ದುಲ್ಕರ್ ಸಲ್ಮಾನ್ ನಟನೆಯ ಬಹುನಿರೀಕ್ಷಿತ ‘ಕುರುಪ್’ ಕ್ರೈಂ – ಥ್ರಿಲ್ಲರ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಕೇರಳ ಮೂಲದ ಕ್ರಿಮಿನಲ್‌ ಸುಕುಮಾರ ಕುರುಪ್‌ ಬದುಕಿನ ಕತೆಯಿದು. ನವೆಂಬರ್‌ 12ರಂದು ಸಿನಿಮಾ ತೆರೆಕಾಣಲಿದೆ.

ಶ್ರೀನಾಥ್ ರಾಜೇಂದ್ರನ್ ನಿರ್ದೇಶನದಲ್ಲಿ ದುಲ್ಕರ್ ಸಲ್ಮಾನ್ ನಟಿಸಿರುವ ‘ಕುರುಪ್‌’ ಕ್ರೈಂ – ಥ್ರಿಲ್ಲರ್‌ ಮಲಯಾಳಂ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್‌ನಲ್ಲಿ ನಟ ದುಲ್ಕರ್ ಅವರ ಪವರ್‌ಫುಲ್‌ ಸ್ಕ್ರೀನ್‌ಪ್ರಸೆನ್ಸ್‌ ಕಾಣಿಸುತ್ತದೆ. ಶೋಭಿತಾ ಧುಲಿಪಾಲಾ ಚಿತ್ರದ ಹಿರೋಯಿನ್‌. ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾ‍ಷೆಗಳಲ್ಲಿ ಸಿನಿಮಾ ತೆರೆಕಾಣುತ್ತಿದೆ. ಕೇರಳದ ಮೋಸ್ಟ್‌ ವಾಂಟೆಂಡ್ ಚಾಲಾಕಿ ಕ್ರಿಮಿನಲ್‌ ಸುಕುಮಾರ ಕುರುಪ್‌ ಬದುಕನ್ನು ಆಧರಿಸಿದ ಚಿತ್ರವಿದು. ದುಲ್ಕರ್ ನಟಿಸಿ, ನಿರ್ಮಿಸಿರುವ ‘ಕುರುಪ್‌’ ಕಳೆದ ವರ್ಷವೇ ತೆರೆಕಾಣಬೇಕಿತ್ತು. ಕೋವಿಡ್‌ನಿಂದಾಗಿ ಬಿಡುಗಡೆ ವಿಳಂಬವಾಗಿ, ಕೊನೆಗೆ ಮುಂದಿನ ವಾರ ಥಿಯೇಟರ್‌ಗೆ ಬರುತ್ತಿದೆ.

ಕೆ.ಎಸ್‌.ಅರವಿಂದ್‌, ಜಿತಿನ್ ಕೆ ಜೋಸ್ ಮತ್ತು ಡೇನಿಯಲ್ ಸಯೂಜ್ ನಾಯರ್ ಚಿತ್ರಕಥೆ ರಚಿಸಿದ್ದಾರೆ. ಇಂದ್ರಜಿತ್ ಸುಕುಮಾರನ್‌, ಸನ್ನಿ ವೇನ್‌, ಭರತ್ ಶ್ರೀನಿವಾಸನ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹೀರೋ, ನಿರ್ಮಾಪಕ ದುಲ್ಕರ್ ಸಲ್ಮಾನ್ ತಮ್ಮ ಮಹತ್ವಾಕಾಂಕ್ಷೆಯ ಚಿತ್ರದ ಬಗ್ಗೆ ಟ್ವೀಟ್ ಮಾಡಿ ಟ್ರೈಲರ್ ಹಾಕಿದ್ದಾರೆ. ದಕ್ಷಿಣದ ಹಲವು ತಾರೆಯರು, ಬಾಲಿವುಡ್‌ ನಿರ್ದೇಶಕ ಕರಣ್ ಜೋಹರ್‌ ಚಿತ್ರದ ಟ್ರೈಲರ್‌ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. ಕೋವಿಡ್ ನಂತರದ ದಿನಗಳಲ್ಲಿ ಬಿಡುಗಡೆಯಾಗುತ್ತಿರುವ ಈ ದೊಡ್ಡ ಸಿನಿಮಾ ಮಾಲಿವುಡ್‌ ಉದ್ಯಮದ ನಿರೀಕ್ಷೆ ಹೆಚ್ಚಿಸಿದೆ.

LEAVE A REPLY

Connect with

Please enter your comment!
Please enter your name here