ಮನು ಸಿ ಕುಮಾರ್ ನಿರ್ದೇಶನದ ‘ಶೇಶಮ್ ಮೈಕ್-ಇಲ್ ಫಾತಿಮಾ’ ಮಲಯಾಳಂ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಮುಸ್ಲಿಂ ಯುವತಿಯೊಬ್ಬಳು ಫುಟ್ಬಾಲ್ ಕ್ರೀಡೆ ನಿರೂಪಕಿಯಾಗಲು ಶ್ರಮಿಸುವ ಹಾದಿಯೇ ಚಿತ್ರದ ಕಥಾಹಂದರ. ಕಲ್ಯಾಣಿ ಪ್ರಿಯದರ್ಶನ್ ನಟಿಸಿರುವ ಸಿನಿಮಾ ನಾಳೆ (ನವೆಂಬರ್ 17) ತೆರೆಕಾಣುತ್ತಿದೆ.
ಕಲ್ಯಾಣಿ ಪ್ರಿಯದರ್ಶನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಶೇಶಮ್ ಮೈಕ್-ಇಲ್ ಫಾತಿಮಾ’ ಮಲಯಾಳಂ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮನು ಸಿ ಕುಮಾರ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರವಿದು. ಮಲಬಾರ್ನ ಮುಸ್ಲಿಂ ಯುವತಿಯೊಬ್ಬಳು ತನ್ನ ಕುಟುಂಬ ಮತ್ತು ಸಮಾಜ ಮತ್ತು ಇತರರಿಂದ ವಿರೋಧ ಎದುರಿಸುತ್ತಿದ್ದರೂ ಫುಟ್ಬಾಲ್ ಕ್ರೀಡೆಯ ನಿರೂಪಕಿಯಾಗಲು ಹಂಬಲಿಸುವ ಕಥಾಹಂದರ ಚಿತ್ರದ್ದು. ಟ್ರೇಲರ್ನಲ್ಲಿ, ‘ನಿರೂಪಕಿಯಾಗುವುದರಿಂದ ಸಾಕಷ್ಟು ಅನುಕೂಲಗಳಿವೆ. ಇದು ಅಪರೂಪದ ಅವಕಾಶ ಅದರ ಸದುಪಯೋಗ ಪಡೆಯಲು ಹಿಂಜರಿಯಬೇಡಿ’ ಎನ್ನುವ ವಾಯ್ಸ್ ಓವರ್ ಕೇಳಿಸುತ್ತದೆ.
ಅವಳು ನಿರೂಪಕಿಯಾಗಲು ಸಾಕಷ್ಟು ಶ್ರಮ ಪಡುತ್ತಾಳೆ. ಆದರೆ ಅವರ ಕುಟುಂಬ ಮತ್ತು ಕ್ರೀಡಾ ಅಕಾಡೆಮಿಗಳಿಂದ ಅವಕಾಶ ದೊರೆಯುವುದಿಲ್ಲ. ಆದರೆ ಫಾತಿಮಾ ಎಲ್ಲಾ ಸಮಸ್ಯೆಗಳನ್ನು ದಾಟಿ ನಿಂತು ಹೇಗೆ ಪುಟ್ ಬಾಲ್ ಕ್ರೀಡೆಯ ನಿರೂಪಕಿಯಾಗುತ್ತಾಳೆ ಎಂಬುದು ಕಥಾಹಂದರ. ಸುಧನ್ ಸುಂದರಂ ಮತ್ತು ಜಗದೀಶ್ ಪಳನಿಸಾಮಿ ನಿರ್ಮಿಸಿರುವ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಫೆಮಿನಾ ಜಾರ್ಜ್, ಅನೀಶ್ ಜಿ ಮೆನನ್, ಶಾಹೀನ್ ಸಿದ್ದಿಕ್ ನಟಿಸಿದ್ದಾರೆ. ಹೇಶಾಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜನೆ, ಸಂತಾನ ಕೃಷ್ಣನ್ ರವಿಚಂದ್ರನ್ ಛಾಯಾಗ್ರಹಣ, ಕಿರಣ್ ದಾಸ್ ಸಂಕಲನ ಚಿತ್ರಕ್ಕಿದೆ. ನಾಳೆ (ನವೆಂಬರ್ 17) ಸಿನಿಮಾ ತೆರೆಕಾಣುತ್ತಿದೆ.