ವಿಶ್ವಾಸ್ ಕೃಷ್ಣ ನಿರ್ದೇಶನದ ‘ಯಾವ ಮೋಹನ ಮುರಳಿ ಕರೆಯಿತು’ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆಯಾಗಿದೆ. ವಿ ನಾಗೇಂದ್ರಪ್ರಸಾದ್ ರಚನೆಯ ಈ ಹಾಡಿಗೆ ಅನಿಲ್ ಸಿ ಜೆ ಸಂಗೀತ ಸಂಯೋಜಿಸಿದ್ದಾರೆ.
ನಾಡಿನ ಹೆಸರಾಂತ ಕವಿ ಗೋಪಾಲಕೃಷ್ಣ ಅಡಿಗರು ಬರೆದಿರುವ ‘ಯಾವ ಮೋಹನ ಮುರಳಿ ಕರೆಯಿತು’ ಹಾಡಿನ ಮೊದಲ ಸಾಲೇ ಈ ಚಿತ್ರದ ಶೀರ್ಷಿಕೆಯಾಗಿದೆ. ಈ ಚಿತ್ರಕ್ಕಾಗಿ ವಿ ನಾಗೇಂದ್ರಪ್ರಸಾದ್ ಬರೆದಿರುವ ‘ಯಾವ ಮೋಹನ ಮುರಳಿ ಕರೆಯಿತು’ ಟೈಟಲ್ ಸಾಂಗ್ ಬಿಡುಗಡೆಯಾಗಿದೆ. ಅನಿಲ್ ಸಿ ಜೆ ಸಂಗೀತ ಚಿತ್ರಕ್ಕಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಹಾಡನ್ನು ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭಕೋರಿದರು. ‘ಅಂಗವಿಕಲ ಹುಡುಗಿ ಮತ್ತು ಶ್ವಾನದ ನಡುವಿನ ಪ್ರೀತಿಯ ಕುರಿತಾದ ಚಿತ್ರವಿದು. ಕನ್ನಡದಲ್ಲಿ ಶ್ವಾನದ ಕುರಿತಾದ ಚಿತ್ರಗಳು ಬಂದಿದೆ. ಆದರೆ ಈ ಕಥೆ ವಿಭಿನ್ನ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿಶ್ವಾಸ್ ಕೃಷ್ಣ. ಶರಣಪ್ಪ ಗೌರಮ್ಮ ನಿರ್ಮಾಣದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಬೇಬಿ ಪ್ರಕೃತಿ, ಮಾಧವ, ಸ್ವಪ್ನ ಶೆಟ್ಟಿಗಾರ್, ಪಟೇಲ್ ವರುಣ್ ರಾಜ್ ನಟಿಸಿದ್ದಾರೆ. ರಾಕಿ ಹೆಸರಿನ ನಾಯಿ ಚಿತ್ರದಲ್ಲಿ ಕಾಣಿಸಿಕೊಂಡಿದೆ.