ದುಬೈನಲ್ಲಿ ನಡೆಯುತ್ತಿರುವ SIIMA – 2024 ಪ್ರಶಸ್ತಿಗಳು ಘೋಷಣೆಯಾಗಿವೆ. ‘ಕಾಟೇರ’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗಳಿಸಿದರೆ, ‘ಸಪ್ತಸಾಗರದಾಚೆ ಎಲ್ಲೋ side A’ ಚಿತ್ರದ ನಿರ್ದೇಶನಕ್ಕಾಗಿ ಹೇಮಂತ್ ರಾವ್‌ಗೆ ಗೌರವ ಲಭಿಸಿದೆ. ಇದೇ ಸಿನಿಮಾದ ನಟನೆಗೆ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅತ್ಯುತ್ತಮ ನಟ/ನಟಿ ಪ್ರಶಸ್ತಿ ಪಡೆದಿದ್ದಾರೆ.
ಸೈಮಾ 2024 ಪ್ರಶಸ್ತಿಗಳು ಘೋಷಣೆಯಾಗಿವೆ. ‘ಕಾಟೇರ’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗಳಿಸಿದರೆ, ‘ಸಪ್ತಸಾಗರದಾಚೆ ಎಲ್ಲೋ side A’ ಚಿತ್ರದ ನಿರ್ದೇಶನಕ್ಕಾಗಿ ಹೇಮಂತ್ ರಾವ್‌ಗೆ ಗೌರವ ಲಭಿಸಿದೆ. ಇದೇ ಸಿನಿಮಾದ ನಟನೆಗೆ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅತ್ಯುತ್ತಮ ನಟ/ನಟಿ ಪ್ರಶಸ್ತಿ ಪಡೆದಿದ್ದಾರೆ. Critics choice ಕೆಟಗರಿಯಲ್ಲಿ ‘ಹೊಯ್ಸಳ’ ಸಿನಿಮಾಗೆ ಡಾಲಿ ಧನಂಜಯ ಮತ್ತು ‘ಟೋಬಿ’ ಚಿತ್ರಕ್ಕಾಗಿ ಚೈತ್ರಾ ಆಚಾರ್ ಅವರಿಗೆ ಅತ್ಯುತ್ತಮ ನಟ/ನಟಿ ಪ್ರಶಸ್ತಿ ಲಭಿಸಿವೆ. ಹೊಂದಿಸಿ ಬರೆಯಿರಿ’ ಚಿತ್ರದ ನಟನೆಗೆ ನವೀನ್ ಶಂಕರ್ ಮತ್ತು ‘ಟೋಬಿ’ ಸಿನಿಮಾಗೆ ಸಂಯುಕ್ತಾ ಹೊರನಾಡು ಅತ್ಯುತ್ತಮ ಪೋಷಕ ನಟ/ನಟಿ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ‘ಕಾಟೇರ’ ಸಿನಿಮಾ ಸಂಗೀತಕ್ಕೆ ವಿ ಹರಿಕೃಷ್ಣ ಪ್ರಶಸ್ತಿ ಪಡೆದರೆ, ಶಿವರಾಜಕುಮಾರ್ ಅವರನ್ನು ‘Entertainer of the Year’ ಎಂದು ಗೌರವಿಸಲಾಗಿದೆ.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಖಳಪಾತ್ರಕ್ಕಾಗಿ ರಮೇಶ್ ಇಂದಿರಾ SIIMA ಪ್ರಶಸ್ತಿ ಪಡೆದಿದ್ದಾರೆ. ಈ ಸಿನಿಮಾದ ಶೀರ್ಷಿಕೆ ಗೀತೆ ರಚಿಸಿದ ಧನಂಜಯ್ ರಂಜನ್ ಮತ್ತು ಈ ಹಾಡಿಗೆ ದನಿಯಾದ ಕಪಿಲ್ ಕಪಿಲನ್ ಅವರಿಗೆ ಪ್ರಶಸ್ತಿ ಲಭಿಸಿವೆ. ‘ಕಾಟೇರ’ ಸಿನಿಮಾದ ‘ಪಸಂದಾಗವ್ನೆ’ ಹಾಡಿಗೆ ಮಂಗ್ಲಿಗೆ ಗೌರವ ಸಿಕ್ಕಿದೆ. ‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾದ ಶಿಶಿರ್ ಬೈಕಾಡಿ ಮತ್ತು ‘ಕಾಟೇರ’ ಸಿನಿಮಾದ ಆರಾಧನಾ, ಅತ್ಯುತ್ತಮ ಡೆಬ್ಯೂ actor/ ಡೆಬ್ಯೂ actress ಎಂದು ಕರೆಸಿಕೊಂಡಿದ್ದಾರೆ. ‘ಲವ್’ ಸಿನಿಮಾ ನಟಿ ವೃಷಾ ಪಾಟೀಲ್‌ಗೆ Promising Actress ಪ್ರಶಸ್ತಿ ಸಿಕ್ಕಿದ್ದರೆ, ‘ಆಚಾರ್ & ಕೋ’ ಮೂವಿ ಪಾತ್ರಕ್ಕಾಗಿ ಅನಿರುದ್ಧ ಆಚಾರ್ಯ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ ಪಡೆದಿದ್ದಾರೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ, ಅತ್ಯುತ್ತಮ ಡೆಬ್ಯೂ ಡೈರೆಕ್ಟರ್ ಆದ್ರೆ, ‘ಕೈವ’ ಸಿನಿಮಾದ ಸಿನಿಮಾಟೊಗ್ರಫಿಗೆ ಶ್ವೇತ ಪ್ರಿಯಾ ನಾಯಕ್ ಅವರಿಗೆ SIIMA ಗೌರವ ಲಭಿಸಿದೆ.