ಚಿತ್ರವಿಡೀ ಅವರಿಸಿಕೊಂಡಿರುವ ಸುದೀಪ್ screen presenceನಿಂದಾಗಿ ಇಷ್ಟವಾಗುತ್ತಾರೆ. ಈ ಹಿಂದಿನ ಅವರ ‘ಕೆಂಪೇಗೌಡ’ದಂತೆ ಇಲ್ಲಿಯೂ ಚಿತ್ರದ್ದು fast-paced script. ನಿರೂಪಣೆಯಲ್ಲಿ ನಿರ್ದೇಶಕ ವಿಜಯ್‌ ಕಾರ್ತಿಕೇಯನ್‌ ಇದನ್ನು ಚೆನ್ನಾಗಿ ಹ್ಯಾಂಡಲ್‌ ಮಾಡಿದ್ದಾರೆ. ಹಾಗಾಗಿ ಸುದೀಪ್‌ರ ಅಭಿಮಾನಿಗಳಿಗಿದು ಹಬ್ಬ!

High voltage ಆಕ್ಷನ್ – ಥ್ರಿಲ್ಲರ್‌ ‘ಮ್ಯಾಕ್ಸ್’, ಸುದೀಪ್ ಅವರಿಗೆ ಒಂದೊಳ್ಳೆ come back ಆಗುವ ಸಾಧ್ಯತೆಗಳಿವೆ. ಚಿತ್ರವಿಡೀ ಅವರಿಸಿಕೊಂಡಿರುವ ಸುದೀಪ್ screen presenceನಿಂದಾಗಿ ಇಷ್ಟವಾಗುತ್ತಾರೆ. ಈ ಹಿಂದಿನ ಅವರ ‘ಕೆಂಪೇಗೌಡ’ದಂತೆ ಇಲ್ಲಿಯೂ ಚಿತ್ರದ್ದು fast-paced script. ನಿರೂಪಣೆಯಲ್ಲಿ ನಿರ್ದೇಶಕ ವಿಜಯ್‌ ಕಾರ್ತಿಕೇಯನ್‌ ಇದನ್ನು ಚೆನ್ನಾಗಿ ಹ್ಯಾಂಡಲ್‌ ಮಾಡಿದ್ದಾರೆ. ತಮ್ಮ ಎತ್ತರದ ನಿಲುವು, ಮ್ಯಾನರಿಸಂ, ಲುಕ್ಸ್‌ನಿಂದ ಸುದೀಪ್‌, ‘ಅರ್ಜುನ್‌ ಮಹಾಕ್ಷಯ್‌’ ಅಲಿಯಾಸ್‌ ‘ಮ್ಯಾಕ್ಸ್‌’ ಪಾತ್ರವನ್ನು ಸೊಗಸಾಗಿ ಕ್ಯಾರಿ ಮಾಡಿದ್ದಾರೆ. ಹಾಗಾಗಿ ಅವರ ಅಭಿಮಾನಿಗಳಿಗೆ ಇದು ಹಬ್ಬ!

ಹಾಗೆ ನೋಡಿದರೆ ಸುದೀಪ್‌ ಕಂಪ್ಲೀಟ್‌ ಆಕ್ಷನ್‌ ಓರಿಯೆಂಟೆಡ್‌ ಪಾತ್ರ ಮಾಡಿ ತುಂಬಾ ವರ್ಷಗಳೇ ಆಗಿತ್ತು. ಇಲ್ಲಿ ಮೈಹುರಿಗೊಳಿಸಿಕೊಂಡು ಭರ್ಜರಿ ಸ್ಟಂಟ್ಸ್‌ ಮಾಡಿದ್ದಾರೆ. ಆಕ್ಷನ್‌ ಪ್ರಿಯರು ಹುಬ್ಬೇರಿಸುವಂತೆ ಸ್ಟಂಟ್‌ ಕೊರಿಯೋಗ್ರಫಿ ಮಾಡಿರುವ ಸಾಹಸ ಸಂಯೋಜಕರಿಗೆ ಅಭಿನಂದನೆ ಸಲ್ಲಬೇಕು. ನಿರ್ದೇಶಕ ವಿಜಯ್‌ ಕಾರ್ತಿಕೇಯನ್‌ ಬಿಲ್ಡ್‌ಅಪ್‌ ಸೀನ್‌ಗಳನ್ನು ಚೆನ್ನಾಗಿ ಕಟ್ಟಿದ್ದು, ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ ಮತ್ತು ಶೇಖರ್‌ ಚಂದ್ರ ಅವರ ಕ್ಯಾಮೆರಾ ಕೈಚಳಕ ಇದಕ್ಕೆ ವರವಾಗಿದೆ. ರೊಮ್ಯಾನ್ಸ್‌ಗೆ ಚಿತ್ರದಲ್ಲಿ ಜಾಗವಿಲ್ಲ. ಇರುವ ಅವಕಾಶವನ್ನೇ ಅಚ್ಚುಕಟ್ಟಾಗಿ ಬಳಸಿಕೊಂಡಿದ್ದಾರೆ ಸಂಗೀತ ಸಂಯೋಜಕ ಅಜನೀಶ್‌. ಪೊಲೀಸ್‌ ಸ್ಟೇಷನ್‌ನಲ್ಲಿ ಕತೆ ಹೇಳುವ ಹಾಡೊಂದು ವಿಶೇಷವೆನಿಸುತ್ತದೆ.

ಒಂದು ರಾತ್ರಿಯಲ್ಲಿ ನಡೆಯುವ ಕತೆ ಚಿತ್ರದ್ದು. ಪೂರಾ ರಾತ್ರಿ ಹೊತ್ತಿನ ಚಿತ್ರೀಕರಣ. ಇಲ್ಲಿ ಛಾಯಾಗ್ರಾಹಕ ಶೇಖರ್‌ ಚಂದ್ರ ಅವರ ಪರಿಶ್ರಮ ದೊಡ್ಡದು. ಉತ್ತಮ ಲೈಟಿಂಗ್‌ ಮತ್ತು ಕ್ಯಾಮೆರಾ ಕೋನಗಳ ಮೂಲಕ ಅವರು frameಗಳನ್ನು ಆಕರ್ಷಕವಾಗಿಸಿದ್ದಾರೆ. ಸಂಕಲನಕಾರ ಗಣೇಶ್‌ ಬಾಬು ಆಕ್ಷನ್‌ – ಡ್ರಾಮಾಗೆ ಬೇಕಾದ ಶಾರ್ಪ್‌ ಎಡಿಟಿಂಗ್‌ನೊಂದಿಗೆ ಚಿತ್ರಕ್ಕೆ ನೆರವಾಗಿದ್ದಾರೆ. ಖಳನಾಗಿ ತೆಲುಗು ನಟ ಸುನೀಲ್‌ ಅವರದ್ದು ಚಿತ್ರವಿಡೀ ಗಂಟು ಮುಖ ಹಾಕಿಕೊಂಡು ಓಡಾಡುವ ಪಾತ್ರ. ಹೀರೋ ‘ಮ್ಯಾಕ್ಸ್‌’ ಪಾತ್ರಕ್ಕೆ ಪೈಪೋಟಿ ನೀಡುವಲ್ಲಿ ಈ ಪಾತ್ರದ ಚಿತ್ರಣ ಇನ್ನಷ್ಟು ಗಟ್ಟಿಯಾಗಬೇಕಿತ್ತು ಎನಿಸದಿರದು. ಕ್ರೈಂ ಬ್ರ್ಯಾಂಚ್‌ ಪೊಲೀಸ್‌ ಅಧಿಕಾರಿಯಾಗಿ ವರಲಕ್ಷ್ಮಿ ಶರತ್‌ ಕುಮಾರ್‌ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಸೆಂಟಿಮೆಂಟ್‌, ಎಮೋಷನ್ಸ್‌ಗೆ ಚಿತ್ರದಲ್ಲಿ ಹೆಚ್ಚು ಜಾಗವಿಲ್ಲ. ಮಗಳ ಹುಡುಕಾಟದಲ್ಲಿನ ಪೋಷಕರು, ಹೀರೋ ತಾಯಿ, ಸ್ನೇಹಿತನ ಪಾತ್ರಗಳ ಮೂಲಕ ಅಗತ್ಯವಿದ್ದೆಡೆ ಇಂತಹ ಪುಟ್ಟ ಸನ್ನಿವೇಶಗಳನ್ನು ಪೋಣಿಸಿದ್ದಾರೆ ನಿರ್ದೇಶಕ ವಿಜಯ್‌. ನೆಗೆಟೀವ್‌ ಶೇಡ್‌ನಲ್ಲೇ ಕಾಣಿಸಿಕೊಳ್ಳುತ್ತಿದ್ದ ಉಗ್ರಂ ಮಂಜು ಅವರಿಗಿಲ್ಲಿ ವಿಶಿಷ್ಟ ಪಾತ್ರವಿದೆ. ಪೊಲೀಸ್‌ ಪಾತ್ರಗಳಲ್ಲಿ ಸುಕೃತಾ ವಾಗ್ಲೆ, ಸಂಯುಕ್ತ ಹೊರನಾಡು ಅವರ ಪಾತ್ರಗಳನ್ನು ಇನ್ನಷ್ಟು ಚೆನ್ನಾಗಿ ಎಸ್ಟಾಬ್ಲಿಷ್‌ ಮಾಡಬಹುದಿತ್ತು. ಹೆಡ್‌ ಕಾನ್‌ಸ್ಟೇಬಲ್‌ ‘ರಾವಣನ್‌’ ಪಾತ್ರದಲ್ಲಿ ಇಳವರಸು ಗಮನ ಸೆಳೆಯುತ್ತಾರೆ. ಪಾತ್ರವನ್ನು ಅಂಡರ್‌ಪ್ಲೇ ಮಾಡುತ್ತಲೇ ಸಿನಿಮಾದ ಅತಿಯಾದ ವೇಗಕ್ಕೆ ಬ್ರೇಕ್‌ ಹಾಕುತ್ತಾರೆ! ಅವರದ್ದು ತೂಕದ ಅಭಿನಯ. ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರನ್ನು ಎಂಗೇಜ್‌ ಮಾಡುವ ‘ಮ್ಯಾಕ್ಸ್‌’ ವರ್ಷದ ಕೊನೆಗೊಂದು ಒಳ್ಳೆಯ ಸಿನಿಮಾ ಎಂದು ಹೇಳಬಹುದು.

LEAVE A REPLY

Connect with

Please enter your comment!
Please enter your name here