ದೆಹಲಿ ಕೆಂಪು ಕೋಟೆಯಲ್ಲಿ ನಡೆಯುವ ಈ ಬಾರಿ ದಸರಾ ಲವಕುಶ ರಾಮ್‌ಲೀಲಾ ಸಮಾರಂಭದಲ್ಲಿ ಕಂಗನಾ ರಾವಣ ದಹನ ಮಾಡಲಿದ್ದಾರೆ. ಐವತ್ತು ವರ್ಷಗಳ ಇತಿಹಾಸದಲ್ಲಿ ಮಹಿಳೆಯೊಬ್ಬರು ರಾವಣ ದಹನ ಮಾಡುತ್ತಿರುವುದು ಇದೇ ಮೊದಲು. ರಾವಣ ದಹನ ಮಾಡಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಕಂಗನಾ ಪಾತ್ರರಾಗುತ್ತಿದ್ದಾರೆ.

ಈ ಬಾರಿ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ದಸರಾ ಲವಕುಶ ರಾಮ್​ಲೀಲಾ ಸಮಾರಂಭದಲ್ಲಿ ಕಂಗನಾ ರಣಾವತ್‌ ಅವರು ರಾವಣ ದಹನ ಮಾಡಲಿದ್ದಾರೆ. 50 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯಿಂದ ರಾವಣ ದಹನ ಆಗುತ್ತಿದೆ. ಆ ಮೂಲಕ ಕಂಗನಾ ರಣಾವತ್​​ ಅವರು ಇತಿಹಾಸ ಬರೆಯಲಿದ್ದಾರೆ. ಇಂದು (ಅ. 24) ಈ ಸಮಾರಂಭ ನಡೆಯಲಿದೆ. ಕಳೆದ ವರ್ಷ ಪ್ರಭಾಸ್​ ಅವರು ರಾವಣ ದಹನ ಮಾಡಿದ್ದರು. ಅದಕ್ಕೂ ಹಿಂದಿನ ವರ್ಷಗಳಲ್ಲಿ ನರೇಂದ್ರ ಮೋದಿ, ರಾಮ್‌ನಾಥ್​ ಕೋವಿಂದ್​, ಅಜಯ್​ ದೇವಗನ್​, ಜಾನ್​ ಅಬ್ರಾಹಂ ಮುಂತಾದವರು ಇದರಲ್ಲಿ ಭಾಗಿಯಾಗಿದ್ದರು. ಕೆಂಪು ಕೋಟೆಯಲ್ಲಿ ನಡೆಯುವ ‘ಲವಕುಶ ರಾಮ್​ಲೀಲಾ’ದಲ್ಲಿ ರಾವಣ ದಹನ ಮಾಡಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಕಂಗನಾ ಪಾತ್ರರಾಗುತ್ತಿದ್ದಾರೆ.

ಈ ಬಗ್ಗೆ ‘ಲವಕುಶ ರಾಮ್​ಲೀಲಾ ಸಂಸ್ಥೆ’ ಅಧ್ಯಕ್ಷ ಅರ್ಜುನ್​ ಸಿಂಗ್​ ಪ್ರತಿಕ್ರಿಯೆ ನೀಡಿ, ‘ಮಹಿಳೆಯರಿಗೆ ಸಮಾನ ಹಕ್ಕು ಸಿಗಬೇಕು ಎಂದು ನಮ್ಮ ಸಂಸ್ಥೆ ಬಯಸುತ್ತದೆ. ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಿದೆ. ಇನ್ನೂ ಸುಧಾರಣೆ ಆಗುವುದು ಬಾಕಿ ಇದೆ. ಮಹಿಳಾ ಮೀಸಲಾತಿ ಮಸೂದೆಯು ನಮ್ಮ ದೇಶ ಮತ್ತು ಸಮಾಜದ ಅಭಿವೃದ್ಧಿಗೆ ಸಹಕಾರಿ ಆಗಲಿದೆ’ ಎಂದು ಹೇಳಿದ್ದಾರೆ. ಕಂಗನಾ​ ನಟನೆಯ ‘ತೇಜಸ್’ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಈ ಶುಕ್ರವಾರ (ಅ 27) ತೆರೆಕಾಣಲಿರುವ ಈ ಸಿನಿಮಾದ ಪ್ರಚಾರ ಕಾರ್ಯದಲ್ಲೂ ಅವರು ನಿರತರಾಗಿದ್ದಾರೆ. ಈ ಕುರಿತು ಕಂಗನಾ ‘ನಮಸ್ಕಾರ ಗೆಳೆಯರೇ ಅಕ್ಟೋಬರ್​ 24ರಂದು ರಾವಣ ದಹನ ಮಾಡಲು, ಕೆಟ್ಟದ್ದರ ಮೇಲೆ ಒಳ್ಳೆಯದರ ಗೆಲುವನ್ನು ಸ್ಥಾಪಿಸಲು ಬರುತ್ತಿದ್ದೇನೆ. ಇದರಲ್ಲಿ ನೀವೂ ಕೂಡ ಭಾಗಿಯಾಗಿ. ಹಾಗೆಯೇ, ಅಕ್ಟೋಬರ್​ 27ರಂದು ನನ್ನ ‘ತೇಜಸ್’’ ಸಿನಿಮಾ ಬಿಡುಗಡೆ​ ಆಗಲಿದೆ. ಆ ಸಿನಿಮಾದಲ್ಲಿ ಭಾರತೀಯ ವಾಯುಸೇನೆಯ ಕಥೆ ಇದೆ. ಅದನ್ನು ನೋಡಲು ಮರೆಯದಿರಿ. ಜೈ ಶ್ರೀರಾಮ್​’ ಎಂದು ಕ್ಯಾಪ್ಶನ್‌ ನೀಡಿದ್ದಾರೆ.

LEAVE A REPLY

Connect with

Please enter your comment!
Please enter your name here