ಸಿದ್ದಾರ್ಥ್‌, ನಿಮಿಷಾ ಸಜಯನ್‌ ಅಭಿನಯದ ‘ಚಿತ್ತ’ ತಮಿಳು ಸಿನಿಮಾ ಕನ್ನಡದಲ್ಲಿ ‘ಚಿಕ್ಕು’ ಶೀರ್ಷಿಕೆಯಡಿ ತೆರೆಕಾಣುತ್ತಿದೆ. ನಟ ಸುದೀಪ್‌ ಕನ್ನಡ ಅವತರಣಿಕೆಯ ಟ್ರೈಲರ್‌ ರಿಲೀಸ್‌ ಮಾಡಿದ್ದಾರೆ. ಸೆಪ್ಟೆಂಬರ್‌ 28ರಂದು ಸಿನಿಮಾ ತೆರೆಕಾಣುತ್ತಿದೆ.

ಸಿದ್ದಾರ್ಥ್‌ ಅಭಿನಯದ ‘ಚಿತ್ತ’ ತಮಿಳು ಸಿನಿಮಾದ ಕನ್ನಡ ಅವತರಣಿಕೆ ‘ಚಿಕ್ಕು’ ಶೀರ್ಷಿಕೆಯಡಿ ತೆರೆಕಾಣಲಿದೆ. ‘ಇದೊಂದು ವಿನೂತನ ಚಿತ್ರವಾಗಲಿದೆ. ಚಿತ್ರದಲ್ಲೊಂದು ಉತ್ತಮ ಸಂದೇಶವಿದ್ದು, ಇದು ಚರ್ಚೆಗೆ ಗ್ರಾಸವಾಗಲಿದೆ’ ಎನ್ನುತ್ತಾರೆ ಚಿತ್ರದ ನಿರ್ಮಾಪಕರು. ಈ ಹಿಂದೆ ತಮಿಳಿನಲ್ಲಿ ‘ಪನ್ನೈಯಾರುಂ ಪದ್ಮಿನಿಯುಂ’ ನಂತಹ ವಿಭಿನ್ನ ಚಿತ್ರವನ್ನು ನಿರ್ದೇಶಿಸಿದ್ದ ಎಸ್‍ ಯು ಅರುಣ್‍ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ‘ಚಿಕ್ಕು’ ಚಿತ್ರ ಚಿಕ್ಕಪ್ಪ ಮತ್ತು ಅವನ ಸೋದರ ಸೊಸೆಯ ಕುರಿತಾದ ಕಥಾನಕ. ಇಂಥದ್ದೊಂದು ಅಪರೂಪದ ಸಂಬಂಧದ ಕುರಿತು ನಿರ್ಮಾಪಣವಾಗಿರುವ ಮೊದಲ ಚಿತ್ರವಿದು ಎಂದು ಚಿತ್ರತಂಡ ಹೇಳಿಕೊಳ್ಳುತ್ತದೆ. ಚಿತ್ರದ ಪ್ರಿವ್ಯೂ ನೋಡಿದವರು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ.

ನಟ ಸುದೀಪ್‌ ಕನ್ನಡ ಅವತರಣಿಕೆಯ ಟ್ರೈಲರ್‌ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭಹಾರೈಸಿದ್ದಾರೆ. KRG ಸ್ಟುಡಿಯೋಸ್‌ ಕರ್ನಾಟಕದಲ್ಲಿ ಚಿತ್ರವನ್ನು ವಿತರಿಸುತ್ತಿದೆ. ಚಿತ್ರದಲ್ಲಿ ಸಿದ್ಧಾರ್ಥ್ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ವೃತ್ತಿಜೀವನದಲ್ಲೇ ಇದೊಂದು ಮೈಲುಗಲ್ಲು ಎನ್ನಲಾಗಿದೆ. ಏತಕಿ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ ನಿರ್ಮಿಸಿರುವ ಚಿತ್ರಕ್ಕೆ ದಿಬು ನಿನಾನ್‌ ಥಾಮಸ್‌ ಸಂಗೀತ, ಬಾಲಾಜಿ ಸುಬ್ರಹ್ಮಣ್ಯಂ ಛಾಯಾಗ್ರಹಣವಿದೆ. ಸೆಪ್ಟೆಂಬರ್‌ 28ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here