾರೆ. ಸದ್ಯ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು ಅವರು ಟ್ರೈಲರ್‌ ಎದುರುನೋಡುತ್ತಿದ್ದಾರೆ. ಈ ಹಿಂದೆ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗಿದ್ದಕ್ಕೆ ಕಾರಣ ಕೊಟ್ಟಿದ್ದ ನಿರ್ಮಾಣ ಸಂಸ್ಥೆ, ‘We deeply appreciate your unwavering support for #Salaar. With consideration, we must delay the original September 28 release due to unforeseen circumstances. Please understand this decision is made with care, as we’re committed to delivering an exceptional cinematic experience. Our team is working tirelessly to meet the highest standards’ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಟಿಪ್ಪಣಿ ಹಾಕಿತ್ತು.

LEAVE A REPLY

Connect with

Please enter your comment!
Please enter your name here