ಅಮಲ್‌ ನೀರದ್‌ ನಿರ್ದೇಶನದಲ್ಲಿ ಮಮ್ಮೂಟಿ, ಸೌಬಿನ್‌ ಶಾಹಿರ್‌, ಶೈನ್‌ ಟಾಮ್‌ ಚಾಕೊ, ತಬು ಅಭಿನಯದ ‘ಭೀಷ್ಮ ಪರ್ವಂ’ ಮಲಯಾಳಂ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಮೊನ್ನೆ ಅಗಲಿದ ಖ್ಯಾತ ನಟಿ KPAC ಲಲಿತಾ ನಟನೆಯ ಕೊನೆಯ ಚಿತ್ರವಿದು. ಮಾರ್ಚ್‌ 3ರಂದು ಸಿನಿಮಾ ತೆರೆಕಾಣಲಿದೆ.

ಮಲಯಾಳಂ ಸೂಪರ್‌ಸ್ಟಾರ್‌ ಮಮ್ಮೂಟಿ ತಮ್ಮ ‘ಭೀಷ್ಮ ಪರ್ವಂ’ ಸಿನಿಮಾದ ಟ್ರೈಲರ್‌ ರಿಲೀಸ್‌ ಮಾಡಿದ್ದಾರೆ. ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದ ‘ಸರ್ಕಾರ್‌’ ಚಿತ್ರವನ್ನು ನೆನಪಿಸುತ್ತದೆ ಟ್ರೈಲರ್‌. ಈ ಚಿತ್ರದ ನಿರ್ದೇಶಕ ಅಮಲ್‌ ನೀರದ್‌ ಹಿಂದೆ ಆರ್‌ಜಿವಿ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದವರು. ಬಹುಶಃ ಈ ಅನುಭವ ‘ಭೀಷ್ಮ ಪರ್ವಂ’ ರೂಪಿಸಲು ಪ್ರೇರಣೆಯಾಗಿರಬಹುದು. ಚಿತ್ರದಲ್ಲಿ ಮಮ್ಮೂಟಿ ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ ಹಲವಾರು flamboyant ಪಾತ್ರಗಳು ಕಾಣಿಸುತ್ತವೆ. ಇವುಗಳ ಪೈಕಿ ‘ಪೀಟರ್‌’ ಪಾತ್ರದಲ್ಲಿ ಶೈನ್‌ ಟಾಮ್‌ ಚಾಕೊ, ‘ಅಜಾಸ್‌’ ಪಾತ್ರದಲ್ಲಿ ನಟಿಸಿರುವ ಸೌಬಿನ್‌ ಶಾಹಿರ್‌ ಗಮನ ಸೆಳೆಯುತ್ತಾರೆ. ಕಾಮಿಡಿ, ಫೀಲ್‌ ಗುಡ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದ ಸೌಬಿನ್‌ ಶಾಹಿರ್‌ ಈಗ ಪ್ರಯೋಗಗಳಿಗೆ ಒಡ್ಡಿಕೊಂಡಿದ್ದಾರೆ.

ನಿರ್ದೇಶಕ ಅಮಲ್‌ ಹದಿನೈದು ವರ್ಷಗಳ ಹಿಂದೆ ಮಮ್ಮೂಟಿ ಅವರಿಗೆ ‘Bif B’ ಸಿನಿಮಾ ಮಾಡಿದ್ದರು. ಅಭಿಮಾನಿಗಳು ಇವರ ಜೋಡಿಯ ಚಿತ್ರದ ನಿರೀಕ್ಷೆಯಲ್ಲಿದ್ದರು. ಈಗ ಎರಡನೇ ಬಾರಿ ಮಮ್ಮೂಟಿ ಅವರಿಗೆ ‘ಭೀಷ್ಮ ಪರ್ವಂ’ ನಿರ್ದೇಶಿಸಿದ್ದಾರೆ ಅಮಲ್‌. ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಶ್ರೀನಾಥ್‌ ಭಾಸಿ, ತಬು, ಫರ್ಹಾನ್‌ ಫಾಸಿಲ್‌, ಲೆನಾ ನಟಿಸಿದ್ದಾರೆ. ಮೊನ್ನೆ ಅಗಲಿದ ಮಲಯಾಳಂ ಚಿತ್ರರಂಗದ ಖ್ಯಾತ ನಟಿ KPAC ಲಲಿತಾ ಅವರು ನಟಿಸಿರುವ ಕೊನೆಯ ಚಿತ್ರವಿದು. ಮಾರ್ಚ್‌ 3ರಂದು ಸಿನಿಮಾ ತೆರೆಕಾಣಲಿದೆ.

Previous articleರೋಚಕ ತಿರುವುಗಳ ತ್ರಿಕೋನ ಪ್ರೇಮಕಥೆ ‘ಯೆಹ್‌ ಕಾಲಿ ಕಾಲಿ ಆಂಖೇ’
Next articleಟೀಸರ್‌ | ‘ಅಪಹರಣ್‌’ ಸೆಕೆಂಡ್‌ ಸೀಸನ್‌; ಶೀಘ್ರದಲ್ಲೇ Voot Select ನಲ್ಲಿ ಸರಣಿ

LEAVE A REPLY

Connect with

Please enter your comment!
Please enter your name here