ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್‌ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಹೇಮಂತ್‌ ರಾವ್‌ ನಿರ್ದೇಶನದ ಪ್ರೇಮಕತೆ ಇದೀಗ ತೆಲುಗಿಗೆ ಹೋಗುತ್ತಿದೆ. ಸೆಪ್ಟೆಂಬರ್‌ 22ರಂದು ‘ಸಪ್ತ ಸಾಗರಲು ದಾಟಿ’ ಶೀರ್ಷಿಕೆಯಡಿ ಸಿನಿಮಾ ಅಲ್ಲಿ ತೆರೆಕಾಣಲಿದೆ.

ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ತೆಲುಗಿನಲ್ಲಿ ‘ಸಪ್ತ ಸಾಗರಲು ದಾಟಿ’ ಶೀರ್ಷಿಕೆಯಡಿ ಬಿಡುಗಡೆಯಾಗಲಿದೆ. ಹೇಮಂತ್ ಎಂ ರಾವ್ ನಿರ್ದೇಶನದ ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗಿದೆ. ಮೊದಲ ಭಾಗ (Side A) ಸೆಪ್ಟೆಂಬರ್ 1ರಂದು ತೆರೆಕಂಡು ಪ್ರೇಕ್ಷಕರು ಹಾಗೂ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಸಿನಿಮಾ ತೆಲುಗಿಗೆ ಹೋಗುತ್ತಿದೆ. ನಟ ರಕ್ಷಿತ್‌ ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಸಪ್ತ ಸಾಗರದಾಚೆ ಎಲ್ಲೋ
ಕರ್ನಾಟಕದಾದ್ಯಂತ ಸದ್ದುಮಾಡುತ್ತಿದೆ. ನಮ್ಮ ಸಿನಿಮಾ ಈಗ ಹೊಸ ರಂಗದಲ್ಲೂ ಸದ್ದು ಮಾಡಲು ಸಜ್ಜಾಗಿದೆ. ಸೆಪ್ಟೆಂಬರ್ 22 ರಂದು ತೆಲುಗಿನಲ್ಲಿ ‘ಸಪ್ತ ಸಾಗರಲು ದಾಟಿ’ ಶೀರ್ಷಿಕೆಯಡಿ ಬಿಡುಗಡೆಯಾಗುತ್ತಿದೆ’ ಎಂದು ಬರೆದಿದ್ದಾರೆ. ಅಚ್ಯುತ್‌ ಕುಮಾರ್‌, ಅವಿನಾಶ್‌, ಶರತ್‌ ಲೋಹಿತಾಶ್ವ, ಪವಿತ್ರಾ ಲೋಕೇಶ್‌, ಗೋಪಾಲಕೃಷ್ಣ ದೇಶಪಾಂಡೆ, ರಮೇಶ್‌ ಇಂದಿರಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಎರಡನೇ ಭಾಗ (Side B) ಅಕ್ಟೋಬರ್‌ 20ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here