ಯಶ್‌ ಅಭಿನಯದ ಬ್ಲಾಕ್‌ ಬಸ್ಟರ್‌ ‘KGF’ ಸರಣಿ ಸಿನಿಮಾಗಳು ಜುಲೈ 14ರಂದು ಜಪಾನ್‌ನಲ್ಲಿ ಬಿಡುಗಡೆಯಾಗಲಿವೆ. ಸಿನಿಮಾ ನಿರ್ಮಿಸಿದ ಹೊಂಬಾಳೆ ಬ್ಯಾನರ್‌ ಟ್ವಿಟರ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದೆ. ನಟ ಯಶ್‌ ಅವರು ಜಪಾನೀಸ್‌ ಭಾಷೆಯಲ್ಲಿ ಹಾಯ್‌ ಹೇಳುತ್ತಾ ಅಲ್ಲಿನ ಜನರಿಗೆ ಸಿನಿಮಾ ಪರಿಚಯಿಸಿದ್ದಾರೆ.

ಪ್ರಶಾಂತ್‌ ನೀಲ್‌ ನಿರ್ದೇಶನದ, ಯಶ್‌ ಅಭಿನಯದ ಬ್ಲಾಕ್‌ ಬಸ್ಟರ್‌ ಸಿನಿಮಾ ಸರಣಿಗಳಾದ ‘KGF’ ಮತ್ತು ‘KGF2’ ಜಪಾನ್‌ನಲ್ಲಿ ಇದೇ ಜುಲೈ 14ರಂದು ಬಿಡುಗಡೆಯಾಗಲಿವೆ. ‘KGF Chapter 2’ ಕಳೆದ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿತ್ತು. ಜಪಾನ್‌ನಲ್ಲಿ ‘KGF’ ಮತ್ತು ‘KGF2’ ಬಿಡುಗಡೆ ಪ್ರಕಟಣೆಯನ್ನು ಹೊಂಬಾಳೆ ಫಿಲ್ಮ್ಸ್ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. ಜೊತೆಗೆ ರಾಕಿ ಭಾಯ್ ಯಶ್ ಅವರ ವೀಡಿಯೊ ಕೂಡ ಇದೆ. ಅವರು ಜಪಾನ್ ದೇಶದಲ್ಲಿ ತಮ್ಮ ಚಿತ್ರದ ಬಿಡುಗಡೆಯ ಬಗ್ಗೆ ಜಪಾನ್ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ವೀಡಿಯೊ ಸಂದೇಶವನ್ನು ಯಶ್ ಜಪಾನೀಸ್ ಭಾಷೆಯಲ್ಲಿ ಆರಂಭಿಸಿ, ‘ಚಿತ್ರ ಇದೇ 14ರಿಂದ ಜಪಾನ್‌ನಲ್ಲಿ ಬಿಡುಗಡೆಯಾಗಲಿದೆ. ದಿನಾಂಕವನ್ನು ಸೇವ್‌ ಮಾಡಿಕೊಳ್ಳಿ. ನಿಮ್ಮ ಹತ್ತಿರದ ಥಿಯೇಟರ್‌ ಗಳಿಗೆ ಬೇಟಿ ನೀಡಿ’ ಎಂದಿದ್ದಾರೆ.

ಜಪಾನೀಸ್‌ ಭಾಷೆಯ ಉಪಶೀರ್ಷಿಕೆಗಳೊಂದಿಗೆ ‘KGF’ ತಂಡ ಸರಣಿಗಳನ್ನು ಜಪಾನೀಸ್‌ ಆವೃತ್ತಿಯ ಪೋಸ್ಟರ್‌ ಮತ್ತು ಟ್ರೈಲರ್‌ ಅನ್ನು ಬಿಡುಗಡೆ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಎರಡನೇ ಭಾಗದಲ್ಲಿ ಸಂಜಯ್ ದತ್ ರಾಕಿ ಭಾಯ್ ಅವರಿಗೆ ಎದುರಾಳಿಯಾಗಿ ನಟಿಸಿದ್ದರು. ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ರಾವ್ ರಮೇಶ್, ಪ್ರಕಾಶ್ ರಾಜ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ಜಪಾನ್‌ನಲ್ಲಿ ತೆರೆಕಂಡ ‘RRR’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

LEAVE A REPLY

Connect with

Please enter your comment!
Please enter your name here