2022ರ ಆಸ್ಕರ್ ಸಮಾರಂಭ ಮಾರ್ಚ್ 27ರಂದು ಭಾನುವಾರ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ. ಭಾರತೀಯ ವೀಕ್ಷಕರಿಗೆ ಮಾರ್ಚ್ 28ರ ಸೋಮವಾರ ಬೆಳಗಿನ ಜಾವ ಲೈವ್ ಸಿಗಲಿದೆ.

94ನೇ ಅಕಾಡೆಮಿ ಅವಾರ್ಡ್ಸ್ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಇವೆಂಟ್ ನಡೆಯುತ್ತಿದ್ದು, Amy Schumer, Wanda Sykes ಮತ್ತು Regina Hall ಹೋಸ್ಟ್ ಮಾಡುತ್ತಿದ್ದಾರೆ. ಈ ಬಾರಿ ‘The Power of the Dog’ ಸಿನಿಮಾ ಅತಿ ಹೆಚ್ಚು 12 ನಾಮಿನೇಷನ್ಸ್ ಪಡೆದಿದೆ. ‘Dune’ ಹತ್ತು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಲೈವ್ ಟೆಲಿಕಾಸ್ಟ್ ಆರಂಭವಾಗುವುದಕ್ಕೆ ಮುನ್ನ ಎಂಟು ಕೆಟಗರಿಗಳಲ್ಲಿ ಪ್ರಶಸ್ತಿ ನೀಡಲಾಗಿರುತ್ತದೆ. 2022ರ ಆಸ್ಕರ್ ಸಮಾರಂಭ ಮಾರ್ಚ್ 27ರಂದು ಭಾನುವಾರ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ. ಭಾರತೀಯ ವೀಕ್ಷಕರಿಗೆ ಮಾರ್ಚ್ 28ರ ಸೋಮವಾರ ಬೆಳಗಿನ ಜಾವ ಲೈವ್ ಸಿಗಲಿದೆ. ಭಾರತದಲ್ಲಿ ವೀಕ್ಷಕರು Hotstarನಲ್ಲಿ ಮಾರ್ಚ್ 28ರಂದು ಬೆಳಗ್ಗೆ 5ಗಂಟೆಯಿಂದ ಲೈವ್ ನೋಡಬಹುದು.

ರೆಡ್ ಕಾರ್ಪೆಟ್ 5 ಗಂಟೆಗೆ ಶುರುವಾಗಲಿದ್ದು, ಅವಾರ್ಡ್ ಇವೆಂಟ್ 5.30ಕ್ಕೆ ನಡೆಯಲಿದೆ. ಟೆಲಿವಿಷನ್ ವೀಕ್ಷಕರು ಮಾರ್ಚ್ 28ರ ಬೆಳಗ್ಗೆ 5.30ಕ್ಕೆ Star Movies, Star Movies Select HD, Star Movies HD, Star World, Star World Premiere HD ಮತ್ತು Star World HD ನಲ್ಲಿ ಇವೆಂಟ್ ಲೈವ್ ಆಗಿ ವೀಕ್ಷಿಸಬಹುದು. ರೆಪೀಟ್ ಟೆಲಿಕಾಸ್ಟ್ ಅದೇ ದಿನ ಸಂಜೆ 8.30ಕ್ಕೆ ಸಿಗಲಿದೆ. ಅಕಾಡೆಮಿಯ ಟ್ವಿಟರ್ ಹ್ಯಾಂಡಲ್ ಪ್ರಶಸ್ತಿ ವಿಜೇತರ ಕುರಿತ ವೀಡಿಯೋಗಳನ್ನು ಟ್ವೀಟ್ ಮಾಡಲಿದೆ.

LEAVE A REPLY

Connect with

Please enter your comment!
Please enter your name here