ಶ್ರೀಧರ್‌ ಸ್ವರಾಘವ್‌ ನಿರ್ದೇಶನದ ‘HER’ ತನಿಖಾ ಆಕ್ಷನ್‌ – ಥ್ರಿಲ್ಲರ್‌ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ರುಹಾನಿ ಶರ್ಮಾ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಸಿನಿಮಾ ಯುವತಿಯೊಬ್ಬಳ ಕೊಲೆಯ ಸುತ್ತ ಸುತ್ತುತ್ತದೆ.

ರುಹಾನಿ ಶರ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ತನಿಖಾ ಆಕ್ಷನ್ – ಥ್ರಿಲ್ಲರ್ ‘HER’ ಚಾಪ್ಟರ್‌-1 ತೆಲುಗು ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ನಟ ವರುಣ್‌ ತೇಜ್‌ ಚಿತ್ರದ ಟ್ರೈಲರ್‌ ಅನಾವರಣಗೊಳಿಸಿ, ‘ರುಹಾನಿ ಶರ್ಮಾ ಮತ್ತು ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳು’ ಎಂದು ಟ್ವೀಟ್ ಮಾಡಿದ್ದು, ಟ್ರೇಲರ್ ಅನ್ನು ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಸ್ವಾತಿ ಎಂಬ ಹುಡುಗಿಯ ಕೊಲೆಯ ಬಗ್ಗೆ ಶಂಕಿತ ವ್ಯಕ್ತಿಯನ್ನು ರುಹಾನಿ ಶರ್ಮಾ ಪ್ರಶ್ನಿಸುವುದರೊಂದಿಗೆ ಟ್ರೈಲರ್ ಆರಂಭವಾಗುತ್ತದೆ. ಸ್ವಾತಿ ಕೊಲೆ ಪ್ರಕರಣದೊಂದಿಗೆ ಪೊಲೀಸರು ಕೊಲೆಗಾರರನ್ನು ಹುಡುಕುವ ಪ್ರಯತ್ನಗಳು ರುಹಾನಿ ಅವರ ಚಾಕಚಕ್ಯತೆ, ರಹಸ್ಯ ಕಾರ್ಯಚರಣೆಗಳನ್ನು ಒಳಗೊಂಡಿದೆ. ಸುರೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಡಬಲ್ ಅಪ್ ಮೀಡಿಯಾದ ರಘು ಸಂಕುರಾತ್ರಿ ಮತ್ತು ದೀಪಾ ಸಂಕುರಾತ್ರಿ ನಿರ್ಮಿಸಿರುವ ಚಿತ್ರವನ್ನು ಶ್ರೀಧರ್ ಸ್ವರಾಘವ್ ನಿರ್ದೇಶಿಸಿದ್ದಾರೆ. ವಿಕಾಸ್ ವಶಿಷ್ಟ, ಸಂಜಯ್ ಸ್ವರೂಪ್, ಪ್ರದೀಪ್ ರುದ್ರ, ವಿನೋದ್ ವರ್ಮ, ಅಭಿಜ್ಞಾ, ಜೀವನ್, ರವಿವರ್ಮ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಷ್ಣು ಬೆಸಿ ಛಾಯಾಗ್ರಹಣ, ಚಾಣಕ್ಯ ರೆಡ್ಡಿ ತೂರುಪು ಸಂಕಲನ, ಪವನ್ ಸಂಗೀತ ಸಿನಿಮಾಗಿದೆ.

Previous articleತಾವು ಕೋರ್ಟ್‌ ಮೊರೆ ಹೋಗಿದ್ದೇಕೆ? | ಸುದೀರ್ಘ ಪತ್ರದಲ್ಲಿ ವಿವರಣೆ ನೀಡಿದ ನಟ ಸುದೀಪ್‌
Next articleಜಪಾನ್‌ನಲ್ಲಿ ರಿಲೀಸ್‌ ಆಗಲಿವೆ ‘KGF’ ಸರಣಿ ಸಿನಿಮಾಗಳು | ಟ್ವಿಟರ್‌ನಲ್ಲಿ ಯಶ್‌ ವೀಡಿಯೋ

LEAVE A REPLY

Connect with

Please enter your comment!
Please enter your name here