ನಟ ಶಿವರಾಜಕುಮಾರ್‌ ‘ಇಮೇಲ್‌’ ಕನ್ನಡ – ತಮಿಳು ದ್ವಿಭಾಷಾ ಸಿನಿಮಾದ ಟೀಸರ್‌ ಬಿಡುಗಡೆ ಮಾಡಿದ್ದಾರೆ. ಎಸ್‌ ಆರ್‌ ರಾಜನ್‌ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರದ ಮುಖ್ಯ ಪಾತ್ರದಲ್ಲಿ ರಾಗಿಣಿ ದ್ವಿವೇದಿ ನಟಿಸಿದ್ದಾರೆ.

ರಾಗಿಣಿ ದ್ವಿವೇದಿ ನಟನೆಯ ಕನ್ನಡ – ತಮಿಳು ದ್ವಿಭಾಷಾ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ನಟ ಶಿವರಾಜಕುಮಾರ್‌ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಚಿತ್ರದಲ್ಲಿ ಮುರುಗ ಅಶೋಕ್, ಮನೋಬಲ, ‘ಜೈಲರ್’ ಸಿನಿಮಾ ಖ್ಯಾತಿಯ ಬಿಲ್ಲಿ, ‘ಲೊಳ್ಳುಸಭಾ’ ಮನೋಹರ್, ಅಕ್ಷಯ್ ರಾಜ್, ಅರತಿ ಶ್ರೀ, ಆದವ ಬಾಲಾಜಿ, ಮಂಜು ನಂಜನಗೂಡು, ಸುನೀಲ್ ಸಫಿ, ರಾಮ್ ಸನ್ನಿ ಪ್ರಮುಖ ತಾರಾಬಳಗದಲ್ಲಿದ್ದಾರೆ. ಜುಬಿನ್ ಹಾಗೂ ‘ಐ ಲವ್ ಯು’ ಸಿನಿಮಾ ಖ್ಯಾತಿಯ ಕಿರಣ್ ತೊಟಂಬೈಲ್ ಸಂಗೀತ ಸಂಯೋಜಿಸಿದ್ದಾರೆ. ಕನ್ನಡದ ಹಾಡುಗಳನ್ನು ಸಂತೋಷ್ ನಾಯಕ್ ಬರೆದಿದ್ದಾರೆ. ಮಾಸ್ ಮಾದ, ಬೀರ್ ಮಾಸ್ಟರ್ ಹಾಗೂ ಫಯಾಜ್‌ ಖಾನ್ ಸಾಹಸ ನಿರ್ದೇಶನ ಹಾಗೂ ಸೆಲ್ವಂ ಅವರ ಛಾಯಾಗ್ರಹಣ ಚಿತ್ರಕ್ಕಿದೆ. S R Films Factory ಬ್ಯಾನರ್‌ ಅಡಿಯಲ್ಲಿ ಎಸ್ ಆರ್ ರಾಜನ್ ಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಗೋವಾ, ಮುಂಬಯಿಯಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ.

LEAVE A REPLY

Connect with

Please enter your comment!
Please enter your name here