ಭಾವನಾ ಮೆನನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಹಂಟ್‌’ ಮಲಯಾಳಂ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ನಿಖಿಲ್‌ ಆನಂದ್‌ ಚಿತ್ರಕಥೆ ರಚಿಸಿರುವ ಚಿತ್ರವನ್ನು ಶಾಜಿ ಕೈಲಾಸ್‌ ನಿರ್ದೇಶಿಸಿದ್ದಾರೆ. ಮಲಯಾಳಂ ಚಿತ್ರರಂಗಕ್ಕೆ ಮರಳಿದ ನಂತರ ಭಾವನಾ ನಟಿಸಿರುವ ಎರಡನೆಯ ಚಿತ್ರವಿದು.

ಶಾಜಿ ಕೈಲಾಸ್‌ ನಿರ್ದೇಶನದ ‘ಹಂಟ್‌’ ಮಲಯಾಳಂ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಭಾವನಾ ಮೆನನ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕ್ರೈಂ – ಥ್ರಿಲ್ಲರ್‌ ಚಿತ್ರವಿದು. ಚಿತ್ರಕಥೆ ನಿಖಿಲ್ ಆನಂದ್ ಅವರದು. ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯೆ ಮತ್ತು ಪೊಲೀಸ್‌ ಕಾರ್ಯಾಚರಣೆಯ ಸುತ್ತ ಹೆಣೆದ ಚಿತ್ರಕಥೆ. ಚಿತ್ರದಲ್ಲಿ ಭಾವನಾ ಡಾ. ಕೀರ್ತಿ ಪಾತ್ರ ನಿರ್ವಹಿಸಿದ್ದಾರೆ. ರೆಂಜಿ ಪಣಿಕ್ಕರ್, ಅಜ್ಮಲ್ ಅಮೀರ್, ಅನು ಮೋಹನ್‌, ರಾಹುಲ್ ಮಾಧವ್, ಅದಿತಿ ರವಿ, ನಂದು ಮತ್ತು ಚಂದುನಾಧ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜೋರಾದ ಕಿರುಚಾಟದ ಜೊತೆಗೆ ಅಜ್ಜಿ-ಮೊಮ್ಮಗಳ(ಭಾವನಾ) ಸಂಭಾಷಣೆಯಿಂದ ಆರಂಭವಾಗುವ ಟ್ರೈಲರ್‌ ಅಕ್ಕ – ತಮ್ಮ ಇಬ್ಬರು ಪ್ರೀತಿಯಿಂದ ಮಾತನಾಡುತ್ತಾ ಜಗಲಿ ಮೇಲೆ ಕುಳಿತಿರುವುದನ್ನು ತೋರಿಸಿದೆ.

ಟೇಬಲ್‌ ಟೆನ್ನಿಸ್‌ ಬಾಲಿನ ಹೊಡೆತದಿಂದಾಗಿ ಮೃತಪಟ್ಟಿದ್ದ ಒಬ್ಬ ವ್ಯಕ್ತಿಯ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದರ ಕಾರ್ಯಾಚರಣೆಯಲ್ಲಿ ಪೊಲೀಸರಿಗೆ ಸಹಾಯ ಮಾಡುವ ಕೀರ್ತಿ ಗೊಂದಲದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಆ ಆತ್ಮದ ಕೋಪಕ್ಕೆ ಗುರಿಯಾಗುತ್ತಾಳೆ. ಚಿತ್ರವನ್ನು Goodwill Entertainments ಬ್ಯಾನರ್‌ ಅಡಿ ಕೆ ರಾಧಾಕೃಷ್ಣನ್‌ ನಿರ್ಮಿಸಿದ್ದು, ಕೈಲಾಸ್‌ ಮೆನನ್‌ ಸಂಗೀತ ಸಂಯೋಜಿಸಿದ್ದಾರೆ. ಜಾಕ್ಸನ್‌ ಜಾನ್ಸನ್‌ ಛಾಯಾಗ್ರಹಣ, A R ಅಖಿಲ್‌ ಸಂಪಾದನೆ, ಬೋಬನ್‌ ಕಲಾ ನಿರ್ದೇಶನ ಚಿತ್ರಕ್ಕಿದೆ. ಈ ಐದು ವರ್ಷಗಳಲ್ಲಿ ‘ಹಂಟ್’ ಚಿತ್ರವು ಭಾವನಾ ಅವರ ಎರಡನೇ ಮಲಯಾಳಂ ಚಿತ್ರವಾಗಿದೆ. ಇತ್ತೀಚಿಗೆ ಬಿಡುಗಡೆಯಾದ ‘ಎನ್ಟಿಕಕ್ಕೋಕ್ಕೋರು ಪ್ರೇಮಂಡರನ್’ ಕಾಮಿಡಿ – ಡ್ರಾಮಾ ಚಿರದಲ್ಲಿ ಶರಾಫುದ್ದೀನ್ ಜೊತೆ ಅವರು ನಟಿಸಿದ್ದರು.

LEAVE A REPLY

Connect with

Please enter your comment!
Please enter your name here