96ನೇ ಆಸ್ಕರ್‌ ಪ್ರಶಸ್ತಿಗಳಿಗೆ ಭಾರತದಿಂದ ನಾಮನಿರ್ದೇಶನಗೊಂಡಿದ್ದ ‘2018’ ಮಲಯಾಳಂ ಚಿತ್ರವು ಅಂತಿಮ 15 ಸಿನಿಮಾಗಳ ಪಟ್ಟಿಗೆ ಸೇರ್ಪಡೆಗೊಳ್ಳುವಲ್ಲಿ ವಿಫಲವಾಗಿದೆ. ಟೊವಿನೋ ಥಾಮಸ್ ನಾಯಕನಾಗಿ ನಟಿಸಿರುವ ಸಿನಿಮಾ 96ನೇ ಆಸ್ಕರ್‌ಗೆ ಭಾರತದಿಂದ ಅಧಿಕೃತವಾಗಿ ಪ್ರವೇಶ ಪಡೆದಿತ್ತು.

ಭಾರತದಿಂದ ಅಧಿಕೃತವಾಗಿ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದ್ದ ‘2018’ ಮಲಯಾಳಂ ಚಿತ್ರವು ಅಂತಿಮ 15 ಸಿನಿಮಾಗಳ ಪಟ್ಟಿಗೆ ಸೇರ್ಪಡೆಗೊಳ್ಳುವಲ್ಲಿ ವಿಫಲವಾಗಿದೆ. ಟೊವಿನೋ ಥಾಮಸ್ ನಾಯಕನಾಗಿ ನಟಿಸಿರುವ ಸಿನಿಮಾ 96ನೇ ಆಸ್ಕರ್‌ಗೆ ಭಾರತದಿಂದ ಅಧಿಕೃತವಾಗಿ ಪ್ರವೇಶ ಪಡೆದಿತ್ತು. 2018ರ ವಿನಾಶಕಾರಿ ಕೇರಳ ಪ್ರವಾಹದ ಕಥೆ ಹೇಳುವ ಚಿತ್ರವಿದು. ಮೇ 5, 2023ರಂದು ತೆರೆಕಂಡಿದ್ದ ಚಿತ್ರವನ್ನು ಜ್ಯೂಡ್‌ ಆಂಥೋನಿ ಜೋಸೆಫ್ ನಿರ್ದೇಶಿಸಿದ್ದರು. ಸಿನಿಮಾದಲ್ಲಿ ಕುಂಚಕೋ ಬೋಬನ್, ಆಸಿಫ್ ಅಲಿ, ವಿನೀತ್ ಶ್ರೀನಿವಾಸನ್, ಅಪರ್ಣಾ ಬಾಲಮುರಳಿ, ಕಲೈಯರಸನ್, ನರೇನ್, ಲಾಲ್, ಇಂದ್ರನ್ಸ್, ಸುಧೀಶ್, ಗಿಲು ಜೋಸೆಫ್, ವಿನಿತಾ ಕೋಶಿ, ಅಜು ವರ್ಗೀಸ್, ತನ್ವಿ ರಾಮ್, ಶಿವದಾ, ಗೌತಮಿ ನಾಯರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಜೊನಾಥನ್ ಗ್ಲೇಜರ್ ಅವರ ಐತಿಹಾಸಿಕ ಚಲನಚಿತ್ರ ‘ದಿ ಝೋನ್ ಆಫ್ ಇಂಟ್ರೆಸ್ಟ್’ (ಯುಕೆ), ಮ್ಯಾಡ್ಸ್ ಮಿಕ್ಕೆಲ್ಸೆನ್ ನಟಿಸಿರುವ ‘ದಿ ಪ್ರಾಮಿಸ್ಡ್ ಲ್ಯಾಂಡ್’ ಮತ್ತು ಜಪಾನ್‌ನ ‘ಪರ್ಫೆಕ್ಟ್ ಡೇಸ್’ ಚಿತ್ರಗಳು ಸ್ಪರ್ಧೆಯ ಮುಂಚೂಣಿಯಲ್ಲಿವೆ. 88 ದೇಶಗಳ ಚಲನಚಿತ್ರಗಳು ಈ ವಿಭಾಗದಲ್ಲಿ ಅರ್ಹತೆ ಪಡೆದಿದ್ದು, ಶಾರ್ಟ್‌ ಲಿಸ್ಟ್ ಮಾಡಿದ ಚಲನಚಿತ್ರಗಳು ಮುಂದಿನ ಸುತ್ತಿನ ಸ್ಪರ್ಧೆಗಳಿಗೆ ಅಣಿಯಾಗುತ್ತಿವೆ. ಆ ಪಟ್ಟಿಗಳಲ್ಲಿ ‘ಅಮೇರಿಕಾಟ್ಸಿ’ (ಅರ್ಮೇನಿಯಾ), ‘ದಿ ಮಾಂಕ್ ಅಂಡ್ ದಿ ಗನ್’ (ಭೂತಾನ್), ‘ಫಾಲನ್ ಲೀವ್ಸ್’ (ಫಿನ್‌ಲ್ಯಾಂಡ್), ‘ದಿ ಟೇಸ್ಟ್ ಆಫ್ ಥಿಂಗ್ಸ್’ (ಫ್ರಾನ್ಸ್), ‘ದಿ ಟೀಚರ್ಸ್ ಲಾಂಜ್’ (ಜರ್ಮನಿ), ‘ಗಾಡ್‌ಲ್ಯಾಂಡ್’ (ಐಸ್‌ಲ್ಯಾಂಡ್), ‘I O ಕ್ಯಾಪಿಟಾನೊ’ (ಇಟಲಿ) , ‘ಟೋಟೆಮ್’ (ಮೆಕ್ಸಿಕೋ), ‘ದಿ ಮದರ್ ಆಫ್ ಆಲ್ ಲೈಸ್’ (ಮೊರಾಕೊ), ‘ಸೊಸೈಟಿ ಆಫ್ ದಿ ಸ್ನೋ’ (ಸ್ಪೇನ್), ‘ಫೋರ್ ಡಾಟರ್ಸ್’ (ಟುನೀಶಿಯಾ) ಮತ್ತು ’20 ಡೇಸ್ ಇನ್ ಮಾರಿಯುಪೋಲ್’ (ಉಕ್ರೇನ್) ಚಲನಚಿತ್ರಗಳಿವೆ.

AMPAS (The Academy of Motion Picture Arts and Sciences) ಇತರೆ ಒಂಬತ್ತು ವಿಭಾಗಳಾದ ಮೂಲ ಗೀತೆ, ಧ್ವನಿ, ಸಾಕ್ಷ್ಯಚಿತ್ರ ವೈಶಿಷ್ಟ್ಯ, ಸಾಕ್ಷ್ಯಚಿತ್ರ ಕಿರುಚಿತ್ರ, ಅನಿಮೇಟೆಡ್ ಕಿರುಚಿತ್ರ, ಲೈವ್ ಆಕ್ಷನ್ ಕಿರುಚಿತ್ರ, ಮೇಕ್ಅಪ್ ಮತ್ತು ಕೇಶವಿನ್ಯಾಸ ಮತ್ತು ದೃಶ್ಯ ಪರಿಣಾಮಗಳು ಸೇರಿದಂತೆ ಕಿರುಪಟ್ಟಿಗಳನ್ನು ಬಿಡುಗಡೆ ಮಾಡಿದೆ. 95ನೇ ಆಸ್ಕರ್ ಪ್ರಶಸ್ತಿಗಳಲ್ಲಿ, ‌’RRR’ ಅತ್ಯುತ್ತಮ ಮೂಲ ಹಾಡು ಮತ್ತು ‘ದಿ ಎಲಿಫೆಂಟ್ ವಿಸ್ಪರರ್ಸ್’, ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರವನ್ನು ಗೆದ್ದ ಎರಡು ಭಾರತೀಯ ಚಲನಚಿತ್ರಗಳನ್ನು ಚಲನಚಿತ್ರ ತಯಾರಕರು ನೇರವಾಗಿ ಆಸ್ಕರ್‌ಗೆ ಕಳುಹಿಸಿದ್ದರು, ಆದರೆ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶ ಪಡೆದಿದ್ದ ಗುಜರಾತಿ ಚಲನಚಿತ್ರ ‘ಚೆಲೋ ಶೋ’ ಅಂತಿಮ ಐದು ನಾಮನಿರ್ದೇಶನಗಳಿಗೆ ಆಯ್ಕೆಯಾಗುವುದರಲ್ಲಿ ವಿಫಲವಾಯಿತು. 2001ರಲ್ಲಿ ಅಮೀರ್ ಖಾನ್ ನಟನೆಯ ‘ಲಗಾನ್’ ಹಿಂದಿ ಸಿನಿಮಾ ಅಂತಿಮ ಐದರ ಸ್ಥಾನ ಪಡೆದ ಕೊನೆಯ ಭಾರತೀಯ ಚಿತ್ರ. 96ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಮಾರ್ಚ್ 10, 2024ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ.

LEAVE A REPLY

Connect with

Please enter your comment!
Please enter your name here