ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್ಫ್ರೆಂಡ್’ ತೆಲುಗು ಸಿನಿಮಾದ ಫಸ್ಟ್ಲುಕ್ ಟೀಸರ್ ಬಿಡುಗಡೆಯಾಗಿದೆ. ರಾಹುಲ್ ರವೀಂದ್ರನ್ ನಿರ್ದೇಶನದ ಇದು ಸ್ತ್ರೀಪ್ರಧಾನ ಸಿನಿಮಾ.
ರಶ್ಮಿಕಾ ಮಂದಣ್ಣ ಅವರ ಮುಂದಿನ ಸಿನಿಮಾ ಘೋಷಣೆಯಾಗಿದೆ. ಚಿತ್ರಕ್ಕೆ ‘ದಿ ಗರ್ಲ್ಫ್ರೆಂಡ್’ ಎಂದು ಶೀರ್ಷಿಕೆ ಇಡಲಾಗಿದ್ದು, ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ರಾಹುಲ್ ರವೀಂದ್ರನ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಮೋಷನ್ ಪೋಸ್ಟರ್ನಲ್ಲಿ ನೀರಿನೊಳಗೆ ಮುಳುಗಿರುವ ರಶ್ಮಿಕಾ ಕೆಲ ಕ್ಷಣ ನಗುಮೊಗದಲ್ಲಿ ಕಾಣಿಸಿದರೆ, ಬಳಿಕ ಉಸಿರುಗಟ್ಟಿದ ರೀತಿಯಲ್ಲಿ ಕಾಣಿಸಿದ್ದಾರೆ. ಈ ಟೀಸರ್ ಕೊಂಚ ವಿಭಿನ್ನವಾಗಿಯೇ ಮೂಡಿಬಂದಿದೆ. ಇದು ನಾಯಕಿ ಪ್ರಧಾನ ಸಿನಿಮಾವಾಗಿದ್ದು, ರಶ್ಮಿಕಾ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ವಿಡಿಯೋದಲ್ಲಿ ‘ನಾನು ಅವಳನ್ನು ಎಷ್ಟು ಪ್ರೀತಿಸುತ್ತೇನೆ. ಅವಳಿಗೆ ಯಾವುದೇ ಸ್ನೇಹಿತರು ಅಥವಾ ಕುಟುಂಬ ಅಗತ್ಯವಿಲ್ಲ. ನಾನು ಸಾಕು. ಅವಳು ನನ್ನೊಂದಿಗೆ 24 ಗಂಟೆಗಳ ಕಾಲಕಳೆಯಲು ಬಯಸುತ್ತಾಳೆ. ನನ್ನದು ಎಂದು ಹೇಳಿಕೊಳ್ಳಲು ನನಗೆ ಒಬ್ಬ ಗೆಳತಿ ಇದ್ದರೆ, ಅದರ ಕಿಕ್ಕೇ ಬೇರೆ’ ಎಂಬ ಸಂಭಾಷಣೆಯಿದೆ.
ಪ್ರೇಮಿಯೊಬ್ಬನು ತನ್ನ ಪ್ರೇಯಸಿಯನ್ನು ಅತಿಯಾಗಿ ಪ್ರೀತಿಸುವುದೇ ಚಿತ್ರಕಥೆ ಎನ್ನಲಾಗುತ್ತಿದೆ. ‘ಮನ್ಮಥಡು 2’ ಚಿತ್ರದ ನಂತರ ರಾಹುಲ್ ರವೀಂದ್ರನ್ ‘ದಿ ಗರ್ಲ್ಫ್ರೆಂಡ್’ ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಶುರುವಾಗಲಿದೆ ಎಂಬ ಮಾಹಿತಿ ವಿಡಿಯೋದ ಕೊನೆಯಲ್ಲಿದೆ. ಈ ಚಿತ್ರವನ್ನು ವಿದ್ಯಾ ಕೊಪ್ಪಿನೀಡಿ ಮತ್ತು ಧೀರಜ್ ಮೊಗಿಲಿನೇನಿ ನಿರ್ಮಿಸುತ್ತಿದ್ದಾರೆ. ‘ಖುಷಿ’ ಖ್ಯಾತಿಯ ಹೇಶಮ್ ಅಬ್ದುಲ್
ವಹಾಬ್ ಸಂಗೀತ ನೀಡುತ್ತಿದ್ದಾರೆ. ಅಲ್ಲು ಅರವಿಂದ್ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಈ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಈಗಾಗಲೇ ಟಾಲಿವುಡ್ನಲ್ಲಿ ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ನಿರತರಾಗಿದ್ದಾರೆ. ಅವರ ಬಾಲಿವುಡ್ ಸಿನಿಮಾ ‘ಅನಿಮಲ್’ ಬಿಡುಗಡೆಗೆ ಸಿದ್ಧವಾಗುತ್ತಿದೆ.
The world is full of great love stories❤️
— Rashmika Mandanna (@iamRashmika) October 22, 2023
But there are those few love stories that haven't been heard or seen before ❤️🩹
And ‘The Girlfriend’ is one such. ❤️🔥#RM24@GeethaArts Production No.51 is #TheGirlfriend 🫰
– https://t.co/mWWGTgRD9G
👱♀ – @iamRashmika
✍️ & 🎬 -… pic.twitter.com/3pl9vs3ffP