ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ ಲಾಲ್‌ ಅವರು ‘ಎಂದೆಂದೂ ನಿನ್ನನು ಮರೆತು’ ಹಾಡು ಗುನುಗಿದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವರನಟ ಡಾ ರಾಜಕುಮಾರ್‌ – ಮಂಜುಳಾ ಅಭಿನಯದ ‘ಎರಡು ಕನಸು’ ಚಿತ್ರದ ಎವರ್‌ಗ್ರೀನ್‌ ಸಾಂಗ್‌ ಇದು.

ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ ಲಾಲ್‌ ಅವರು ‘ಎಂದೆಂದೂ ನಿನ್ನನು ಮರೆತು’ ಹಿಟ್‌ ಸಾಂಗ್‌ ಗುನುಗಿದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವರನಟ ಡಾ ರಾಜಕುಮಾರ್‌ ಅಭಿನಯದ ‘ಎರಡು ಕನಸು’ ಚಿತ್ರದ ಎವರ್‌ಗ್ರೀನ್‌ ಸಾಂಗ್‌ ಇದು. ರಾಜನ್‌ – ನಾಗೇಂದ್ರ ಸಂಗೀತ ಸಂಯೋಜನೆಯ ಹಾಡಿಗೆ ಪಿ ಬಿ ಶ್ರೀನಿವಾಸ್‌ ಮತ್ತು ವಾಣಿ ಜಯರಾಂ ದನಿಯಾಗಿದ್ದಾರೆ. ಮೋಹನ್‌ ಲಾಲ್‌ ಈ ಹಾಡನ್ನು ಆಲಿಸುತ್ತಾ, ಗುನುಗುತ್ತಾ ಎಂಜಾಯ್‌ ಮಾಡುವ ವೀಡಿಯೋ ತುಣುಕು ಸೋಷಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿದೆ. ನಟ ಲಾಲ್‌ ಅವರು ಮೂಲಕ ರಾಜಕುಮಾರ್‌ ಅವರೆಡೆಗಿನ ತಮ್ಮ ಅಭಿಮಾನ ಸಾರಿದ್ದಾರೆ. ಡಾ ರಾಜ್‌ ಅಭಿಮಾನಿಗಳು ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಈ ವೀಡಿಯೋವನ್ನು share ಮಾಡಿ ಸಂಭ್ರಮಿಸಿದ್ದಾರೆ.

ನಟ ಮೋಹನ್‌ ಲಾಲ್‌ ಅವರು ನಾಳೆ (ಮೇ 21) 64ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ರಾಜೇಂದ್ರ ಸಿಂಗ್‌ ಬಾಬು ನಿರ್ದೇಸನದ ‘ಲವ್‌’ ಚಿತ್ರದೊಂದಿಗೆ ಮೋಹಲ್‌ ನಾಲ್‌ ಸ್ಯಾಂಡಲ್‌ವುಡ್‌ಗೆ ಬಂದಿದ್ದರು. ಚಿತ್ರದಲ್ಲಿ ಅವರು ಮೋಹನ್‌ ನಾಯರ್‌ ಎನ್ನುವ ಪಾತ್ರ ಮಾಡಿದ್ದರು. ಆನಂತರ ಅವರು ಪುನೀತ್‌ ರಾಜಕುಮಾರ್‌ರ ‘ಮೈತ್ರಿ’ ಸಿನಿಮಾದ ‘ಮಹದೇವ್‌ ಗೋಡ್ಕೆ’ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಳೆ (ಮೇ 21) ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ತೆರೆಗೆ ಸಿದ್ಧವಿರುವ ಅವರ ಸಿನಿಮಾಗಳು ಹಾಗೂ ನೂತನ ಸಿನಿಮಾಗಳ ಬಗ್ಗೆ ವಿಶೇಷ ಮಾಹಿತಿ ಹೊರಬೀಳಲಿದೆ.

LEAVE A REPLY

Connect with

Please enter your comment!
Please enter your name here